![]()
ಹೂವಿನ ಹಡಗಲಿ: 2025 ರ ಸ್ಪರ್ಧಾತ್ಮಕ ಪರೀಕ್ಷೆ ಟಿಇಟಿ ಸಿಟಿಇಟಿ ಅಣಿಯಾಗಲು ಯುವಕರಿಗೆ ನ 1 ಮತ್ತು 2 ರಂದು ಉಚಿತ ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ಉಪನ್ಯಾಸಕ ನೆಪೋಲಿಯನ್ ತಿಳಿಸಿದ್ದಾರೆ. ತಾಲೂಕಿನ ಹೊಳಗುಂದಿ ಗ್ರಾಮದಲ್ಲಿನ ನೆಪೋಲಿಯನ್ ಬೋನಪಾರ್ಟಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ವತಿಯಿಂದ ನಿರುದ್ಯೋಗಿ ಯುವಕರಿಗೆ ದಾರಿದೀಪ ಆಗುವ ಹಿನ್ನೆಲೆಯಲ್ಲಿ ಉಚಿತ ಕಾರ್ಯಾಗಾರ ಜ್ಞಾನಜ್ಯೋತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ನಾಡಿನ ಪ್ರಬುದ್ಧ ಉಪನ್ಯಾಸಕರು ಪ್ರಸಿದ್ಧ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡಲಾಗುವುದು. ಕನ್ನಡ ಭಾಷೆ 1,2 ,ಮನೋವಿಜ್ಞಾನ ಹಾಗೂ ಎಲ್ಲಾ ವಿಷಯಗಳ ಕುರಿತು ಬೋಧಿಸಲಾಗುತ್ತದೆ ಎಂದು ನೆಪೋಲಿಯನ್ ತಿಳಿಸಿದರು. ತಾಲೂಕಿನ ವಿವಿಧ ಗ್ರಾಮಗಳ
ಡಿ ಇ ಡಿ ಹಾಗೂ ಬಿ ಇ ಡಿ ಪ್ರಶಿಕ್ಷಣ ವಿದ್ಯಾರ್ಥಿಗಳು ಯುವಕ ಯುವತಿಯರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕೋರಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ
9008077795 ಸಂಪರ್ಕಿಸಬಹುದು.

























































