![]()
ಸಿರುಗುಪ್ಪ: 2025-26ನೇ ಸಾಲಿನ ಕಲಬುರಗಿ ವಿಭಾಗ ಮಟ್ಟದ ದಸರಾ ಕ್ರೀಡಾ ಕೂಟಗಳು ಕೊಪ್ಪಳ ಜಿಲ್ಲೆಯಲ್ಲಿ ಸೋಮವಾರ ನಡೆದ ಕುಸ್ತಿ ಪಂದ್ಯಾವಳಿಯಲ್ಲಿ ಸಿರುಗುಪ್ಪ ತಾಲ್ಲೂಕಿನ ಕ್ರೀಡಾಪಟುಗಳು ವಿಜೇತರಾಗಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದರು.
ಆಯ್ಕೆಯಾದ ಕ್ರೀಡಾಪಟುಗಳಾದ ವೈ.ಮಲ್ಲಿಕಾರ್ಜುನ, ಕಿರಣ್, ರಾಮೂರ್ತಿ, ಉಸ್ಮಾನ್, ದಾದಾವಲಿ, ವೀರೇಶ್, ರಾಘವೇಂದ್ರ, ಬಜಾರಪ್ಪ, ಅಂಬರೇಶ, ಮಂಜು, ಗಂಭೀರ, ಮನ್ಮಥ, ಚಂದ್ರ ಅವರನ್ನು ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಬಿ.ರಮೇಶ ಅಭಿನಂದಿಸಿದರು. ತರಬೇತಿದರಾದ ಉಪೇಂದ್ರ, ರಮೇಶ್, ಚೆನಪ್ಪ, ಈರಣ್ಣ, ವೈ.ಡಿ,ವೆಂಕಟೇಶ್ ಇದ್ದರು.
ವರದಿ ಶೇಖರ್ ಹೆಚ್


























































