13,706 total views
ಬೆಳಗಾಂವಿ ಜಿಲ್ಲಾ ರಾಮದುರ್ಗ ತಾಲೂಕಿನ ಕಲಹಾಳ ಗ್ರಾಮದವರಾಗಿದ್ದು, ಬಾಲ್ಯದಲ್ಲಿ ಕಲಹಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾಭ್ಯಾಸ ಮುಗಿಸಿ ಪ್ರೌಢ ಶಿಕ್ಷಣ ಮತ್ತು ಪಿಯು ಶಿಕ್ಷಣವನ್ನು ಬದಾಮಿ ತಾಲೂಕಿನಲ್ಲಿ ಮುಗಿಸಿ ಉನ್ನತ ಶಿಕ್ಷಣವನ್ನು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯಲ್ಲಿ ಬಿಎ ಪದವಿ ಪಡೆದು ನಂತರ ಕನ್ನಡದಲ್ಲಿ ಎಂ ಎ ಶಿಕ್ಷಣ ಪಡೆದಿರುತ್ತಾರೆ, ಇವರು ಶಿಕ್ಷಣ ವೃತ್ತಿಯನ್ನು ದಿನಾಂಕ 05- 01- 1995 ರಲ್ಲಿ ಒಂದು ಸಣ್ಣ ಗ್ರಾಮವಾದ ತಿಮ್ಮಾಪುರ ಎಸ್ಎ ಗ್ರಾಮದಲ್ಲಿ ನೌಕರಿಯನ್ನು ಪ್ರಾರಂಭಿಸಿದರು ಅಲ್ಲಿಂದ ಇಲ್ಲಿಯವರೆಗೆ ಸುಮಾರು ಐದು ಸರಕಾರಿ ಶಾಲೆಗಳಲ್ಲಿ 25 ವರ್ಷಗಳಿಂದ ಪ್ರಧಾನ ಗುರುಗಳಾಗಿ ಒಳ್ಳೆಯ ಸೇವೆ ಸಲ್ಲಿಸಿ ಜನ ಮೆಚ್ಚಿಗೆ ಪಡೆದಿದ್ದಾರೆ. ಇವರು ತಮ್ಮ ಹವ್ಯಾಸಗಳನ್ನು ಒಳ್ಳೆಯ ತರಹದಿಂದ ಬೆಳೆಸಿಕೊಂಡು ಶಾಲಾ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಜೊತೆಗೆ ಆಟೋಟ ಕುರಿತು ಹುಮ್ಮಸಿನಿಂದ ಶಾಲಾ ಮಕ್ಕಳಿಗೆ ಪ್ರೇರೇಪಿಸಿ ಇನ್ನಿತರ ಸಂಸ್ಕೃತಿಕ ಕಾರ್ಯಕ್ರಮಗಳ ಕಡೆ ಪ್ರೇರಣೆ ಮಾಡಿ ಅನೇಕ ಆಟೊಟ ಕಾರ್ಯಕ್ರಮದಡಿ ಜಿಲ್ಲಾ ಹಾಗೂ ತಾಲೂಕು ಮಟ್ಟದವರೆಗೆ ಮಕ್ಕಳನ್ನು ಕರೆದೊಯ್ಯಲು ಪ್ರೇರೇಪಿಸಿರುತ್ತಾರೆ, ಮತ್ತು ಮಕ್ಕಳನ್ನು ಜಾನಪದ ಹಾಡು ನಾಟಕ ಅಭಿನಯದ ಕಥಿ ಕಾದಂಬರಿಗಳು ನಿಬಂಧಗಳ ವಿಚಾರಗಳನ್ನು ತಿಳಿಹೇಳಿ ಮಕ್ಕಳಿಗೆ ಪ್ರಶಸ್ತಿ ಪಡೆಯಲು ಕಾರಣಿ ಭೂತರಾಗಿ ಕೆಲಸ ಮಾಡಿದ್ದಾರೆ, ಇವರು ಮಾಡಿದಂತಹ ಸೇವೆಯಾಗಿ ತಮ್ಮ ಶಿಕ್ಷಣ ಇಲಾಖೆಯ ಮತ್ತು ಬೇರೆ ಬೇರೆ ಸೇವಾ ಸಂಘ ಸಮಿತಿಯವರಿಂದ ಅನೇಕ ಪ್ರಶಸ್ತಿಳಿಗೆ ಬಾಜಿನರಾಗಿದ್ದಾರೆ 1) ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಜನ ಮೆಚ್ಚಿದ ಶಿಕ್ಷಕ 2) ಶಿವ ಪ್ರತಿಷ್ಠಾಪನ ಸೇವಾ ಸಮಿತಿಯಿಂದ ಉತ್ತಮ ಶಿಕ್ಷಕರು ಪ್ರಶಸ್ತಿ 3) ಕರ್ನಾಟಕ ಶಿಕ್ಷಕರ ಸಂಘಗಳ ಪರಿಷತ್ ರಾಜ್ಯ ಘಟಕ ಧಾರವಾಡ ಇವರಿಂದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ 4) 2024 25 ರ ಸಾಲಿನಲ್ಲಿ ಡಾಕ್ಟರ್ ಸರ್ವಪಲ್ಲಿ ರಾಧಾಕೃಷ್ಣನ್ ಶಿಕ್ಷಣ ಪರಿಷತ್ ಕರ್ನಾಟಕ ಪ್ರೆಸ್ ಕ್ಲಬ್ ಸಹಭಾಗಿತ್ವದಲ್ಲಿ ಆಯೋಜಿಸಿದ ಗುರು ನಮನ ಕಾರ್ಯಕ್ರಮ ರವೀಂದ್ರ ಕಲಾಕ್ಷೇತ್ರ ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಸೇವಾರತ್ನ ಪ್ರಶಸ್ತಿ ಪಡೆದುಕೊಂಡಿದ್ದಾರೆ,























































