1,566 total views
ಕನಸಿನ ಭಾರತ ದೇಶದ ಪತ್ರಿಕಾರಂಗ ಇತಿಹಾಸದಲ್ಲಿ ವಿನೂತನ ಪ್ರಯತ್ನ ಇದಾಗಿದೆ. ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಮಾಧ್ಯಮದ ಮೂಲಕ ಜನಜಾಗೃತಿ, ದೇಶಾಭಿಮಾನ, ಭ್ರಷ್ಠಾಚಾರ ನಿರ್ಮೂಲನೆ, ಸಮಾನತೆಯ ಆಶೆಯಗಳೊಂದಿಗೆ ಕನಸಿನ ಭಾರತವು 2011 ರಿಂದ ನಿರಂತರ ಕಾರ್ಯ ನಿರ್ವಹಿಸುತ್ತಿದೆ. ಕನಸಿನ ಭಾರತವು ಸಮೂಹ ಸಂಸ್ಥೆಯಾಗಿದ್ದು,ಇಲ್ಲಿ ಯಾರು ಕೆಲಸಗಾರರು ಇರುವುದಿಲ್ಲ. ಈ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬರು ಪಾಲುದಾರರು. ಈ ಸಂಸ್ಥೆಯಲ್ಲಿ ಭಾಗವಹಿಸುವವರು ತಮ್ಮ ಜ್ಞಾನ, ಹೊಸ ಪ್ರಯೋಗ ಅಥವಾ ದೇಶದ ಕನಸನ್ನು ನನಸಾಗಿಸಲು ವೇದಿಕೆ ಆಗಿದೆ. ಬಲಿಷ್ಠ ಭಾರತ ಕಟ್ಟಲು ದೇಶಾಭಿನ ಮತ್ತು ಜನಜಾಗೃತಿಯಿಂದ ಮಾತ್ರ ಸಾಧ್ಯ ಈ ದಿಶೆಯಲ್ಲಿ ಯುವ ಸಮುದಾಯದ ಬೆಂಬಲದೊಂದಿಗೆ ಬದಲಾವಣೆಗಾಗಿ ಈ ಪ್ರಯತ್ನ. ಕನಸಿನ ಭಾರತ (ಮಾಸ/ಪಾಕ್ಷಿಕ/ವಾರ ) ಪತ್ರಿಕೆಗಳು ನಡೆಯುತ್ತಿದ್ದು, ಸದ್ಯದಲ್ಲೇ ದಿನ ಪತ್ರಿಕೆ ಪ್ರಾರಂಭಿಸಲಾಗುವುದು. Website ಜೊತೆಗೆ Web TV ಪ್ರಾರಂಭಿಸಲಾಗಿದೆ. ಸುದ್ಧಿಯನ್ನು ಆಳುವವರಿಂದ ಜನರಿಗೆ ಮತ್ತು ಜನ ಸಾಮಾನ್ಯರ ನೋವು ನಲಿವುಗಳ ಕಷ್ಟಗಳ ಸುದ್ಧಿಯನ್ನು ಆಳುವವರಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ವಿಷಯ- ವಿಚಾರಗಳ ವಿಶ್ಲೇಷಣೆ, ಪ್ರತಿಭೆಗಳನ್ನು ನಾಡಿಗೆ ಪರಿಚಯಿಸುವ ಮೂಲಕ ನಾಡಿನ ಪ್ರತಿಭೆಗಳನ್ನು ಅನಾವರಣ ಮಾಡಲಾಗುತ್ತದೆ. ಇಂತಹ ಹಲವಾರು ದೃಷ್ಟಿಕೋನದ ಈ ಸಮೂಹದಲ್ಲಿ ತಾವು ಭಾಗವಹಿಸಿ ಈ ಪ್ರಯತ್ನಕ್ಕೆ ತಮ್ಮ ಬೆಂಬಲದೊಂದಿಗೆ ಭವ್ಯ ಭಾರತದ ಕನಸು ನನಸಾಗಿಸಿ.
ಅಜೀವ ಸದಸ್ಯತ್ವ :: ಕನಸಿನ ಭಾರತ ಪತ್ರಿಕೆಯಲ್ಲಿ ಸುದ್ಧಿ, ಲೇಖನಗಳ ಜೊತೆಗೆ ವಿಶ್ಲೇಷಣೆ ಆಸಕ್ತ ಓದುಗರಿಗೆ ಹಲವಾರು ಮೂಲಗಳಿಂದ ತಲುಪಿಸಲಾಗುತ್ತದೆ. ಕನಸಿನ ಭಾರತ ಮಾಸ ಪತ್ರಿಕೆಯು ದೇಶಾಭಿಮಾನ, ಭಾಷಾಭಿಮಾನ, ಇತಿಹಾಸ, ಸಂಸ್ಕøತಿ, ಕೃಷಿ, ಆಧ್ಯಾತ್ಮ, ಕಾನೂನು, ರಾಜಕೀಯ ಮಹಿಳಾ ಚಿಂತನೆಗಳು, ವೈಜ್ಞಾನಿಕ, ಶಿಕ್ಷಣ,ವ್ಯಾಪಾರ, ವ್ಯವಹಾರ,ಚಲನಚಿತ್ರ ಮತ್ತು ಕ್ರೀಡೆ ಇಂತಹ ಹಲವಾರು ವಿಶೇಷಗಳ ಬೃಹತ ಆಗರ, ಇಂತಹ ಮಾಸ ಪತ್ರಿಕೆಯನ್ನು ಜೀವನ ಪರ್ಯಂತ ಓದಲು ಮತ್ತು ಸಂಗ್ರಹ ಯೋಗ್ಯ ಮಾಹಿತಿ, ಆಧಾರದ ಈ ಪತ್ರಿಕೆಗೆ ಚಂದಾದಾರ ಆಗುವ ಮೂಲಕ ಸಮಾಜಸೇವೆ ಮಾಡಬಹುದು.
ಕನಸಿನ ಭಾರತ ಮಾಸ – 6150:: ಒಂದು ಸಾರಿ 6150 ಹಣ ನೀಡಿ ಕನಸಿನ ಭಾರತ ಮಾಸ ಪತ್ರಿಕೆಯ ಸದಸ್ಯತ್ವ ಪಡೆದರೆ, ಜೀವನ ಪರ್ಯಂತ ಪತ್ರಿಕೆ ಮನೆ ಬಾಗಿಲಿಗೆ ಅಂಚೆ/ಕೊರಿಯರ್/ನೇರವಾಗಿ ತಲುಪುತ್ತದೆ. ಅದ್ಬುತವಾದ ವಿಚಾರಗಳ ತಿಳಿದುಕೊಳ್ಳುವ ಮೂಲಕ ಜ್ಞಾನದಾಹ ತೀರಿಸಿಕೊಳ್ಳಬಹುದು. ಈ ಯೋಜನೆಯು ಸದ್ಯ ಕರ್ನಾಟಕ ರಾಜ್ಯದ 16,000 ಜನರಿಗೆ ಮಾತ್ರ ದೊರೆಯುತ್ತದೆ. 16000 ಜನರ 6150 ಹಣವನ್ನು ಬ್ಯಾಂಕಿನಲ್ಲಿ ಎಫ್.ಡಿ ಇಟ್ಟು ಅದರಿಂದ ಬರುವ ಲಾಭದಲ್ಲಿ ಪತ್ರಿಕೆ ಪ್ರಕಟಣೆ,ಓದುಗರಿಗೆ ತಲುಪಿಸುವುದ ಜೊತೆಗೆ ಪ್ರತಿ ವರ್ಷ ಒಂದು ಸಾರಿ 2 ಸೈನಿಕರು ಮತ್ತು 3 ರೈತರಿಗೆ ತಲಾ 25,000 ಗೌರವ ಹಣದೊಂದಿಗೆ ಸನ್ಮಾನಿಸಲಾಗುವುದು. ಸೈನಿಕರ ದೇಶ ಸೇವೆ ಮತ್ತು ರೈತರ ಶ್ರಮವನ್ನು ಆಧುನಿಕ ಜಗತ್ತಿನ ಯುವ ಪಿಳಿಗೆಗೆ ಪರಿಚಯಿಸುವ ಒಂದು ಪ್ರಯತ್ನ. ಸೈನಿಕರು ಮತ್ತು ರೈತರು ನಮ್ಮ ಎರಡು ಕಣ್ಣುಗಳಿದಂತೆ ಪ್ರೋತ್ಸಾಹ, ದೇಶಾಭಿಮಾನ ಮೂಡಿಸುವ ಪ್ರಾಮಾಣಿಕ ಪ್ರಯತ್ನ. ರಾಜ್ಯದ ಯಾವುದೇ ಸೈನಿಕರಿಗೆ ಗಡಿಯಲ್ಲಿ ತೊಂದರೆ ಆದಾಗ ತುರ್ತು ಸಹಾಯ ಮಾಡಲಾಗುವುದು. ಗರಿಷ್ಠ 50,000 ವರೆಗೆ ಸಹಾಯ ಮಾಡುವ ಜೊತೆಗೆ ಅಂತಹ ವಿಪತ್ತು ಸಮಯದಲ್ಲಿ ಕುಟುಂಬದ ನೆರವಿಗೆ ನಿಲ್ಲುವುದು. ಜ್ಞಾನದಾಹ ನಿಗಿಸುವ ಪತ್ರಿಕೆ ಜೊತೆಗೆ ದೇಶಾಭಿಮಾನದ ಸಮಾಜ ಸೇವೆಗೆ ತಮ್ಮ ಸಹಾಯ ಮಾಡಿ.
ಚಂದಾದಾರರಿಗೆ ಲಾಭಗಳು
1) ಜೀವನ ಪರ್ಯಂತ ಮಾಸ ಪತ್ರಿಕೆ ದೊರೆಯುತ್ತದೆ.
2) ವರ್ಷದಲ್ಲಿ ಒಂದು ಬಾರಿ ತಮ್ಮ ಅಥವಾ ತಾವು ಸೂಚಿಸಿದವರ ಹುಟ್ಟು ಹಬ್ಬ ಅಥವಾ ಮದುವೆ ವಾರ್ಷಿಕೋತ್ಸವದ ಶುಭಾಷಗಳನ್ನು ಉಚಿತವಾಗಿ ಪ್ರಕಟಿಸಲಾಗುವುದು.
3) ಚಂದಾದಾರರ ಜಾಹೀರಾತುಗಳ ಮೇಲೆ ಶೇ. 30ರಷ್ಟು ರಿಯಾಯಿತಿ ನೀಡಲಾಗುವುದು.
4) ವಾರ್ಷಿಕ ಪ್ರಶಸ್ತಿ ಕಾರ್ಯಕ್ರಮಕ್ಕೆ ವಿಶೇಷವಾಗಿ ಆಹ್ವಾನಿಸಲಾಗುವುದು.
ವಾರ್ಷಿಕ ಚಂದಾ::
ಕನಸಿನ ಭಾರತ ವಾರ, ಪಾಕ್ಷಿಕ ಮತ್ತು ಮಾಸ ಪತ್ರಿಕೆಗಳು ಒಂದು ವರ್ಷ ಕಾಲ ಅಂಚೆ/ಕೊರಿಯರ್/ನೇರವಾಗಿ ತಮ್ಮ ಮನೆ/ಕಛೇರಿಗಳಿಗೆ ಕಳಿಸಲಾಗುವುದು. ಒಂದು ತಿಂಗಳಿಗೆ ( 1 ಮಾಸ, 2 ಪಾಕ್ಷಿಕ ಮತ್ತು 4 ವಾರ ) ಪತ್ರಿಕೆಗಳಂತೆ ವರ್ಷಪೂರ್ತಿ ಕಳಿಸಲಾಗುತ್ತದೆ.ಜ್ಞಾನ, ಮಾಹಿತಿ ಮತ್ತು ಸುದ್ಧಿಗಾಗಿ ಚಂದಾದಾರರಾಗಿ ಪತ್ರಿಕೆ ಬೆಳವಣೆಗೆಗೆ ಸಹಕರಿಸಿ.
ವಾರ ಪತ್ರಿಕೆ : ಸರ್ಕಾರಿ,ಅರೆ ಸರ್ಕಾರಿ ಮತ್ತು ಸಾರ್ವಜನಿಕ ವಲಯಗಳ ಭ್ರಷ್ಠಾಚಾರಗಳು ಅದರಿಂದ ದೇಶಕ್ಕೆ ಆಗುವ ನಷ್ಠಗಳು, ಜನರಿಗೆ ಮೋಸ ಮಾಡುವವರ ಬಗ್ಗೆ,ವ್ಯವಸ್ಥೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಬಗ್ಗೆ ಇಂತಹ ಹಲವಾರು ಮೋಸ- ವಂಚನೆಗಳಿಂದ ದೇಶದ ಆರ್ಥಿಕ ವ್ಯವಸ್ಥೆಯ ಮೇಲೆ ಆಗುವ ಪರಿಣಾಮಗಳನ್ನು ತಪಿಸುವ ಉದ್ದೇಶದಿಂದ ಭ್ರಷ್ಠಾಚಾರ ಮುಕ್ತ ಭವ್ಯ ಭಾರತವನ್ನು ಕಟ್ಟುವ ಪ್ರಾಮಾಣಿಕ ಪ್ರಯತ್ನವೇ ಈ ವಾರ ಪತ್ರಿಕೆಯ ತನಿಖಾ ವರದಿ ಆಗುತ್ತದೆ, ಯಾವುದೇ ವಿಭಾಗದ ಭ್ರಷ್ಠಾಚಾರವನ್ನು ನಾವು ಸಹಿಸುವುದಿಲ್ಲ.
ಪಾಕ್ಷಿಕ ಪತ್ರಿಕೆ : ಉದ್ಯೋಗ ಮಾಹಿತಿ (ಸರ್ಕಾರಿ/ಖಾಸಗಿ) ಸ್ಥಳೀಯ ಸಮಸ್ಯೆಗಳು, ಜನರ ಆಶೋತ್ತರಗಳು, ಸರ್ಕಾರದ ಯೋಜನೆಗಳು, ಯುವ ಜನತೆಗೆ ಮಾರ್ಗದರ್ಶನ, ಸುದ್ಧಿ, ವಿಶ್ಲೇಷಣೆ, ಪರಿಚಯ ಇನ್ನು ಮುಂತಾದ ವಿಚಾರಗಳ ಸಂಚಿಕೆ ಆಗಿರುತ್ತದೆ.
ಜಾಹೀರಾತು : ಜಾಹೀರಾತು ಮಾಧ್ಯಮದ ಜೀವಾಳ. ಅಭಿವೃದ್ಧಿ ಜೊತೆಗೆ ವಸ್ತು, ವ್ಯಕ್ತಿ, ಸಂಸ್ಥೆ ವಿಚಾರಗಳ ಪ್ರಚಾರವು ಅತ್ಯಂತ ಅವಶ್ಯಕತೆ ಇದೆ. ಯಾವುದೇ ಉತ್ಪನ್ನದ ಜಾಹೀರಾತು ಇಲ್ಲದೇ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಲಾರದು ಈ ಕಾರಣದಿಂದ ಸರ್ಕಾರ ಮತ್ತು ಕಂಪನಿಗಳು, ರಾಜಕಾರಣಿಗಳು ಸಂಘ-ಸಂಸ್ಥೆಗಳು ಸಾಕಷ್ಟು ಜಾಹೀರಾತನ್ನು ನೀಡುತ್ತಿದ್ದು ಆದರೆ ಎಲ್ಲ ಮಾಧ್ಯಮಕ್ಕಿಂತ ಮುದ್ರಣ ಮಾಧ್ಯಮದ ಜಾಹೀರಾತು ವಿಶ್ವಾರ್ಹತೆ ಮತ್ತು ಪರಿಣಾಮದಿಂದ ಕೂಡಿರುತ್ತದೆ ಅದರಲ್ಲೂ ಕನಸಿನ ಭಾರತ ಯಾವುದೇ ಜಾತಿ ಧರ್ಮ ಮತ್ತು ರಾಜಕೀಯ ಪಕ್ಷದ ಪ್ರತೀಕ ಅಲ್ಲದೇ ದೇಶದ ಅದರಲ್ಲೂ ದೇಶಾಭಿಮಾನ ಬೆಳೆಸುವ ಮಾದ್ಯಮ ಆಗಿರುವುದರಿಂದ ಕುಟುಂಬದ ಪತ್ರಿಕೆ ಕೂಡ ಆಗಿರುವುದರಿಂದ ಹೆಚ್ಚು ಜನರಿಗೆ ಜಾಹೀರಾತು ತಲುಪುತ್ತದೆ. ಆಧುನಿಕ ಯುಗದ ಜಾಹೀರಾತು ಆಯಾಮಗಳನ್ನು ಕೂಡ ಪರಿಚಯಿಸುತ್ತದೆ, ಹೊಸ ದೃಷ್ಟಿಕೋನದಲ್ಲಿ ಪ್ರಚಾರಕ್ಕೆ ಸಲಹೆ-ಸೂಚನೆ ಕೂಡ ಕೊಡಲಾಗುತ್ತದೆ. ಆರೋಗ್ಯ,ಕಾನೂನು,ಲೇಖನ ಮತ್ತು ದೇಶಾಭಿಮಾನ ಬೆಳೆಸುವಂತಹ ಮಾಧ್ಯಮವು ಸಾರ್ವಕಾಲಿಕ ಜನರ ಮೆಚ್ಚುಗೆ ಮತ್ತು ಸಂಗ್ರಹವಾಗುವುದರಿಂದ ಜಾಹೀರಾತು ಹೆಚ್ಚು ಜನರಿಗೆ ತಲುಪಿ ಉತ್ತಮ ಪಲಿತಾಂಶ ಬರುತ್ತದೆ. ಈಗಾಗಲೇ 8 ವರ್ಷದಿಂದ ಪತ್ರಿಕೆಯು ಉಚಿತವಾಗಿ ಲಕ್ಷಾಂತರ ಜನರಿಗೆ ತಲುಪುತ್ತಿದೆ. ಆಸಕ್ತ ಓದುಗರು, ಗ್ರಂಥಾಲಯಗಳು, ಶಾಲಾ_ಕಾಲೇಜು, ಸಾರ್ವಜನಿಕ ಸ್ಥಳಗಳಿಗೆ ಉಚಿತವಾಗಿ ನೀಡುತ್ತಾ ಬಂದಿದ್ದೇವೆ, ಈಗ ಇನ್ನು ಒಂದು ಹೆಜ್ಜೆ ಮುಂದೆ ಸಾಗಿ 16,000 ಚಂದಾದಾರನಾಗಿಸಿ, ಕರ್ನಾಟಕ ಮನೆ ಮಾತನಾಗಿಸಲು ಕನಸಿನ ಭಾರತ ಎಲ್ಲ ರೀತಿಯ ಸಿದ್ದತೆಯನ್ನು ಮಾಡಿಕೊಂಡಿದೆ. ಪತ್ರಿಕೆ ಬೆಳವಣೆಗೆಗೆ ಮತ್ತು ತಮ್ಮ ಪ್ರಚಾರಕ್ಕಾಗಿ ದಯವಿಟ್ಟು ಜಾಹೀರಾತು ನೀಡಿ ಸಹಕರಿಸಿ.
ನಮ್ಮೊಂದಿಗೆ ನೀವು. ಕನಸಿನ ಭಾರತ ಅನ್ನು ದೇಶಾಭಿಮಾನವುಳ್ಳ ಯುವ ಪಡೆ ಕಟ್ಟಿ ಬೆಳೆಸುತ್ತಿದೆ, ದೇಶಾಭಿಮಾನ, ಭಾರತ ಭವಿಷ್ಯದ ಕನಸು ಕಾಣುವ ಪ್ರತಿಯೊಬ್ಬರು ಈ ವ್ಯವಸ್ಥೆಯಲ್ಲಿ ಭಾಗಿ ಆಗಬಹುದು. ನಮ್ಮಲ್ಲಿ ತಾವು ವರದಿಗಾರರಾಗಿ, ಮಾಹಿತಿ ನೀಡುವವರಾಗಿ, ಲೇಖನ,ಕಥೆ,ಕವನ,ಪರಿಚಯದಂತಹ ಬರಹಗಳನ್ನು ಮತ್ತು ಸ್ಥಳೀಯ ಸಮಸ್ಯೆಗಳು ಮತ್ತು ಸ್ಥಳೀಯ ವಿಶೇಷತೆಗಳ ಕುರಿತ ಸುದ್ಧಿ/ಲೇಖನಗಳನ್ನು ಬರೆಯಬಹುದು. ಪತ್ರಿಕೆಯ ವಾರ್ಷಿಕ ಚಂದಾ/ ಅಜೀವ ಸದಸ್ಯತ್ವ ಅಥವಾ ಪೋಷಕರು ಗೌರವ ಪೋಷಕರು ಆಗಬಹುದು. ಕನಸಿನ ಭಾರತ ಸಮೂಹದಲ್ಲಿ ವರದಿಗಾರರು, ಬೇರೆ-ಬೇರೆ ವಿಭಾಗದಲ್ಲಿ ಕೆಲಸ ಮಾಡುವ ಎಲ್ಲರೂ ಪಾಲುದಾರರಾಗಿರುತ್ತಾರೆ. ತಾವು ಕೂಡ ತಮ್ಮ ಬಿಡುವಿನ ಸಮಯದಲ್ಲಿ ಪತ್ರಿಕೆಯ ಕೆಲಸ ಮಾಡಬಹುದು. ದುಡಿಮೆಗೆ ತಕ್ಕ ಪ್ರತಿಫಲ ಜೊತೆಗೆ ದೇಶಾಭಿಮಾನ ಬೆಳೆಸುವ ಪ್ರಯತ್ನದಲ್ಲಿ ತಮ್ಮ ಸೇವೆಯೂ ಸೇರುತ್ತದೆ. ಬನ್ನಿ ಸೇರಿ, ಬಲಿಷ್ಠ ಭಾರತ ಕಟ್ಟಲು ಪ್ರತಿಯೊಬ್ಬರು ಕೈ ಜೋಡಿಸಿ.