![]()
ಶಹಾಪುರ, ಅಕ್ಟೋಬರ್ 26 ಯಾದಗಿರಿ ನಾರಾಯಣಪುರದ ಬಸವಸಾಗರ ಜಲಾಶಯದ ಎಡದಂಡೆ ಕಾಲುವೆ ವ್ಯಾಪ್ತಿಯ ಹಿಂಗಾರು ಹಂಗಾಮಿಗೆ ಸಂಬಂಧಿಸಿದಂತೆ ನೀರು ಹರಿಸುವ ಕುರಿತು ನಿರ್ಧರಿಸಲು ನವೆಂಬರ್ 4 ರಂದು ನಡೆಯಲಿರುವ ಐಸಿಸಿ (Irrigation Consultative Committee) ಜನಪ್ರತಿನಿಧಿಗಳು ಸಭೆಯಲ್ಲಿ ರೈತರ ಹಿತ ಕಾಪಾಡಬೇಕು ಎಂದು ರೈತ ಹೋರಾಟಗಾರರಾದ ಶ್ರೀ ಧರ್ಮಣ್ಣ ತಹಶೀಲ್ದಾರ್ ಶಹಾಪುರ ನಗರದಲ್ಲಿ ಪತ್ರಿಕಾ ಹೇಳಿಕೆ ಮೂಲಕ ಮಾತನಾಡಿ ಸರ್ಕಾರದಕ್ಕೆ ಒತ್ತಾಯಿಸಿದರು
ಮುಂಗಾರು ಬೆಳೆಗಳು ಅತಿವೃಷ್ಟಿಯಿಂದ ಹಾಳಾಗಿರುವ ಹಿನ್ನೆಲೆಯಲ್ಲಿ, ಹಿಂಗಾರು ಹಂಗಾಮಿಗೆ ಅನುಕೂಲವಾಗುವಂತೆ ಏಪ್ರಿಲ್ 10 ರವರೆಗೆ ಕಾಲುವೆಗೆ ನೀರು ಹರಿಸಲು ಕ್ರಮ ವಹಿಸಬೇಕು ಎಂದು ಅನೇಕ ರೈತರಾದ ಶ್ರೀ ಮಲ್ಲಿಕಾರ್ಜುನ ಕಟ್ಟಿಮನಿ, ಧರ್ಮರೆಡ್ಡಿ ಕನ್ಯಾಕೋಳೂರು ಶಿವಕುಮಾರ್ ದಿಗ್ಗಿ, ರಫೀಕ್ ಅಹ್ಮದ್, ಯುವ ಹೋರಾಟಗಾರ ಪ್ರವೀಣ್ ಕುಮಾರ್ ಆಂದೋಲ ಶಖಾಪುರ,ರಾಘವೇಂದ್ರ ಶಖಾಪುರ, ಶಂಕರ್ ಹಳಿಸಗರ್, ಹೈಯಾಳಪ್ಪ ಆಂದೋಲ ಕನ್ಯಾಕುಳೂರು , ರೆಡ್ಡಿ ನಾಯ್ಕೊಡಿ ಶಹಾಪುರ, ಮಲ್ಲಪ್ಪ ಗಂಗನಾಳ , ಶೇಕು ಬೋನಿಯರ್, ಅಂಬರೀಶ್ ಬೆನಕನಹಳ್ಳಿ , ರೈತರು ಸೇರಿಕೊಂಡು
. ಹಿಂಗಾರಿನಲ್ಲಿ ಶೇಂಗಾ, ಜೋಳ, ಕಡಲಿ ಮುಂತಾದ ಬೆಳೆಗಳನ್ನು ಬೆಳೆಯಲು ಇದು ಸಹಾಯಕವಾಗಲಿದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದರು.
ನಿಯಮ ಸಡಿಲಿಕೆಗೆ ಬೇಡಿಕೆಗೆ ರೈತರ ಒತ್ತಾಯ
ಕಳೆದ ವರ್ಷ ಜಾರಿಯಲ್ಲಿದ್ದ ’14 ದಿನ ಚಾಲು, 10 ದಿನ ಬಂದ್’ ನೀರು ಬಿಡುವ ಪ್ರಕ್ರಿಯೆಯನ್ನು ಸಡಿಲಿಸಬೇಕು ಎಂಬುದು ರೈತರ ಪ್ರಮುಖ ಬೇಡಿಕೆಯಾಗಿದೆ. ಈ ಹಳೆಯ ನಿಯಮದಿಂದಾಗಿ ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಬಿಸಿಲು ಹೆಚ್ಚಾದಾಗ ಕಾಲುವೆಯ ಕೊನೆಯ ಭಾಗದ ಗದ್ದೆಗಳಿಗೆ ನೀರು ತಲುಪಲು ಸಾಧ್ಯವಾಗಿರಲಿಲ್ಲ. ಇದರಿಂದ ಕೊನೆ ಭಾಗದ ಅನೇಕ ರೈತರು ಸಂಕಷ್ಟ ಎದುರಿಸಿದ್ದರು ತ್ತಾರೆ.
ಅದೇ ರೀತಿ ಶಾಸಕರಿಗೆ ಮನವಿ:
ಐಸಿಸಿ ಸಭೆಗೆ ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ಗೌಡ ದರ್ಶನಾಪುರ, ಯಾದಗಿರಿ ಶಾಸಕ ಶ್ರೀ ಚನ್ನಾರೆಡ್ಡಿ ತುನ್ನೂರು, ಗುರುಮಿಠಕಲ್ ಶಾಸಕ ಶ್ರೀ ಶರಣುಗೌಡ ಕಂದಕೂರು, ಸುರಪುರ ಶಾಸಕ ಶ್ರೀ ರಾಜಾ ವೇಣುಗೋಪಾಲ ನಾಯಕ ಮತ್ತು ಜೇವರ್ಗಿ ಶಾಸಕ ಶ್ರೀ ಅಜಯ್ ಸಿಂಗ್ ರವರು ತಪ್ಪದೇ ಹಾಜರಾಗಿ, ಐಸಿಸಿ ಅಧ್ಯಕ್ಷರೂ ಆದ ಸಚಿವ ಆರ್.ಬಿ. ತಿಮ್ಮಾಪುರಿ ಅವರ ಮೇಲೆ ಒತ್ತಡ ಹೇರಬೇಕು ಎಂದು ರೈತರು ಸೇರಿಕೊಂಡು ಪತ್ರಿಕಾ ಹೇಳಿಕೆ ಮೂಲಕ ತಮ್ಮ ಮನದಾಳ ಮಾತನ್ನು ಹೇಳಿಕೊಂಡರು


























































