6,826 total views
ಚಿಂಚೋಳಿ ತಾಲೂಕಿನ ತೆಲಂಗಾಣ ಗಡಿ ಭಾಗವಾದ ಮಿರಿಯಾಣ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುವ ಮಿರಿಯಾಣ ಹಾಗೂ ಭೈರಂಪಳ್ಳಿ ರಸ್ತೆ ಪುಳತೋಟ ಹತ್ತಿರ ನೆನ್ನೆ ರಾತ್ರಿಯಿಂದ ಸೂರಿಯುತ್ತಿರುವ ಮಳೆಯಿಂದ ಸಂಪೂರ್ಣ ರಸ್ತೆ ಸಂಪರ್ಕ ಕಳೆದುಕೊಂಡಿದೆ. ಅಧಿಕ ಮಳೆಯಿಂದ ಬ್ರಿಜ್ ಸಂಪೂರ್ಣ ನೆಲೆ ಸಮವಾಗಿದೆ ಭರಂಪಳ್ಳಿ ತಾಂಡಾ ಮತ್ತು ಜಯನಗರ ತಾಂಡಾ ಪುಳತೋಟ ಹಾಗೂ ಭೈರಂಪಳ್ಳಿ ಗ್ರಾಮಕ್ಕೆ ತಾತ್ಕಾಲಿಕ ವಾಗಿಯೂ ಬೇರೆ ರಸ್ತೆ ಇಲ್ಲದ ಕಾರಣ ಇದರಿಂದ ಜನಸಾಮಾನ್ಯರು ದಸರಾ ಹಬ್ಬದ ಅಂಗವಾಗಿ ಸಂತೆಗೆ ಹೋಗಿದವರು ಹಾಗೂ ಆಸ್ಪತ್ರೆಗೆ ಹೋಗಿದವರು ಮನೆಗೆ ಬರುವ ಸಲುವಾಗಿ ಪರದಾಡುವಂತಾಗಿದೆ.























































