![]()
ಸುರಪುರ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಡಿಯಲ್ಲಿ ಲೆಕ್ಕಾ ಪರಿಶೋಧನೆಯ ಉತ್ತಮ ಬ್ಯಾಂಕಿಂಗ್ ಗ್ರೇಡಿಂಗ್ ತರಬೇತಿಯ ಅನುಭವ ಪಡೆಯಬೇಕೆಂದು ಜಿಲ್ಲಾ ನಿರ್ದೇಶಕ ವಸಂತಗೌಡ ಅವರು ಹೇಳಿದರು.ರಂಗಂಪೇಟಿಯ ಜಿವ್ಹೇಶ್ವರ ಕಲ್ಯಾಣ ಮಂಟಪದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಹಸ
ನಾಪುರ ವಲಯದ ಒಕ್ಕೂಟ ಪದಾಧಿಕಾರಿಗಳ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಲೆಕ್ಕಾ ಪರಿಶೋಧನೆಯನ್ನು ತಂತ್ರಜ್ಞಾನದ ಮೂಲಕ ಪರಿಣಾಮಕಾರಿಯಾಗಿ ನಿರ್ವಹಿಸಲು ತರಬೇತಿ ನೀಡಲಾಗುತ್ತದೆ ಎಂದರು. ಕಲಬುರಗಿ ಪ್ರಾದೇಶಿಕ ವಿಭಾಗದ ಲೆಕ್ಕ ಪರಿಶೋಧಕ ಯೋಜನಾಧಿಕಾರಿ ಹರಿಶ್ಚಂದ್ರ ತಾಲೂಕು ಯೋಜನಾಧಿಕಾರಿ ನಾಗೇಶ್ ಎನ್.ಪಿ. ಅವರು ಮಾತನಾಡಿ, ಪದಾಧಿಕಾರಿಗಳು ಹಾಗೂ ಸಂಘದ ಗುಣಮಟ್ಟಗಳನ್ನು ಅಚ್ಚು ಕಟ್ಟಾಗಿ ನಿರ್ವಹಣೆ ಮಾಡುವುದು ಹಾಗೂ ಸಂಘದ ಗ್ರೇಡಿಂಗ್ ಬ್ಯಾಂಕ್ ವ್ಯವಹಾರ ಬಡ್ಡಿ ಲೆಕ್ಕಾಚಾರ ಸ್ಪಷ್ಟವಾದ ಮಾಹಿತಿ ನೀಡಿದರಲ್ಲದೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿಯಲ್ಲಿ ಬಡ ಮಕ್ಕಳಿಗೆ ಸ್ಕಾಲರ್ಶಿಪ್, ನಿರ್ಗತಿಕರಿಗೆ ಮಾಸಾಸನ, ರುದ್ರ ಭೂಮಿಗೆ ಅನುದಾನ, ನಿರ್ಗತಿಕರಿಗೆ ಮನೆ ನಿರ್ಮಾಣಕ್ಕೆ ಅನುದಾನ ನೀಡುತ್ತಿರುವ ಬಗ್ಗೆ ಸವಿಸ್ತಾರವಾಗಿ ವಿವರಿಸುವುದಲ ಜೊತೆಗೆ ಕ್ಷೇತ್ರದ
ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿಯವರ ಬಗ್ಗೆ ಶ್ಲಾಘಿಸಿದರು.ನಗರಸಭೆ ಮಾಜಿ ಅಧ್ಯಕ್ಷೆ ಸರೋಜಾ ಗೂಡೂರ, ಒಕ್ಕೂಟದ ಅಧ್ಯಕ್ಷ ಶ್ರೀನಿವಾಸ ಡೊಳ್ಳೆ, ಶಿವಶರಣಪ್ಪ ಹೆಡಗಿನಾಳ, ನಿಂಗಣ್ಣ ವಗ್ಗರ್ ದೀವಳಗುಡ್ಡ ಸೇರಿದಂತೆ 8 ಒಕ್ಕೂಟದಿಂದ 38 ಪದಾಧಿಕಾರಿಗಳು ವಲಯದ ಮೇಲ್ವಿಚಾರಕರು ಸೇವಾ ಪ್ರತಿ
ನಿಧಿಗಳು ಉಪಸ್ಥಿತರಿದ್ದರು. ಹಸನಾಪುರ ವಲಯದ ಮೇಲ್ವಿಚಾರಕಿ ತ್ರಿವೇಣಿ ಬಿರಾದರ ಸ್ವಾಗತಿಸಿ ವಂದಿಸಿದರು.


























































