![]()
ಹೂವಿನ ಹಡಗಲಿ: ಸಮಾಜದ ಅಭಿವೃದ್ಧಿಗೆ ಮಹಿಳೆಯರ ಕೊಡುಗೆ ಅನನ್ಯ ಎಂದು ಆಯುಷ್ ವೈದ್ಯೆ ಡಾ ಕೊಟ್ರಮ್ಮ ಹೇಳಿದರು. ಪಟ್ಟಣದ ರಂಗಭಾರತಿ ರಂಗಮAದಿರದಲ್ಲಿ ಎ ಎಂ ಪಿ ಅಜ್ಜಯ್ಯ ಸಮಾಜಮುಖಿ ಟ್ರಸ್ಟ್ ನ ೮ ನೇ ವರ್ಷದ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಅಂತಾರಾಷ್ಟ್ರೀಯ ಗ್ರಾಮೀಣ ಮಹಿಳಾ ದಿನಾಚರಣೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಗ್ರಾಮೀಣ ಮಟ್ಟದಲ್ಲಿ ಸಾಧನೆ ಮಾಡಿದ ಮಹಿಳೆಯರಿಗೆ ಗೌರವ ಸನ್ಮಾನ ಕಾರ್ಯಕ್ರದಲ್ಲಿ ಅವರು ಮಾತನಾಡಿದರು. ಮಹಿಳೆಯರು ತಮ್ಮ ಆರೋಗ್ಯದ ಕಡೆ ಗಮನ ಹರಿಸಿರಿ. ಉತ್ತಮ ಗುಣಮಟ್ಟದ ಆಹಾರ ಸೇವಿಸಿ. ಹೆಚ್ಚು ದೈಹಿಕ ಚಟುವಟಿಕೆಗಳನ್ನು ನಿರ್ವಹಿಸಿರಿ ಎಂದರು.ಡಾ ರಶ್ಮಿ ನಿಖಿಲ್ ದೈಹಿಕ ಮಾನಸಿಕ ಬೆಳವಣಿಗೆ ಬಹಳ ಮುಖ್ಯ. ಮಹಿಳೆಯರು ಆರೋಗ್ಯವಂತರಾದರೆ ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಉತ್ತಮ ನಡೆ ಎಂದು ತಿಳಿಸಿದರು. ವೃತ್ತಿ ರಂಗಭೂಮಿ ಹೆಸರಾಂತ ನಟಿ ಸೋಗಿ ನಾಗರತ್ನಮ,್ಮ ವಕೀಲೆ ಕೆ ಕವಿತಾ ಮಹೇಶ್ ಸವಿತಾ ಅಂಗಡಿ ಮಾತನಾಡಿದರು. ಭತ್ತ ತೂರುವ ಮೂಲಕ ವಿಶಿಷ್ಟವಾಗಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಎಂಟುಮನಿ ಮಲ್ಲಮ್ಮ ಚಾಲನೆ ನೀಡಿದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಎಂಟುಮನೆ ಮಲ್ಲಮ್ಮ, ಡಾ ಕೊಟ್ರಮ್ಮ,ರಂಗನಟಿ ನಾಗರತ್ನಮ್ಮ ಸೋಗಿ ಕೆ ಕವಿತಾ ಮಹೇಶ್ ಸವಿತಾ ಅಂಗಡಿ, ಡಾ ರಶ್ಮಿ ನಿಖಿಲ್ ಹಲಗಿ ಜ್ಯೋತಿ, ಬಿ ಜಯಲಕ್ಷ್ಮಿ ,ರೇಣುಕಮ್ಮ, ಎಚ್ ಅನಸೂಯಮ್ಮ ಎಚ್ ದಂಡೆಮ್ಮ, ಶಾಂತಿಬಾಯಿ ಎಂ ಪಿ ಎಂ ಲಲಿತಾ, ಇತರರನ್ನು ಸನ್ಮಾನಿಸಲಾಯಿತು. ಟ್ರಸ್ಟ್ ನ ಅಧ್ಯಕ್ಷ ಎ ಎಂ ಪಿ ವಾಗೀಶ್ ಮಾತನಾಡಿ ಟ್ರಸ್ಟ್ ನ ಸಮಾಜಮುಖಿ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳಲಾಗುತ್ತಿದೆ ಎಂದರು. ೮ ನೇ ಸಂಸ್ಥಾಪನಾ ದಿನದ ಸವಿನೆನಪಿಗಾಗಿ ಯೋಧ ಟಿ ಸಂಗಪ್ಪ, ರೈತ ಮಹಿಳೆ ವೈ ಅಕ್ಕಮಹಾದೇವಿ ಶಿಕ್ಷಕಿ ಎಂ ಕವಿತಾ ರವರಿಗೆ ವಿಶೇಷ ಪುರಸ್ಕಾರ ನೀಡಿ ಗೌರವಿಸಲಾಯಿತು. ಪತ್ರಕರ್ತರ ಸಂಘದ ಅಧ್ಯಕ್ಷರಾದ ಎಂ ಪಿ ಎಂ ಶಿವಪ್ರಕಾಶ್ ಬಿಚ್ಚುಗತ್ತಿ ಖಾಜಾ ಹುಸೇನ್ ವೀರೇಶ್ ಕಲ್ಮಠ,ಸಮಾಜ ಸೇವಕ ಸುರೇಶ ಹಲಗಿ ಇದ್ದರು. ತಾಲೂಕಿನ ದುಡಿಯುವ ಕೃಷಿ ಮಹಿಳೆಯರು ಹಾಗೂ ಅಂಗನವಾಡಿ ಬಿಸಿಯೂಟ ದೇವದಾಸಿ ಮಹಿಳೆಯರಿಗೆ ಸೀರೆ ವಿತರಿಸಲಾಯಿತು. ಶ್ರೀಲತಾ, ನಯನಾ ಅಂಗಡಿನಾಗವೇಣಿ, ಸವಿತಾ ಹರವಿ ನಿರ್ವಹಿಸಿದರು. ಚಂದನಾ ಕಲಾ ಬಳಗದ ಎ ಎಂ ಪಿ ಪ್ರಶಾಂತ್, ನಾಗೇಶ್ ಕಾವ್ಯ ಪಾರಿ, ದ್ರಾಕ್ಷಾಯಿಣಿ ಸುಮಧುರ ಗೀತೆಗಳನ್ನು ಹಾಡಿ ರಂಜಿಸಿದರು.


























































