![]()
ಲಕ್ಷ್ಮೇಶ್ವರ: ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕು ತಹಶೀಲ್ದಾರ ಧನಂಜಯ್ ಮಾಲಗಿತ್ತಿರವರನ್ನು ಮರು ಕರ್ತವ್ಯಕ್ಕೆ ಹಾಜರುಪಡಿಸುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಲಕ್ಷ್ಮೇಶ್ವರ ಹಾಗೂ ಶಿರಹಟ್ಟಿ ತಾಲೂಕು ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಸೋಮವಾರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ನಂತರ ಮಾತನಾಡಿದ ದಸಂಸ ಸಮಿತಿಯ ಮುಖಂಡರು ಲಕ್ಷ್ಮೇಶ್ವರ ತಾಲೂಕ ತಹಸಿಲ್ದಾರ್ ಕಾರ್ಯಾಲಯದಲ್ಲಿ ಅಕ್ಟೋಬರ್ 23ರಂದು ವೀರರಾಣಿ ಕಿತ್ತೂರು ಚೆನ್ನಮ್ಮ ಜಯಂತಿ ಹಾಗೂ ವಿಜಯೋತ್ಸವ ಕಾರ್ಯಕ್ರಮವನ್ನು ಮಾಡಿಲ್ಲವೆಂದು ಮತ್ತು ಕಾರ್ಯಕ್ರಮ ಮಾಡುವ ಕುರಿತಾಗಿ ಪೂರ್ವಭಾವಿ ಸಭೆ ಮಾಡಿಲ್ಲವೆಂದು ಆರೋಪಿಸಿ ಅವರ ವಿರುದ್ಧವಾಗಿ ಧಿಕ್ಕಾರ ಕೂಗಿ ಪ್ರತಿಭಟನೆ ಮಾಡಿದ್ದರಿಂದ ಅವರನ್ನು ಜಿಲ್ಲಾಧಿಕಾರಿಗಳು ಕಡ್ಡಾಯ ರಜೆಯ ಮೇಲೆ ಕಳುಹಿಸಿರುವ ಕ್ರಮವನ್ನು ಕೈ ಬಿಡಬೇಕು ಮತ್ತು ಲಕ್ಷ್ಮೇಶ್ವರ ತಾಲೂಕ ತಹಶೀಲ್ದಾರರನ್ನು ಮರು ಕರ್ತವ್ಯಕ್ಕೆ ಹಾಜರುಪಡಿಸಬೇಕು ಎಂದು ಒತ್ತಾಯಿಸಿದರು.
ಅಕ್ಟೋಬರ್ 23ರಂದು ತಹಶೀಲ್ದಾರರು ಹಾಗೂ ಆಡಳಿತ ವರ್ಗದವರು ಕಾರ್ಯಾಲಯದಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮನವರ ಭಾವಚಿತ್ರ ವಿಟ್ಟು ಪೂಜೆ ಸಲ್ಲಿಸಿ ಇಲಾಖೆಯಿಂದ ಮಾಡಬೇಕಾದ ಕರ್ತವ್ಯ ಮಾಡಿರುತ್ತಾರೆ. ಅದಾಗ್ಯೂ ಪ್ರತಿಭಟನಾಕಾರರು ಜನರನ್ನು ಸೇರಿಸಿ ಸಂಬಂಧಿಸಿದ ಇಲಾಖೆಯಿಂದ ಅನುಮತಿ ಪಡೆದುಕೊಳ್ಳದೆ ದಿಡೀರನೆ ಪ್ರತಿಭಟನೆ ಮಾಡಿ ತಾಲೂಕು ದಂಡಾಧಿಕಾರಿಗಳಿಗೆ ಅವಮಾನವಾಗುವ ರೀತಿಯಲ್ಲಿ ನಡೆದುಕೊಂಡಿರುತ್ತಾರೆ ಎಂದು ಆರೋಪಿಸಿದರು.
ಲಕ್ಷ್ಮೇಶ್ವರ ತಾಲೂಕು ತಹಶೀಲ್ದಾರ್ ಧನಂಜಯ್ ಮಾಲಗಿತ್ತಿ ರವರನ್ನು ರಜೆಯ ಮೇಲೆ ಕಳುಹಿಸಿರುವ ಜಿಲ್ಲಾಧಿಕಾರಿಗಳು ಕೂಡಲೇ ಅವರನ್ನು ಲಕ್ಷ್ಮೇಶ್ವರ ತಾಲೂಕು ತಹಶೀಲ್ದಾರರೆಂದು ಕರ್ತವ್ಯಕ್ಕೆ ಹಾಜರ ಪಡಿಸಬೇಕು ಮತ್ತು ಜಿಲ್ಲಾಧಿಕಾರಿಗಳು ಆದೇಶ ನೀಡಬೇಕೆಂದು ಕೊರಳಿನಿಂದ ಮನವಿ ಮಾಡಿಕೊಂಡರು.
ಮೂರು ದಿನಗಳ ಒಳಗಾಗಿ ಅವರನ್ನು ಮರು ಕರ್ತವ್ಯಕ್ಕೆ ನಿರ್ದೇಶನ ನೀಡದಿದ್ದಲ್ಲಿ ಲಕ್ಷ್ಮೇಶ್ವರ ಹಾಗೂ ಶಿರಹಟ್ಟಿ ತಾಲೂಕ ದಲಿತ ಸಂಘರ್ಷ ಸಮಿತಿ ವತಿಯಿಂದ ಪಟ್ಟಣದಲ್ಲಿ ಮತ್ತು ಜಿಲ್ಲೆಯ ಆಡಳಿತ ಕಚೇರಿಯ ಮುಂಭಾಗದಲ್ಲಿ ಉಗ್ರವಾದ ಹೋರಾಟವನ್ನು ಮತ್ತು ಪ್ರತಿಭಟನೆ ಮಾಡುತ್ತಿವೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯ ಸಂದರ್ಭದಲ್ಲಿ ಆಗತಕ್ಕಂತಹ ಎಲ್ಲಾ ಅನಾಹುತಗಳಿಗೆ ಜಿಲ್ಲಾಡಳಿತ ಹಾಗೂ ತಾಲೂಕ್ ಆಡಳಿತ ಅಧಿಕಾರಿಗಳೇ ಜವಾಬ್ದಾರರ ಆಗಬೇಕಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ ಮುಖಂಡರಾದ ಸುರೇಶ್ ನಂದೆಣ್ಣವರ, ಕೋಟೆಪ್ಪ ವರ್ದಿ,ಫಕೀರೇಶ ಮ್ಯಾಟನ್ನವರ್, ಸುರೇಶ್ ಬೀರಣ್ಣವರ್, ಫಕೀರೇಶ ಬಜಕ್ಕನವರ, ನಾಗರಾಜ್ ದೊಡ್ಮನಿ (ಗೋನಾಳ), ಬಸವಣ್ಣಪ್ಪ ನಂದೆಣ್ಣವರ, ದೇವಪ್ಪ ನಂದೆಣ್ಣವರ, ಫಕೀರೇಶ ಎಂ ನಂದಣ್ಣವರ್. ಸದಾನಂದ ನಂದೆಣ್ಣವರ್, ಹೊನ್ನಪ್ಪ ಸಂಜೀವಣ್ಣವರ್. ಚಂದ್ರಶೇಖರ್ ಹರಿಜನ. ಮಾರ್ತಾಂಡಪ್ಪ ಹಾದಿಮನಿ. ನಾಗರಾಜ್ ಎಂ ನಂದಣ್ಣವರ.ನಾಗರಾಜ್ ಅಮರಾಪುರ. ರಾಮಪ್ಪ ಗಡದವರ. ರಮೇಶ್ ಅಡುಗೆಮನೆ, ಗಾಳೆಪ್ಪ ಎಚ್ ಹರಿಜನ (ಅಕ್ಕಿಗುಂದ) ರವಿ ಗುಡಿಮಿನಿ. ಮಂಜು ಸೀತಮ್ಮನವರ್. ಶೇಖಪ್ಪ ಒಂಟಿಪಡಿಯಪ್ಪನವರ್. ಜಗದೀಶ್ ಹುಲಿಗೆಮ್ಮನವರು. ಹನುಮಂತಪ್ಪ ಹರಿಜನ. ಗುಡ್ಡಪ್ಪ ಮತ್ತೂರ. ಪರಶುರಾಮ ಸಂಗಮನವರ್. ಹನುಮಂತ ಸಂಗಮನವರ. ದ್ಯಾಮಣ್ಣ ಮ್ಯಾಗೇರಿ. ರಾಜು ಕಮತದ. ಮಧು ಹಾದಿಮನಿ. ಮಹಾಂತೇಶ ಗುಡಿಸಲಮನಿ. ಸಂತೋಷ ಹಾದಿಮನಿ. ಶಶಿಕುಮಾರ್ ಪೂಜಾರ. ಆನಂದ್ ತಳಗೇರಿ.ಅನಿಲ್ ನಂದಣ್ಣವರ. ಗೋಣೆಪ್ಪ ಹರಿಜನ.ಫಕೀರೇಶ ಪೂಜಾರ. ಮಾರ್ಕಂಡಪ್ಪ ಗಾಳಪ್ಪನವರ್.ಸೇರಿದಂತೆ ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು ಉಪಸ್ಥಿತರಿದ್ದರು.


























































