13,624 total views
ಬೆಳಗಾವಿ ಜಿಲ್ಲಾ ರಾಮದುರ್ಗ ತಾಲೂಕಿನಲ್ಲಿ ಎಲ್ಲಾ ಹಳ್ಳಿಗಳಲ್ಲಿ ಹೆಚ್ಚಿದೆ ಅಕ್ರಮ ಮಧ್ಯ ಮಾರಾಟ ಇದರ ಬಗ್ಗೆ ಸರ್ಕಾರದವರು ಗಮನಹರಿಸುತ್ತಿಲ್ಲ, ಯಡಿಯೂರಪ್ಪನವರ ಸರಕಾರ ಇದ್ದಾಗ ಗ್ರಾಮೀಣ ಪ್ರದೇಶದಲ್ಲಿ ಮಧ್ಯ ಮಾರಾಟ ನಿಷೇಧ ಮಾಡಿದಾಗಿನಿಂದ ಕೆಲವು ದಿನಗಳ ಮಾತ್ರ ಮಧ್ಯ ಮಾರಾಟ ನಿಷೇಧವಾಗಿತ್ತು, ನಂತರ ದಿನಗಳಲ್ಲಿ ಗ್ರಾಮೀಣ ಪ್ರದೇಶದ ಓಣಿ ಓಣಿಯಲ್ಲಿ ಪಟ್ಟಿ ಬೀಡಾ ಅಂಗಡಿಗಳಲ್ಲಿ ಚಹಾದ ಅಂಗಡಿಗಳಲ್ಲಿ ಮದ್ಯ ಮಾರಾಟ ವಾಗುತ್ತಿದೆ, ಯಾರದು ಯಾವುದೇ ಭಯವಿಲ್ಲದೆ ರಾಜಾರೋಷವಾಗಿ ಹಳ್ಳಿಗಳಲ್ಲಿ ಮದ್ಯ ಮಾರಾಟ ನಡೆಯುತ್ತಲೇ ಇದೆ, ಇದಕ್ಕೆ ಕಡಿವಾಣ ಯಾವಾಗ ಅಕ್ರಮವಾಗಿ ಮಧ್ಯ ಮಾರಾಟ ನಿಷೇಧ ಎಂದು ಸರಕಾರ ಆದೇಶ ಮಾಡಿದರು ಅಕ್ರಮ ಮಧ್ಯ ಮಾರಾಟ ನಡೆಯುತ್ತಲಿದೆ, ಸಾರ್ವಜನಿಕರು ಮತ್ತು ರೈತರು ಸಣ್ಣಪುಟ್ಟ ತಪ್ಪು ಮಾಡಿದಾಗ ದಾರಿಗಳಲ್ಲಿ ಪೊಲೀಸ್ ಇಲಾಖೆಯವರು ಅಬಕಾರಿ ಇಲಾಖೆಯವರು ಕಾನೂನು ಬಾಹಿರ ಕೆಲಸ ಮಾಡಿದ್ದೀರಿ ಎಂದು ಅವರ ಮೇಲೆ ಕೆಸ್ ಮಾಡಿ ದಂಡ ಹಾಕಿ ಕೋರ್ಟ್ ಮೆಟ್ಟಿಲು ಹತ್ತಿಸುತ್ತಾರೆ, ಆದರೆ ಅಕ್ರಮವಾಗಿ ಮಧ್ಯ ಮಾರಾಟ ಮಾಡುವುದನ್ನು ಯಾರು ನೋಡುತ್ತಿಲ್ಲ ಜಾಣ ಕುರುಡರಾಗಿ ಸಂಬಂಧಪಟ್ಟ ಇಲಾಖೆಯವರು ಸುಮ್ಮನೆ ಕುಳಿತಿರಬಹುದು, ಅಥವಾ ಸುದ್ದಿ ತಿಳಿಯಲಾರದೆ ಇರಬಹುದು, ಕೆಲವು ದಿನಗಳ ಹಿಂದೆ ಬೆಳಗಾಂವ ಜಿಲ್ಲಾ ರಾಮದುರ್ಗ ತಾಲೂಕಿನ ಚಿಲಮೂರ ಗ್ರಾಮದ ಶಾಲೆಯ ಪಕ್ಕದ ಹತ್ತಿರ ಇರುವ ಸೇತುವೆ ಕೆಳಗಡೆ ಅರವತ್ತರಿಂದ ಎಪ್ಪತ್ತು ಸಾವಿರ ಖಾಲಿ ಟೆಟ್ರಾ ಡಬ್ಬಿಗಳನ್ನು ಬಿಸಾಕಿ ಜಲ ಮಾಲಿನ್ಯ ಮಾಡಿದ್ದು ಉಂಟು, ಖಾಲಿ ಟೆಟ್ರಾ ಡಬ್ಬಿ ಬಿದ್ದಿದ್ದು ಗಮನಿಸಿ ಟಿವಿ 23 ಸುದ್ದಿ ವಾಹಿನಿಯವರು ಸುದ್ದಿ ಮಾಡಿದ್ದರು ಸಹ ಸಂಬಂಧಪಟ್ಟಂತ ಯಾವ ಅಧಿಕಾರಿಗಳು ಇದರ ಬಗ್ಗೆ ಯಾವುದೇ ಕಾನೂನ ಕ್ರಮ ಕೈಗೊಳ್ಳಲಿಲ್ಲ, ಮತ್ತೆ ಇಗ ಇದರ ಬಗ್ಗೆ ಗಮನಹರಿಸಿ ಕಾನೂನ ಕ್ರಮ ಕೈಗೊಳ್ಳುತ್ತಾರೋ ಅಥವಾ ಇಲ್ಲೋ ಕಾದು ನೋಡಬೇಕಾಗಿದೆ,
ವರದಿ ರಾಮಚಂದ್ರ ಹ ಕುಕಡಿ ರಾಮದುರ್ಗ























































