13,594 total views
ಸುರಪುರ: ನಗರದಲ್ಲಿ ದಸರಾ ಹಬ್ಬದ ಸಂದರ್ಭದಲ್ಲಿ ತಲೆದೋರಿದ್ದ ಕುಡಿಯುವ ನೀರಿನ ಸಮಸ್ಯೆಯನ್ನು ತ್ವರಿತವಾಗಿ ಪರಿಹರಿಸಿದ ಸುರಪುರ ನಗರಸಭೆಯ ಪೌರಾಯುಕ್ತರು ಮತ್ತು ಮಾಜಿ ಸಚಿವರಾದ ನರಸಿಂಹ ನಾಯಕ (ರಾಜುಗೌಡ)ರಿಗೆ ನಗರಸಭೆ ಸದಸ್ಯ ನರಸಿಂಹಕಾಂತ ಪಂಚಮಗಿರಿ ಅವರು ಧನ್ಯವಾದ ಸಲ್ಲಿಸಿದ್ದಾರೆ.
ಸುರಪುರದಲ್ಲಿರುವ ಬಿಜೆಪಿ ಕಛೇರಿಯಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಸಂದರ್ಭದಲ್ಲಿ ನಗರದ ನೀರಿನ ಸಮಸ್ಯೆಗಳನ್ನು ಬಗೆಹರಿಸುವಂತೆ ಮನವಿ ಮಾಡಿದರು.
ತ್ವರಿತ ಸ್ಪಂದನೆಗೆ ಮೆಚ್ಚುಗೆ
“ಕಳೆದ ನಾಲ್ಕು-ಐದು ದಿನಗಳ ಹಿಂದೆ ದಸರಾ ಹಬ್ಬದ ಸಮಯದಲ್ಲೇ ಕುಡಿಯುವ ನೀರಿನ ಸಮಸ್ಯೆ ಉಂಟಾಗಿತ್ತು.
ಸಮಸ್ಯೆ ಜಟಿಲವಾದಾಗ ಮಾಜಿ ಸಚಿವರಾದ ರಾಜು ಗೌಡರಿಗೆ ಮನವಿ ಮಾಡಿದ್ದಾಗಿ ತಿಳಿಸಿದ ತಕ್ಷಣವೇ ಅವರು ಬೋರ್ಡಿನ ಮಾಜಿ ಅಧ್ಯಕ್ಷರಾದ ಕಾರಣ ಸಂಬಂಧಪಟ್ಟ ಅಧಿಕಾರಿಗಳಿಗೆ ಮತ್ತು ಇಂಜಿನಿಯರ್ ಮತ್ತು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮಾತನಾಡಿ, ಸಮಸ್ಯೆ ಪರಿಹರಿಸುವಂತೆ ಸೂಚಿಸಿದರು. ಇದರ ಫಲವಾಗಿ ಗಂಭೀರವಾಗಿದ್ದ ನೀರು ಸರಬರಾಜು ಸಮಸ್ಯೆಯನ್ನು ಎರಡು-ಮೂರು ದಿನಗಳಲ್ಲಿ ಸರಿಪಡಿಸಲಾಯಿತು. ಕೇವಲ ಎರಡು ದಿನದಲ್ಲಿ ನೀರಿನ ಸಮಸ್ಯೆ ಪರಿಹಾರ ಮಾಡಿದ ರಾಜು ಗೌಡರ ಜನಪರ ಕಾಳಜಿಗೆ ನನ್ನ ಧನ್ಯವಾದಗಳು, ಎಂದು ಹೇಳಿದರು. ಅಲ್ಲದೆ, ಸುರಪುರಕ್ಕೆ 24 ಗಂಟೆ ನೀರು ಒದಗಿಸುವ ಕಾರ್ಯ ರಾಜು ಗೌಡರ ಐತಿಹಾಸಿಕ ಸಾಧನೆ ಯಾಗಿದೆ.
ನೀರಿನ ಸಮಸ್ಯೆ ಬಗ್ಗೆ ನಮ್ಮ ನಗರಸಭೆಯ ಪೌರಾಯುಕ್ತರು ಸ್ಪಂದನೆ ನೀಡಿ ನೀರಿನ ಸಮಸ್ಯೆಯನ್ನು ಬಗೆಹರಿಸಲು ಅವರ ಕೆಲಸಕ್ಕೆ ಶ್ಲಾಘನೀಯ ಎಂದು ಹೇಳಿದರು
ಐತಿಹಾಸಿಕ ಬಾವಿ ಸಂರಕ್ಷಣೆಗೆ ಒತ್ತಾಯ.
ಈ ಸಂದರ್ಭದಲ್ಲಿ ಅವರು ನಗರಸಭೆಯ ಪೌರಾಯುಕ್ತರು ಮತ್ತು ಅಧ್ಯಕ್ಷರಿಗೆ ಕೆಲವು ಪ್ರಮುಖ ಮನವಿಗಳನ್ನು ಮಾಡಿದರು.
ನಗರದೊಳಗೆ ಮುಂದೆ ನೀರಿನ ಸಮಸ್ಯೆ ಉದ್ಭವಿಸ ಬಾರದೆಂದರೆ ಇರುವ ಮಿನಿ ಕುಡಿಯುವ ನೀರಿನ ಸರಬರಾಜು ಬೋರ್ವೆಲ್ ಗಳು ರಿಪೇರಿ ಕೆಲಸ ವ್ಯವಸ್ಥೆಯನ್ನು ಕೂಡಲೇ ಮಾಡಬೇಕು.
ಐತಿಹಾಸಿಕ ಯಲ್ಲಪ್ಪನ ಬಾವಿ ಕುಡಿಯಲು ರುಚಿಕರವಾಗಿದ್ದು ಈಗ ಈ ಬಾವಿಯನೀರು ಕುಡಿಯಲು ಯೋಗ್ಯವಾಗಿದೆ ಅಥವಾ ಇಲ್ಲ , ಅದನ್ನು ಲ್ಯಾಬ್‌ಗೆ ಕಳುಹಿಸಿ ಪರೀಕ್ಷೆ ಮಾಡಿಸಬೇಕು. ಪುರಾತನ ಬಾವಿಯ ತಡೆಗೋಡೆಯು ಸ್ಥಿತಿಲ ಗೊಂಡಿದ್ದು ಐತಿಹಾಸಿಕ ಬಾವಿಗೆ ತಡೆಗೋಡೆ ನಿರ್ಮಿಸಿ, ಒಬ್ಬ ಕಾವಲುಗಾರನನ್ನು ನೇಮಿಸಬೇಕು ಹಾಗೂ ಸಿಸಿ ಕ್ಯಾಮೆರಾ ಅಳವಡಿಸಬೇಕು.
ಬಾವಿಯ ನೀರನ್ನು ಸಾರ್ವಜನಿಕರಿಗೆ ಕುಡಿಯಲು ಯೋಗ್ಯ ವಾಗುವಂತೆ ಕ್ರಮ ಕೈಗೊಳ್ಳಬೇಕು. ಸುರಪುರ ನಗರದಲ್ಲಿರುವ ಐತಿಹಾಸಿಕ ಬಾವಿಗಳ ಸ್ವಚ್ಛತೆ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಜಿತೇಂದ್ರ ಸಿಂಗ್ ಠಾಕೂರ್, ರಾಜೇಶ್ ಜೋಶಿ, ಈಶ್ವರ್ ನಾಯಕ,ಗುರುರಾಜ್ ಅಗ್ನಿಹೋತ್ರಿ, ಅಮೃತಗೌಡ ಪಾಟೀಲ್ ಮುಂತಾದ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.























































