![]()
ಹುಣಸಗಿಯಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಪ್ರಜಾಪ್ರಭುತ್ವದ ಮೂಲ ಅಸ್ತಿತ್ವವಾದ ಮತದಾನದ ಹಕ್ಕಿನ ಮತಗಳ ತನಕ ವಿರುದ್ಧ ಅಭಿಯಾನ ರಕ್ಷಣೆಯ ಉದ್ದೇಶದಿಂದ, ಜಿಲ್ಲಾ ಸಫಾಯಿ ಕರ್ಮಚಾರಿ ವಿಭಾಗದಿಂದ ಮತಗಳ್ಳತನದ ವಿರುದ್ದ ಸಹಿ ಸಂಗ್ರಹ ಅಭಿಯಾನ ನಡೆಯಿತು.ಈ ಅಭಿಯಾನದ ಮೂಲಕ ಮತದಾನದ ನೈಜತೆಯನ್ನು ಕಾಪಾಡುವ, ಜನರ ಹಕ್ಕುಗಳ ರಕ್ಷಣೆಗೆ ಧ್ವನಿಯೆತ್ತುವ, ಹಾಗೂ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ನಾಗರಿಕರು ಒಟ್ಟಾಗಿ ಹೋರಾಟ ನಡೆಸಬೇಕು ಎಂದು ಸಫಾಯಿ ಕರ್ಮಚಾರಿ ವಿಭಾಗದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಬಿಲ್ಲವ್ ಹೇಳಿದರು.
ಪಟ್ಟಣದ ಜನತಾ ಕಾಲೋನಿಗೆ ಬೇಟಿ ನೀಡಿ ಕಾಂಗ್ರೆಸ್ ಕಾರ್ಯಕರ್ತರಿಂದ ಸಹಿ ಸಂಗ್ರಹ ಮಾಡಿ ಮಾತನಾಡಿದ ಅವರು, ಮತಗಳ್ಳನದಂತಹ ವಿಷಯಗಳ ಬಗ್ಗೆ ಕಾರ್ಯಕರ್ತರು ಎಚ್ಚರಿಕೆ ವಹಿಸಬೇಕು. ಮತಗಳ್ಳತನ ಖಂಡಿಸಿ ಹಾಗೂ ಸಂವಿಧಾನ ಉಳಿಸಿ ಅಭಿಯಾನವನ್ನು ದೇಶದಲ್ಲಿ ಕಾಂಗ್ರೆಸ್ ಪಕ್ಷ ಮಾಡುತ್ತಿದೆ. ಮತಗಳ್ಳತನದಿಂದ ಒಂದು ಹಳ್ಳಿಯ ಹಕ್ಕು, ಒಂದು ಕುಟುಂಬದ ಭವಿಷ್ಯ, ರೈತನ ಕನಸು ಕಳೆದು ಹೋಗುತ್ತದೆ.
ಮತಗಳ್ಳತನ ನಿಲ್ಲಿಸಬೇಕು ಹಾಗೂ ಸಂವಿಧಾನ ಉಳಿಸಬೇಕು ಎಂದು ರಾಹುಲ್ ಗಾಂಧಿ ದೇಶಾದ್ಯಂತ ಹೋರಾಟ ಆರಂಭಿಸಿದ್ದಾರೆ. ಇದಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದು ಹೇಳಿದರು* ಈ ಸಂದರ್ಭದಲ್ಲಿ ಪ ಪo ಸದಸ್ಯರಾದ ತಿಪ್ಪಣ್ಣ ಕಡಿಮನಿ ಸಿದ್ದು ಬಾವಿಮನಿ ಸಿದ್ದಾರ್ಥ ಕಟ್ಟಿಮನಿ ನಾಗು ಗ್ಯಾಂಗ್ ಮ್ಯಾನ್ ರವಿ ಗ್ಯಾಂಗ ಮ್ಯಾನ ದೇವು ಬೇವಿನ ಗಿಡದ ಮೌನೇಶ್ ಕಟ್ಟಿಮನಿ ಇತರರು ಉಪಸ್ಥಿತರಿದ್ದರು


























































