13,585 total views
ಸಿರುಗುಪ್ಪ : ನಗರದ ಬಸ್ ಡಿಪೋ ಘಟಕದ ಮುಂಭಾಗದಲ್ಲಿ ಮಹರ್ಷಿ ವಾಲ್ಮೀಕಿ ವಿದ್ಯಾಭಿವೃದ್ದಿ ಟ್ರಸ್ಟ್ ಹಾಗು ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಸಹಯೋಗದೊಂದಿಗೆ “ರಾಜ ವೀರ ಮದಕರಿ ನಾಯಕ” ಇವರ ನಾಮಫಲಕ ವೃತ್ತವನ್ನು ಗುರುವಾರ ಮಾಜಿ ಶಾಸಕ ಎಂ.ಎಸ್. ಸೋಮಲಿಂಗಪ್ಪ ಹಾಗೂ ಟ್ರಸ್ಟ್ ಅಧ್ಯಕ್ಷ ಬಿ.ಎಂ. ಸತೀಶ್ ಅವರು ಅನಾವರಣಗೊಳಿಸಿದರು.
ಮಹಾ ಸಭಾ ಅಧ್ಯಕ್ಷ ಟಿ.ನರಸಿಂಹ ನಾಯಕ, ಕುರುಬ ಸಂಘದ ಕಾರ್ಯದರ್ಶಿ ಎನ್.ಕರಿಬಸಪ್ಪ. ಸರ್ವಧರ್ಮಿ ಡಾ.ಬಿ.ಆರ್.ಅಂಬೇಡ್ಕರ್ ಸಂಘದ ಅಧ್ಯಕ್ಷ ಕೊಡ್ಲೆ ಮಲ್ಲಿಕಾರ್ಜುನ, ಎಸ್.ಸಿ, ಎಸ್.ಟಿ ನೌಕರರ ಸಂಘದ ಅಧ್ಯಕ್ಷ ಎನ್.ಬಿ.ವೆಂಕಟೇಶ್ ಮಾತನಾಡಿದರು.
ನಿವೃತ್ತ ಪ್ರಾಂಶುಪಾಲ ಬಸವರಾಜ್, ಪ್ರಧಾನ ಕಾರ್ಯದರ್ಶಿ ಬಾಗೆವಾಡಿ ಮುದುಕಪ್ಪ ಹಳೆಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿರೇಶ್, ಮುಖಂಡರಾದ ಸಣ್ಣ ವೆಂಕಟೇಶ್, ಯಲ್ಲಪ್ಪ, ಈರಣ್ಣ, ಹೊನ್ನಪ್ಪ, ರಾಘವೇಂದ್ರ ಸೇರಿದಂತೆ ಟ್ರಸ್ಟನ ನಿರ್ದೇಶಕರು ಹಾಗೂ ಮಹಾ ಸಭಾದ ಪದಾಧಿಕಾರಿಗಳು ಭಾಗವಹಿಸಿದ್ದರು.
ಸಿರುಗುಪ್ಪ ನಗರದ ನಗರದ ಬಸ್ ಡಿಪೋ ಘಟಕದ ಮುಂಭಾಗದಲ್ಲಿ ಮಹರ್ಷಿ ವಾಲ್ಮೀಕಿ ವಿದ್ಯಾಭಿವೃದ್ದಿ ಟ್ರಸ್ಟ್ ಹಾಗು ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಸಹಯೋಗದೊಂದಿಗೆ “ರಾಜ ವೀರ ಮದಕರಿ ನಾಯಕ” ಇವರ ನಾಮಫಲಕ ವೃತ್ತವನ್ನು ಮಾಜಿ ಶಾಸಕ ಎಂ.ಎಸ್. ಸೋಮಲಿಂಗಪ್ಪ ಹಾಗೂ ಟ್ರಸ್ಟ್ ಅಧ್ಯಕ್ಷ ಬಿ.ಎಂ. ಸತೀಶ್ ಅವರು ಅನಾವರಣಗೊಳಿಸಿದರು.
ವರದಿ ಶೇಖರ್ ಹೆಚ್























































