![]()
ಸುರಪುರ : ಕೆಂಭಾವಿ ಪಟ್ಟಣ ಹೊರವಲಯದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಪಾಲಕರ ಸಭೆ ಕರೆಯಲಾಗಿತ್ತು ಕಾರ್ಯಕ್ರಮದಲ್ಲಿ ದಿವ್ಯ ಸಾನಿದ್ಯವನ್ನು ಷ ಬ್ರ ಶ್ರೀ ಚನ್ನಬಸವ ಶಿವಾಚಾರ್ಯರು ವಹಿಸಿದರ.
ಅಧ್ಯಕ್ಷತೆಯನ್ನು ಅಪ್ಪು ರಾಠೋಡ ಪ್ರಾಂಶುಪಾರು ವಹಿಸಿದರು. ಪಾಲಕರ ಪ್ರತಿನಿಧಿಯಾಗಿ ಮಲ್ಲಿಕಾರ್ಜುನ ಪಾಟೀಲ ಕಿರದಳ್ಳಿ,ಬಿ ಬಿ ಹಾಜರ,ವಿಜಯಲಕ್ಷ್ಮಿ ಪಾಟೀಲ,ಪವಿತ್ರಾ ಪಾಟೀಲ ಭಾಗವಹಿಸಿದರು.
ಪರಮಪೂಜ್ಯರು ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಕ್ಕಳನ್ನು ಉದ್ದೇಶಿಸಿ ಆಶೀರ್ವಚನ ನೀಡಿದರು.ಪಾಲಕರ ಪ್ರತಿನಿಧಿಯಾಗಿ ಭಾಗವಹಿಸಿದ ಮಲ್ಲಿಕಾರ್ಜುನ ಪಾಟೀಲರು ಶಿಕ್ಷಕರು ಹೇಳಿದ ಪಾಠವನ್ನು ಶ್ರದ್ಧೆಯಿಂದ ಆಲಿಸಿದರೆ ವಿದ್ಯಾರ್ಥಿಗಳು ಏನಾದರು ಭವಿಷ್ಯದಲ್ಲು ಸಾಧಿಸಬಹುದು ಎಂದು ಉಪದೇಶಿಸಿದರು.ಪವಿತ್ರಾ ಪಾಟೀಲ ಪಾಲಕರು ಮಕ್ಕಳಿಗೆ ಶಾಲೆಗೆ ಸರಿಯಾದ ಸಮಯಕ್ಕೆ ತಂದು ಬಿಡಬೇಕು, ಬಿಬಿ ಹಜಾರೆ ಅಕ್ಕವರು ಕೂಡಾ ವಿದ್ಯಾರ್ಥಿಗಳ ಶೈಕ್ಷಣಿಕ ದಾಖಲಾತಿಯನ್ನು ಕಾಲಕಾಲಕ್ಕೆ ಮಾಹಿತಿ ಕೊಡಲು ತಿಳಿಸದರು.ಕಾರ್ಯಕ್ರಮದಲ್ಲಿ ಭಾಹವಹಿಸಿದ ಹಿರಿಯ ಶಿಕ್ಷಕರು ಸಾಹಿತಿಗಳಾದ ದೇವಿಂದ್ರ ಕರಡಕಲ ಶಿಕ್ಷಕರು ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮದಲ್ಲಿ ಅಧ್ಯಕ್ಷ ಸ್ಥಾನವನ್ನು ವಹಿಸಿ ಪಾಂಶುಪಾಲರು ಪಾಲಕರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುತ ಸಮಸ್ಯೆಗಳನ್ನು ಪರಿಹರಿಸುವದಾಗಿ ಪಾಲಕರಲ್ಲಿ ಭರವಸೆ ಮುಡಿಸಿದರು ಕಾರ್ಯಕ್ರಮ ವನ್ನು ಶಾಂತಲಿಂಗ ಪಾಟೀಲ ಕನ್ನಡ ಭಾಷಾ ಶಿಕ್ಷಕರು ನಿರೂಪಿಸಿದರು,ಕಾರ್ಯಕ್ರಮದ ವಂದನಾರ್ಪಣೆಯನ್ನು ಮಡಿವಾಳಪ್ಪ ಪಾಟೀಲ ದೈಹಿಕ ಶಿಕ್ಷಕರು ನಿರ್ವಹಿಸಿದರು ವಿದ್ಯಾರ್ಥಿಗಳು ಪಾಲಕರು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು


























































