![]()
ಅಖಂಡ ಸಿಂದಗಿ ತಾಲ್ಲೂಕು ವ್ಯವಸಾಯೋತ್ಪನ್ನ ಸೇವಾ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ದೇವರಹಿಪ್ಪರಗಿ ತಾಲೂಕಿನ ಕೋರವಾರ ಗ್ರಾಮದ ಸಂಗಮೇಶ ಛಾಯಗೋಳ ಉಪಾಧ್ಯಕ್ಷರಾಗಿ ಬಸವರಾಜ ಪಾಟೀಲ ಗುಂದಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.. ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಗೆ ಬುಧವಾರ ಚುನಾವಣೆ ನಿಗಧಿಯಾಗಿತ್ತು. ಅಧ್ಯಕ್ಷ ಸ್ಥಾನ ಬಯಸಿ ಸಂಗಮೇಶ ಛಾಯಗೋಳ ಹಾಗೂ ಉಪಾಧ್ಯಕ್ಷ ಸ್ಥಾನ ಬಯಸಿ ಬಸವರಾಜ ಪಾಟೀಲ ತಮ್ಮ ಉಮೇದುವಾರಿಕೆ ಸಲ್ಲಿಸಿದರು. ಇವರನ್ನು ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸಿರುವದಿಲ್ಲ. ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಆರ್.ಎನ್.ಆಳೂರ ಹಾಗೂ ತಾಲೂಕು ಅಭಿವೃದ್ಧಿ ಅಧಿಕಾರಿಗಳಾದ ಲೀಲಾವತಿ ಗೌಡ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಯನ್ನು ಘೋಷಿಸಿದರು. ನೂತನ ಅಧ್ಯಕ್ಷ ಸಂಗಮೇಶ ಛಾಯಗೋಳ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಸಚಿವ ಶಿವಾನಂದ ಎಸ್ ಪಾಟೀಲ, ಶಾಸಕ ಅಶೋಕ ಎಮ್ ಮನಗೂಳಿ ಅವರ ಆಶೀರ್ವಾದ ಹಾಗೂ ನಿಕಟಪೂರ್ವ ಅಧ್ಯಕ್ಷ ಕಾಂತವೀರ ಬಿರಾದಾರ ಅವರ ಸಹಕಾರದೊಂದಿಗೆ ರೈತಪರವಾದ ಅಂಖಡ ತಾಲ್ಲೂಕಿನ ಜನತೆ ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಆಶೀರ್ವಾದ ಮಾಡಿದ್ದು ಎಲ್ಲಾ ನಿರ್ದೇಶಕರ ಸಹಕಾರದೊಂದಿಗೆ, ಸಂಘದ ಅಭಿವೃದ್ಧಿ ಮತ್ತು ರೈತರ ಹಿತಕ್ಕಾಗಿ ನಿಷ್ಠೆಯಿಂದ ಕೆಲಸ ಮಾಡುವುದೇ ನನ್ನ ಧೈಯ ಮತ್ತು ಸಂಸ್ಥೆಯನ್ನು ಅಭಿವೃದ್ಧಿಯ ಕಡೆಗೆ ತೆಗೆದುಕೊಂಡು ಹೋಗಲು ಶ್ರಮಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ಶಿವಶಂಕರ ಆ ಕರ್ಜಗಿ, ರಾಜುಗೌಡ ಪಾಟೀಲ, ಮಲ್ಲನಗೌಡ ಪಾಟೀಲ, ಶ್ರೀಶೈಲ ತಿ ಹಿಪ್ಪರಗಿ, ಬ್ಯಾಕೋಡ ಪಿಕೆಪಿಎಸ್ ಸಿಇಓ ಶೇಖರ ಬಿರಾದಾರ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಮಾಜಿ ತಾಪಂ ಸದಸ್ಯ ಮಲ್ಲನಗೌಡ ಬಿರಾದಾರ, ಚೇತನಗೌಡ ಬಿರಾದಾರ ಬನ್ನೆಟ್ಟಿ, ಭೀಮನಗೌಡ ಬಿರಾದಾರ ಗಬಸಾವಳಗಿ, ಆನಂದ ಚಟ್ಟರಕಿ ಕೆರೂಟಿ, ಜಗದೀಶ ಪಾಟೀಲ ಕೊಂಡಗೂಳಿ, ಭೀಮನಗೌಡ ಗೊಬ್ಬರ, ಅಶೋಕ ಸಿದರಡ್ಡಿ,ಸಲಿಂ ವಠಾರ, ಅರವಿಂದ ರಾಠೋಡ, ವಿಜಯ ಚವ್ಹಾಣ, ಶರಣಗೌಡ ಪಾಟೀಲ, ಭೋಜನಗೌಡ ಜಿರಾದಾರ ಸೇರಿದಂತೆ ಸದಸ್ಯರು, ಅಧಿಕಾರಿಗಳು ಹಾಗೂ ರೈತ ಮುಖಂಡರು ಉಪಸ್ಥಿತರಿದ್ದರು.


























































