![]()
ಕುಮಟಾ :-ಅನೇಕ ಸಂದರ್ಭಗಳಲ್ಲಿ ಕಷ್ಟದಲ್ಲಿದ್ದು,ಶಸ್ತ್ರ ಚಿಕಿತ್ಸೆಗೆ ಒಳಪಟ್ಟ ನಾಲ್ಕು ಜನರಿಗೆ ತಲಾ ರೂಪಾಯಿ 7,500/-ದಂತೆ ಒಟ್ಟೂ ರೂಪಾಯಿ 30,000/-ದ ಆರ್ಥಿಕ ಸಹಾಯ ಮಾಡಿ ಮಾನವೀಯತೆ ಮೆರೆದ ಜಿಲ್ಲಾ ಗ್ರಾಮ ಒಕ್ಕಲು ಯುವ ಬಳಗ, ಸದಾ ಒಂದಲ್ಲ ಒಂದು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಬಂದಿರುವ ಗ್ರಾಮ ಒಕ್ಕಲು ಯುವ ಬಳಗದವರು ತೊಂದರೆಯಲ್ಲಿರುವ ಜನಕ್ಕೆ ಸಹಾಯ ಮಾಡಬೇಕು ಎನ್ನುವ ಉದ್ದೇಶದಿಂದ ಅವರ ಮನೆಗಳಿಗೆ ತೆರಳಿ ಆರ್ಥಿಕ ಸಹಾಯ ಮಾಡುವುದರ ಮುಖಾಂತರ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ, ಬೈಕ್ ಅಪಘಾತದಿಂದ ಬಿದ್ದು ಶಸ್ತ್ರ ಚಿಕಿತ್ಸೆಗೆ ಒಳಪಟ್ಟ ಕುಮಟಾ ತಾಲೂಕಿನ ಬರ್ಗಿ ನಿವಾಸಿಯಾದ ಶ್ರೀ ಪ್ರಮೋದ ವೆಂಕಟ್ರಮಣ ಪಟಗಾರ, ಮನೆಗೆ ಸ್ಲೇಪ್ ಹಾಕುವಾಗ ಬಿದ್ದು ಶಸ್ತ್ರಚಿಕಿತ್ಸೆಗೆ ಒಳಪಟ್ಟ ಕುಮಟಾ ತಾಲ್ಲೂಕಿನ ಬರ್ಗಿ ನಿವಾಸಿಯಾದ ಶ್ರೀ ಅರುಣ ನಾರಾಯಣ ಪಟಗಾರ, ಹಾಗೂ ಕೆಲಸಕ್ಕೆ ಹೋದಾಗ ಬಿದ್ದು ಕಾಲಿನ ಮೂಳೆ ಮುರೀತಕ್ಕೆ ಒಳಪಟ್ಟ ಬೆಟಕುಳಿಯ ಶ್ರೀ ರಮೇಶ ಗೋವಿಂದ ಪಟಗಾರ ಹಾಗೂ ತೆಂಗಿನಮರದಿಂದ ಬಿದ್ದು ಶಸ್ತ್ರ ಚಿಕಿತ್ಸೆಗೆ ಒಳಪಟ್ಟ ಶಿರಸಿ ತಾಲೂಕಿನ ಬಾಳೆಗದ್ದೆ ನಿವಾಸಿಯಾದ ಶ್ರೀ ನರಸಿಂಹ ರಾಮ ಪಟಗಾರ ಇವರೆಲ್ಲರಿಗೂ ಸ್ವಲ್ಪ ಆದರೂ ಸಹಾಯವಾಗಲಿ ಎನ್ನುವ ದೃಷ್ಟಿಯಿಂದ ಗ್ರಾಮ ಒಕ್ಕಲು ಯುವ ಬಳಗದವರು ಅವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿ ಸಹಾಯ ಧನವನ್ನು ವಿತರಿಸಿ ಬೇಗ ಗುಣಮುಖರಾಗಲಿ ಎಂದು ಬಳಗದವರು ಹಾರೈಸಿದರು, ಈ ಸಂದರ್ಭದಲ್ಲಿ ಜಿಲ್ಲಾ ಗ್ರಾಮ ಒಕ್ಕಲು ಯುವ ಬಳಗದ ಸದಸ್ಯರು ಹಾಗೂ ಸ್ಥಳೀಯ ಯುವ ಬಳಗದ ಸದಸ್ಯರು ಹಾಜರಿದ್ದರು


























































