11,497 total views
ಸುರಪುರ :ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಹಾನಿಗೊಳಗಾದ ಗ್ರಾಮದ ಪ್ರದೇಶಗಳಿಗೆ ಮಾನ್ಯ ಯಾದಗಿರಿ ಜಿಲ್ಲಾಧಿಕಾರಯಾದ ಬೋಯರ್ ಹರ್ಷಲ್ ನಾರಾಯಣರಾವ್ ಭೇಟಿ ನೀಡಿ ಬೆಳೆಗಳನ್ನು ಪರಿಶೀಲಿಸಿದರು ಸುರಪುರ ತಾಲೂಕಿನ ಗ್ರಾಮಗಳಾದ ದೇವಪುರ. ನಾಗರಾಳ ಹoದ್ರಾಳ.ಕೋನಾಳ .ದೇವತ್ಕಲ್ ಮುಂತಾದ ಗ್ರಾಮಗಳಿಗೆ ಭೇಟಿ ನೀಡಿ ಅವರು ರೈತರ ಬೆಳೆದ ಹತ್ತಿ.ತೊಗರಿ ಬೆಳೆಗಳನ್ನು ಪರಿಶೀಲಿಸಿ ಮಾಹಿತಿ ಪಡೆದು ಈ ಸಂದರ್ಭದಲ್ಲಿ ಮಾನ್ಯ ತಹಶೀಲ್ದಾರಾದ ಎಚ್ ಎಸ್ ಸರಕಾವಾಸ ಕಂದಾಯ ನಿರೀಕ್ಷಕರು ಮಲ್ಕಜಪ್ಪ .Ad ಚೆನ್ನಬಸಪ್ಪ .AEO ಶ್ರೀಧರ್. ದೇವಪುರ ಗ್ರಾಮ ಲೆಕ್ಕಧಿಕಾರಿಗಳಾದ ರವಿ ಓ ಎಚ್. ನಾಗರಾಳ ಗ್ರಾಮದ ಲೆಕ್ಕಧಿಕಾರಿಗಳಾದ ದುಶಾಂತ ದೇವತ್ಕಲ್ ಗ್ರಾಮ ಲೆಕ್ಕಾಧಿಕಾರಿಗಳು ಉಪಸ್ಥಿತರಿದ್ದರು ನಾಗರಾಳ ಗ್ರಾಮದ ಹೊಲಕ್ಕೆ ಮಾನ್ಯ ಜಿಲ್ಲಾ ಅಧಿಕಾರಿಗಳು ಭೇಟಿ ನೀಡಿದ ಹಿಡಿದ ಸಂದರ್ಭದಲ್ಲಿ ರೈತ ಮುಖಂಡ ಗೋವಿಂದರಾಯ ಹುಲಕಲ್ ಅವರು ಮಾತನಾಡಿ ರೈತರು ಬೆಳೆದ ಹತ್ತಿ ತೊಗರಿ ಬೆಳೆಗಳಿಗೆ ಸತತ ಮಳೆಯಿಂದ ಬೆಳೆಗಳು ಸಂಪೂರ್ಣ ನಾಶವಾಗಿವೆ ಅದಕ್ಕೆ ತಕ್ಕಂತೆ ಪರಿಹಾರವನ್ನು ಘೋಷಿಸಬೇಕೆಂದು ಮತ್ತು ರೈತರ ಸಾಲವನ್ನು ಸಂಪೂರ್ಣವಾಗಿ ಮನ್ನ ಮಾಡಬೇಕೆಂದು ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಸರಕಾರಕ್ಕೆ ಒತ್ತಾಯಿಸಿದರು
ಈ ಸಂದರ್ಭದಲ್ಲಿ ನಾಗರಾಳ ಗ್ರಾಮದ ಮುಖಂಡರಾದ. ತಿಪ್ಪಣ್ಣ ಚೆನ್ನೂರ. ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯರಾದ ಈರಣ್ಣಗೌಡ. ದೊಡ್ಡಪ್ಪಗೌಡ. ಭೀಮಣ್ಣ ಗುಡುಗುಂಟಿ ಅಂಬ್ಲಯ್ಯಗೌಡ ಯಂಕಣ್ಣಗೌಡ ಗಚ್ಚಿನಮನಿ, ಶರಣಗೌಡ. ಶರಮಸಾಬ್.























































