![]()
ಗಂಗಾವತಿ: ಸ್ಟಾರ್ ನಟರ ಹಮ್ಮುಬಿಮ್ಮುಗಳಿಂದಾಗಿ ಕನ್ನಡ ಚಿತ್ರರಂಗ ಸೊರಗುತ್ತಿದ್ದು, ಕಲಾವಿದರಿಗೆ, ತಂತ್ರಜ್ಞರಿಗೆ ಕೆಲಸವೆ ಇಲ್ಲದಂತಾಗಿದೆ, ಚಿತ್ರರಂಗವನ್ನು ನಂಬಿದವರ ಬದುಕು ಬೀದಿಗೆ ಬಂದಿದೆ ಕಾರಣ ಪ್ರೇಕ್ಷಕರ ಕೊರತೆ ಕನ್ನಡ ಚಿತ್ರರಂಗ ಉಳಿದು ಬೆಳೆಯಬೇಕಾಗದರೆ ಪ್ರತಿಯೊಬ್ಬರು ಪ್ರೋತ್ಸಾಹಿಸುವ ಅಗತ್ಯವಿದೆ ಎಂದು ಸಂಕಲ್ಪ ಎಜ್ಯುಕೇಷನ್ ಟ್ರಸ್ಟ್ನ ಕಾರ್ಯಾಧ್ಯಕ್ಷ ನಾಗರಾಜ್ ಗುತ್ತೇದಾರ್ ವಕೀಲರು ಕಿವಿಮಾತು ಹೇಳಿದರು.
ಅವರು ನಗರದ ಅಮರ್ ಚಿತ್ರ ಮಂದಿರದಲ್ಲಿ ಮಾಯಾವಿ ಚಿತ್ರದ ನಾಯಕ ರಘುರಾಂ, ನಾಯಕಿ ನಿಶ್ಚಿತ ಶೆಟ್ಟಿ ಇವರಿಗೆ ಸನ್ಮಾನಿಸಿ ಮಾತನಾಡಿದರು. ಚಿತ್ರಕ್ಕೆ ಹಣ ತೊಡಗಿಸಿದಲ್ಲಿ ವಾಪಾಸ್ಸು ಬರುವ ಕುರಿತು ನಿರ್ಮಾಪಕರು ಚಿಂತೆಗೀಡಾಗಿದ್ದಾರೆ, ಕಾರಣ ಚಿತ್ರರಂಗಕ್ಕೆ ಪ್ರೇಕ್ಷಕ ಬಾರದೆ ಇರುವುದು ಈ ಕೊರತೆ ನೀಗಿಸಬೇಕು ಕನ್ನಡತನಕ್ಕಾಗಿ ಕನ್ನಡ ಚಿತ್ರಗಳನ್ನು ವೀಕ್ಷಿಸಿ ಪ್ರೋತ್ಸಾಹಿಸಿ ಎಂದರು.
ನಾಯಕ ನಟ ರಘುರಾಂ ಮಾತನಾಡಿ, ಮೊದಲ ಬಾರಿಗೆ ಅತ್ಯುತ್ತಮ ಚಿತ್ರ ಮಾಡಿದ್ದು, ತುಂಬಾ ಅದ್ಭುತವಾಗಿ ಚಿತ್ರ ಮೂಡಿಬಂದಿದೆ, ಕೊಪ್ಪಳದವರೇ ನಿರ್ದೇಶಕರಾಗಿದ್ದು ಎಲ್ಲರು ಚಿತ್ರ ವೀಕ್ಷಿಸಿ ಕಲಾವಿದರನ್ನು ಪ್ರೋತ್ಸಾಹಿಸಿ ಎಂದರು. ಚಿತ್ರನಟ ವಿಷ್ಣುತೀರ್ಥ ಜೋಷಿ ಕಲಾವಿದರನ್ನು ಸನ್ಮಾನಿಸಿ ಹುರಿದುಂಬಿಸಿದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹಾಗು ಚಿತ್ರ ನಟ ನಾಗರಾಜ್ ಇಂಗಳಗಿ, ನಗರಸಭೆ ಮಾಜಿ ಅಧ್ಯಕ್ಷ ಕೆ.ವೆಂಕಟೇಶ್, ಚಿತ್ರಮಂದಿರದ ಮಾಲಿಕ ಶಿವರಾಜ್, ಹೊಸಕೇರಿ ಭುವನೇಶಪ್ಪ, ಮಂಜುನಾಥ ಕಟ್ಟಿಮನಿ ಮತ್ತು ಅಯ್ಯಪ್ಪ ಸ್ವಾಮಿ ಇತರರಿದ್ದರು.


























































