![]()
ಹೊಸಪೇಟೆ. ವಿಜಯನಗರ ಜಿಲ್ಲೆಯ ವಿವಿಧ ತಾಲೂಕುಗಳ ಸಮಸ್ಯೆ ಪರಿಹರಿಸುವಂತೆ ವಿಜಯನಗರ ಜಿಲ್ಲೆಯ ಕೊಟ್ಟೂರು.ಈ ಭಾಗದ ಜನರ ಹಲವು ದಶಕಗಳ ಹೋರಾಟ ಫಲವಾಗಿ 2017.18ನೇ ಸಾಲಿನ ರಾಜ್ಯ ಬಜೆಟ್ ನಲ್ಲಿ ತಾಲೂಕು ಘೋಷಣೆಯಾಯಿತು ಕೊಟ್ಟೂರು ತಾಲೂಕು ಘೋಷಣೆಯಾಗಿ ಏಳು ವರ್ಷ ಕಳೆದರೂ ತಾಲೂಕಿನಲ್ಲಿ ತಾಲೂಕು ಕೇಂದ್ರಗಳಲ್ಲಿ ಇರಬೇಕಾದ ಇಲಾಖೆಗಳು ಇಲ್ಲದಿರುವುದು ಜನರಿಗೆ ತೊಂದರೆ ಯಾಗಿದೆ.ಹೂವಿನಹಡಗಲಿ ತಾಲೂಕಿನಲ್ಲಿ ರೈತರು ಅಕ್ರಂ ಸಕ್ರಮ ವಿದ್ಯುತ್ ಸಂಪರ್ಕ ಅರ್ಜಿ ಸಲ್ಲಿಸಿ ಹತ್ತು ವರ್ಷಗಳು ಕಳೆದರೂ ಇನ್ನೂ ಸಂಪೂರ್ಣವಾಗಿ ವಿದ್ಯುತ್ ಸಂಪರ್ಕ ಕಲ್ಪಿಸುವಲ್ಲಿ ವಿಪುಲವಾಗಿದೆ.ಹಾಗೂ ರೈತರು ಅಕ್ರಂ ಸಕ್ರಮ ಭೂಮಿಗಾಗಿ ಅರ್ಜಿ ಸಲ್ಲಿಸಿ ಸುಮಾರು ವರ್ಷಗಳಿಂದ ವಿಳಾಂಭವಾಗಿವೆ ಎಂದರು.ಸಿಪಿಐ ಪಕ್ಷದ ಜಿಲ್ಲಾ ಕೊಶಾದ್ಯಕ್ಷ ಹಲಗಿ ಸುರೇಶ ಮಾತನಾಡಿ ಹಗರಿ ಬೋಮ್ಮನಹಳ್ಳಿ ತಾಲೂಕಿನ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರು ಸೇರಿದಂತೆ ಮೂವತ್ತಕ್ಕೂ ಹೆಚ್ಚು ಸಿಬ್ಬಂದಿ ಕೊರತೆಯಿದೆ ಕೂಡಲೇ ಸಿಬ್ಬಂದಿ ಒದಗಿಸಬೇಕು.ಹರಪನಹಳ್ಳಿ ತಾಲೂಕಿನ ಹಲವಾಗಲೂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗರ್ಭಗುಡಿ ಗ್ರಾಮದ ಸರ್ವೆ ನಂಬರ್ 157/ಡಿ/1ಜಮಿನನ್ನು ಶ್ರೀಮತಿ ಬೇಲೂರು ಮಲ್ಲಮ್ಮ ಲೇಟ್ ಬೇಲೂರು ಶಿವರಾಜಪ್ಪ ಇವರಿಂದ ಪುನರ್ವಸತಿಗಾಗಿ ರಾಜ್ಯ ಪಾಲರ ಪರವಾಗಿ ತಹಶೀಲ್ದಾರ್ ಹರಪನಹಳ್ಳಿ ಇವರಿಗೆ 1ಎಕರೆ 9ಸೇಂಟ್ಸ ಕರಿದಿಸಲಾಗಿದೆ ಕೂಡಲೇ ಹರಪನಹಳ್ಳಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ತಾಲೂಕು ಪಂಚಾಯತ್ ಹೆಸರಲ್ಲಿ ಖಾತೆ ಬದಲಾವಣೆ ಮಾಡಿ ಬಡ ಜನರ ವಸತಿಗೆ ಸೌಲಭ್ಯಕ್ಕೆ ಮುಂದಾಗಬೇಕೆಂದರು.ಸಿಪಿಐ ಪಕ್ಷದ ಹರಪನಹಳ್ಳಿ ತಾಲ್ಲೂಕು ಕಾರ್ಯದರ್ಶಿ ರಮೇಶ್ ನಾಯ್ಕ ಮಾತನಾಡಿ ಹರಪನಹಳ್ಳಿ ತಾಲ್ಲೂಕಿನ ತೆಲಗಿ ವ್ಯಾಪ್ತಿಯಲ್ಲಿ ಬರುವ ಕೆ.ಕಲ್ಲಹಳ್ಳಿ ಕಂದಾಯ ಗ್ರಾಮದ ಸರ್ವೆ ನಂಬರ್ 399ರ ಒಟ್ಟು ವಿಸ್ತೀರ್ಣ 397.52ಎಕರೆ ಭೂಮಿ ಮೂಲತಹ ಸರ್ಕಾರಿ ಜಮೀನು ಆಗಿದ್ದು ಇದನ್ನು ಭೂ ಮಾಪನ ಇಲಾಖೆ ಹರಪನಹಳ್ಳಿ ಇವರು ನಕ್ಷೆ ಸೃಷ್ಟಿಸಿರುತ್ತಾರೆ ಸದರಿ ನಕ್ಷೆಯನ್ನು ರದ್ದು ಪಡಿಸಿ ತಾಲೂಕು ಆಡಳಿತಕ್ಕೆ ಒಪ್ಪಿಸಬೇಕೆಂದರು.ಹಡಗಲಿ ತಾಲೂಕು ಸಿಪಿಐ ಪಕ್ಷದ ತಾಲೂಕು ಕಾರ್ಯದರ್ಶಿ ಬಿ.ಜಂಗ್ಲಿಸಾಬ್ ಮಾತನಾಡಿ ಹರಪನಹಳ್ಳಿ ತಾಲ್ಲೂಕಿನ ಹೊಸಕೋಟೆ ಗ್ರಾಮದಲ್ಲಿ ಇರುವ ಪ್ರಾಥಮಿಕ ಗ್ರಾಮಿಣ ಕೃಷಿ ಸಹಕಾರ ಸಂಘ.ನಿ.ದಲ್ಲಿನ ಪಿಗ್ಮಿ ಠೇವಣಿ ದಾರರ ಹಣ ವಂಚನೆ ಯಾಗಿದ್ದು ಕೂಡಲೇ ವಂಚನೆ ಯಾದ ಹಣವನ್ನು ಕೂಡಲೇ ರೈತರಿಗೆ ಹಿಂದಿರುಗಿಸಿ.ವಂಚನೇ ಮಾಡಿದವರಿಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದರು.ಸಿಪಿಐ ಪಕ್ಷದ ಕೊಟ್ಟೂರು ತಾಲೂಕು ಕಾರ್ಯದರ್ಶಿ ರೇಣುಕಮ್ಮ ಮಾತನಾಡಿ ಜಿಲ್ಲೆಯು ಮಾಜಿ ದೇವದಾಸಿ ಮಹಿಳೆಯರಿಗೆ ಐದಾರು ತಿಂಗಳುಗಳಿಂದ ಮಾಶಾಸನ ಬಂದಿರುವುದಿಲ್ಲ.ಕಳೆದ ವರ್ಷಗಳಿಂದ ಸಾಲ ಸೌಲಭ್ಯ ಆಶ್ರಯ ನಿವೇಶನ ನಿಡುವಲ್ಲಿ ಸರ್ಕಾರ ವಿಫಲವಾಗಿದ್ದು ಕೂಡಲೆ ದೇವದಾಸಿ ಮಹಿಳೆಯರಿಗೆ ಮಾಶಾಸನ ಮತ್ತು ನಿವೇಶನವನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಮಾತನಾಡಿದರು ಪ್ರತಿಭಟನೆಯಲ್ಲಿ.ಸಿಪಿಐ ಪಕ್ಷದ ಹರಪನಹಳ್ಳಿ ತಾಲ್ಲೂಕು ಸಹಕಾರ್ಯದರ್ಶಿ ಬಳಿಗನೂರು ಕೊಟ್ರೇಶ್.ಭಾಗ್ಯಮ್ಮ.ನಿಲಮ್ಮ.ಹಾಲೇಶ.ಗಂಗಾಧರ್.ಇತರರು ಭಾಗವಹಿಸಿದ್ದರು ನಂತರ ಜಿಲ್ಲಾಧಿಕಾರಿಗಳ ಪರವಾಗಿ ಹೊಸಪೇಟೆ ತಾಲ್ಲೂಕು ತಹಶೀಲ್ದಾರ್ ಶಿವರಾಜ್ ರವರಿಗೆ ಮನವಿ ಸಲ್ಲಿಸಲಾಯಿತು


























































