![]()
ಶಹಾಪುರ :- ಯಾದಗಿರಿ ಜಿಲ್ಲೆಯಾದ್ಯಂತ ಅನೇಕ ರೈತರು ಹತ್ತಿ ಬೆಳೆದಿದ್ದಾರೆ ಈ ಬಾರಿ ಅತಿವೃಷ್ಟಿ ಯಿಂದ ಈ ಬಾರಿ ಹತ್ತಿ ಇಳುವರಿ ಕಡಿಮೆ ಆಗಿದೆ ಅದಕ್ಕಾಗಿ ಸರ್ಕಾರ ಸೂಕ್ತ ಬೆಂಬಲ ಬೆಲೆ ದೊಂದಿಗೆ ಹತ್ತಿ ಖರೀದಿ ಕೇಂದ್ರ ಗಳನ್ನು ಜಿಲ್ಲೆಯಾದ್ಯಂತ ಆರಂಭ ಮಾಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವಾಸುದೇವ್ ಮೇಟಿ ಬಣದ ತಾಲೂಕ ಅಧ್ಯಕ್ಷರಾದ ಶ್ರೀ ದೇವೇಂದ್ರಪ್ಪ ವೈ ಕೋಲ್ಕರ್ ಅವರು ಪತ್ರಿಕಾ ಹೇಳಿಕೆ ಮೂಲಕ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಒಂದು ವೇಳೆ ತಡವಾಗಿ ಖರೀದಿ ಕೇಂದ್ರಗಳು ಆರಂಭವಾದರೆ ದಲ್ಲಾಳಿಗೆ ತಮ್ಮ ಮನಸ್ಸಿಗೆ ಬಂದ ಹಾಗೆ ರೈತರ ಹತ್ತಿರ ಖರೀದಿ ಮಾಡುತ್ತಾರೆ ರೈತರು ತಮ್ಮ ಸಾಲ ಸುಲ ಮಾಡಿದ ತೊಂದರೆಗೆ ದಲ್ಲಾಳಿಗೆ ಮಾರಾಟ ಮಾಡುತ್ತಾರೆ ಅದಕ್ಕಾಗಿ ಈ ಬಾರಿ ಇಳುವರಿ ಕುಂಠಿತವಾಗಿದ್ದು ರೈತರು ಸಾಲಕ್ಕೆ ತುತ್ತಾಗುವ ಪರಿಸ್ಥಿತಿ ಬಂದು ತಲುಪುತಾರೆ ಆದ್ದರಿಂದ ಸರ್ಕಾರ ಎಚ್ಚೆತ್ತುಕೊಂಡು ರೈತರ ಹಿತಾಸಕ್ತಿಯಿಂದ ಸರ್ಕಾರದಿಂದ ಸೂಕ್ತ ಬೆಂಬಲ ಬೆಲೆ ನಿಗದಿ ಮಾಡಿ ಆದಷ್ಟು ಬೇಗ ಜಿಲ್ಲಾಧ್ಯಂತ ಹತ್ತಿ ಖರೀದಿ ಕೇಂದ್ರ ಆರಂಭಿಸಬೇಕೆಂದು ರೈತ ಸಂಘಟನೆಯಿಂದ ಒತ್ತಾಯಿಸಿದರು.


























































