ADVERTISEMENT
ADVERTISEMENT
![]()
ಹಾನಗಲ್ಲ: ಹಾನಗಲ್ಲ ತಾಲೂಕಿನ ಮಂತಗಿ ಗ್ರಾಮದಲ್ಲಿ ಎರಡು ತುಂಬಿದ ಟ್ರಾಲಿ ಭಾರ ಎಳೆಯುವ ಟ್ರಾಕ್ಟರ್ ಓಟದ ಸ್ಪರ್ಧೆಯಲ್ಲಿ ಕಿರಣ ಸಾಗರವಳ್ಳಿ ೬೦೦ ಫೋಟ್ ದೂರ ಎಳೆಯುವ ಮೂಲಕ ಪ್ರಥಮ ಸ್ಥಾನ ಪಡೆದರು.
ಇತ್ತೀಚಿನ ದಿನಗಳಲ್ಲಿ ಕೃಷಿ ಚಟುವಟಿಕೆಗೆ ಯಂತ್ರಗಳ ಬಳಕೆ ಅಧಿಕವಾಗಿದೆ. ಟ್ರಾಕ್ಟರ್ ಇಲ್ಲದೆ ಕೃಷಿಯೇ ಇಲ್ಲ ಎನ್ನುವಂತಾಗಿದೆ. ಹೀಗಾಗಿ ಗಜಾನನೋತ್ಸವ ಹಾಗೂ ಈದ್ ಮಿಲಾದ್ ಅಂಗವಾಗಿ ನಡೆಸಿದ ಟ್ರಾಕ್ಟರ್ ಟ್ರಾಲಿ ಜಗ್ಗುವ ಸ್ಪರ್ಧೆಯಲ್ಲಿ ಸುಮಾರು ೩೫ ಟ್ರಾಕ್ಟರ್‌ಗಳು ಭಾಗವಹಿಸಿದ್ದವು. ಒಂದು ನಿಮಿಷದಲ್ಲಿ ಇಡೀ ಭಾರ ಎಳೆಯುವ ಸ್ಪರ್ಧೆ ಇದಾಗಿತ್ತು. ಎರಡನೇ ಬಹುಮಾನ ೫೫೦ ಫೋಟ್ ಎಳೆದ ಪ್ರವೀಣ ಚಿಕ್ಕೇರಿಹೊಸಳ್ಳಿ ಹಾಗೂ ಮೂರನೇ ಬಹುಮಾನ ೫೩೦ ಫೋಟ್ ಎಳೆದ ದಸ್ತಗೀರ ಮಂತಗಿ ಅವರ ಪಾಲಾಯಿತು.
ಸ್ಫರ್ದೆ ಉದ್ಘಾಟಿಸಿ ಮಾತನಾಡಿದ ಜೆಡಿಎಸ್ ತಾಲೂಕು ಅಧ್ಯಕ್ಷ ರಾಮುನಗೌಡ ಪಾಟೀಲ, ಇತ್ತೀಚಿನ ದಿನಗಳಲ್ಲಿ ಕೃಷಿ ಚಟುವಟಿಕೆಗಳಿಗೆ ನಿರಾಸಕ್ತಿ ಮೂಡುತ್ತಿರುವುದು ವಿಷಾದದ ಸಂಗತಿ. ಮಳೆಯ ವೈಪರಿತ್ಯಗಳಿಂದ ನೀರಾವರಿಯ ಸೌಲಭ್ಯಗಳ ಕೊರತೆಗಳಿಂದ ಅತಿವೃಷ್ಟಿ ಅನಾವೃಷ್ಠಿಯ ನಷ್ಟದಿಂದ ರೈತ ಭೂಮಿಗೆ ಹಾಕಿದ ಪರಿಶ್ರಮ ಹಾಗೂ ಹಣ ವ್ಯರ್ಥವಾಗುತ್ತಿದೆ. ಅಲ್ಲದೆ ಹಣವಂತರು ರೈತರ ಭೂಮಿಯನ್ನು ಹೆಚ್ಚು ಬೆಲೆಗೆ ಖರೀದಿಸಿ ಸಾಮಾನ್ಯ ರೈತರು ಭೂಮಿ ಖರಿಧಿಸಲಾರದ ಸ್ಥಿತಿಯಲ್ಲಿದ್ದಾರೆ. ಇಂತಹ ಹಲವು ವೈರುದ್ಧಗಳ ನಡುವೆ ಕೃಷಿ ಚಟುವಟಿಕೆಗಳನ್ನು ಜೀವಂತವಾಗಿಡಬೇಕಾಗಿದೆ. ಅನ್ನದಾತನ ಬೆಂಬಲಕ್ಕೆ ಸರಕಾರ ನಿಲ್ಲಲೇ ಬೇಕು ಇಲ್ಲದಿದ್ದರೆ ರೈತನೆ ಕೃಷಿಯಿಂದ ವಿಮುಕ್ತನಾಗುವ ಕಾಲ ದೂರವಿಲ್ಲ ಎಂದ ಅವರು, ಯಾವುದೇ ಸಂದರ್ಭದಲ್ಲಿ ರೈತರಿಗೆ ಆಗುವ ಅನ್ಯಾಯಗಳ ವಿರುದ್ಧ ನಿಲ್ಲಲು ನಾನು ಸದಾ ನಿಮ್ಮೊಂದಿಗಿದ್ದೇನೆ ಎಂದರು.
ಮಹ್ಮದಸಲೀA ಸಮನಳ್ಳಿ, ಹನುಮಂತಪ್ಪ ಕೋಣನಕೊಪ್ಪ, ಗದಿಗೆಪ್ಪ ತಳವಾರ, ಮಲ್ಲಿಕಾರ್ಜುನ ನೀರಲಗಿ, ಯಲ್ಲಪ್ಪ ಕಳ್ಳಿಮನಿ, ಕುಶಾಲ ಜಾಧವ, ದಸ್ತಗೀರ ಹೀರೂರ, ಮನ್ಸೂರ ಯಳವಟ್ಟಿ, ಅಣ್ಣಪ್ಪ ಈರಕ್ಕನವರ, ವಿಜಯ ತಳವಾರ, ಫರ್ದಿನಹ್ಮದ ಹೀರೂರ, ಮಂಜುನಾಥ ಹಳ್ಳಿಗೊಂಡರ, ಮಂಜಪ್ಪ ನಾಗರೊಳ್ಳಿ, ಸೈಯದಸಾಬ ಹುಲ್ಲಾಳ ಮೊದಲಾದವರು ಈ ಸಂದರ್ಭದಲ್ಲಿದ್ದರು. ಹಾನಗಲ್ಲ ತಾಲೂಕಿನ ಮಂತಗಿ ಗ್ರಾಮದಲ್ಲಿ ನಡೆದ ತುಂಬಿದ ಟ್ರಾಕ್ಟರ್ ಟ್ರಾಲಿ ಎಳೆಯುವ ಸ್ಪರ್ದೆಗೆ ಜೆಡಿಎಸ್ ಅಧ್ಯಕ್ಷ ಆರ್.ಬಿ.ಪಾಟೀಲ ಚಾಲನೆ ನೀಡಿದರು.


























































