![]()
ಕುಮಟಾ: “ಶಾಲಾ ಮಟ್ಟದಲ್ಲಿ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ತೊಡಗುವುದರಿಂದ ಸರ್ವತೋಮುಖ ಅಭಿವೃದ್ಧಿ ಸಾಧಿಸಲು ಕ್ರೀಡೆ ಸಹಕಾರಿಯಾಗಿದೆ” ಎಂದು ಶ್ರೀ ಶಾಂತಾ ಎನ್ ನಾಯಕ ಅಧ್ಯಕ್ಷರು ಗ್ರಾಮ ಪಂಚಾಯತ ಹಿರೇಗುತ್ತಿ ನುಡಿದರು.
ಅವರು ಸೆಕೆಂಡರಿ ಹೈಸ್ಕೂಲ್ ಕ್ರೀಡಾಂಗಣದಲ್ಲಿ ನಡೆದ ೨೦೨೫-೨೬ನೇ ಸಾಲಿನ ಗೋಕರ್ಣ ವಲಯ ಮಟ್ಟದ ಕ್ರೀಡಾಕೂಟವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. “ಸದೃಢ ದೇಹದಲ್ಲಿ ಸದೃಢ ಮನಸ್ಸನ್ನೂ ಹುಟ್ಟು ಹಾಕುವುದೇ ಶಿಕ್ಷಣ, ಹೈಸ್ಕೂಲ್‌ನವರು ಅತೀ ಅಚ್ಚುಕಟ್ಟಾಗಿ ಕ್ರೀಡಾಕೂಟ ಸಂಘಟಿಸಿದ್ದಾರೆ ಕ್ರೀಡಾಕೂಟ ಯಶಸ್ವಿಯಾಗಲಿ” ಎಂದು ಶುಭಕೋರಿದರು. ಕ್ರೀಡಾಧ್ವಜಾರೋಹಣ ನೆರವೇರಿಸಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಹಾತ್ಮಾಗಾಂಧಿ ವಿದ್ಯಾವರ್ಧಕ ಸಂಘ ಹಿರೇಗುತ್ತಿ ಅಧ್ಯಕ್ಷರಾದ ಶ್ರೀ ಹೊನ್ನಪ್ಪ ಎನ್ ನಾಯಕ ಮಾತನಾಡಿ “ದೈಹಿಕ ಚಟುವಟಿಕೆಗಳಿಂದಾಗಿ ದೈಹಿಕ ಸಧÀÈಡತೆ ದೊರಕುವುದಲ್ಲದೆ ಬುದ್ಧಿಯೂ ವಿಕಾಸಗೊಳ್ಳುವುದು. ಅದಕ್ಕಾಗಿ ಕ್ರೀಡಾಕೂಟ ನಡೆಸಲು ಯೋಜಕರು ಅತೀ ಮುಖ್ಯ ಯೋಜಕರಿಂದ ಕ್ರೀಡಾಕೂಟ ಯಶಸ್ವಿಯಾಗುತ್ತದೆ” ಎಂದರು.
ಕ್ರೀಡಾಜ್ಯೋತಿ ಬೆಳಗಿಸಿ ಮಾತನಾಡಿದ ಶ್ರೀ ಸುನೀಲ್ ಪೈ ಧರ್ಮದರ್ಶಿಗಳು ಮಹಾಲಸಾ ಸಿದ್ಧಿವಿನಾಯಕ ಟೆಂಪಲ್‌ಟ್ರಸ್ಟ್ ಮಾದನಗೇರಿ ಮಾತನಾಡಿ “ಆರೋಗ್ಯವೇ ಮಹಾಭಾಗ್ಯ” ಎಂಬ ಮಾತು ಕ್ರೀಡೆಯ ಮೂಲಕ ಸಾರ್ಥಕವಾಗುತ್ತದೆ ಎಂದರು.
ಶ್ರೀ ಉದಯ ನಾಯ್ಕ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕುಮಟಾ ಮಾತನಾಡಿ “ಕ್ರೀಡೆಯಲ್ಲಿ ಶಿಸ್ತು, ಜೀವನದಲ್ಲಿ ಉತ್ಸಾಹ” ಎಂಬAತೆ ಕ್ರೀಡೆ ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ. ಆತ್ಮವಿಶ್ವಾಸ, ನೆನಪಿನ ಶಕ್ತಿ. ಏಕಾಗ್ರತೆ ಮೊದಲಾದ ಗುಣಗಳನ್ನು ಹೆಚ್ಚಿಸುತ್ತದೆ ಎಂದರು.
ಶಾಲೆಯ ದೈಹಿಕ ಶಿಕ್ಷರಾದ ನಾಗರಾಜ ಜಿ ನಾಯಕ ಪ್ರತಿಜ್ಞಾ ವಿಧಿ ನೀಡಿದರು. ಶ್ರೀ ಬಿ ಜಿ ನಾಯಕ ದೈಹಿಕ ಶಿಕ್ಷಣ ಪರಿವೀಕ್ಷಕರು ಕುಮಟಾ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಶ್ರೀ ನಾಗರಾಜ ಹಿತ್ತಲಮಕ್ಕಿ, ವಿನಾಯಕ ವೈದ್ಯ, ಮೋಹನ ಬಿ ನಾಯಕ ಕೆರೆಮನೆ, ಶ್ರೀಕಾಂತ ನಾಯಕ, ಎನ್.ಟಿ.ನಾಯಕ ಅಡ್ಲೂರಮನೆ, ಮೋಹನ ಉದ್ದಂಡ ಗಾಂವಕರ, ಗಿರೀಶ ವಿ ನಾಯಕ, ವಿವೇಕ ಬೀರಣ್ಣ ಕವರಿ, ಉದ್ದಂಡ ಗಾಂವಕರ, ಹಿರೇಗುತ್ತಿ ಕಾಲೇಜಿನ ಪ್ರಿನ್ಸಿಪಾಲ್ ರಾಜೀವ ನಾಯ್ಕ ಮತ್ತು ನಾಗರಾಜ ಗಾಂವಕರ, ಬ್ರಹ್ಮಜಟಕ ಯುವಕ ಸಂಘದ ಆಕಾಶ ಬಾಲಚಂದ್ರ ನಾಯಕ, ಪ್ರೀತಮ್ ಉಮೇಶ ಗಾಂವಕರ, ಮುಖ್ಯಾಧ್ಯಾಪಕಾರದ ಗಂಗಾಧರ ಭಟ್ಟ್, ಸಿ.ಆರ್.ಪಿ ರೋಹಿದಾಸ ನಾಯ್ಕ ಉಪಸ್ಥಿತರಿದ್ದರು.
ಕಾರ್ಯಕ್ರಮ ಸಿಂಧುಸAಗಡಿಗರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಶಾಲಾ ಮುಖ್ಯಾಧ್ಯಾಪಕ ವಿಶ್ವನಾಥ ಪಿ ಬೇವಿನಕಟ್ಟಿ ಸರ್ವರನ್ನೂ ಸ್ವಾಗತಿಸಿದರು. ಶಿಕ್ಷಕ ಎನ್ ರಾಮು ಹಿರೇಗುತ್ತಿ ನಿರೂಪಣೆ ಮಾಡಿದರು. ಮಹಾದೇವ ಗೌಡ ವಂದಿಸಿದರು. ಹೈಸ್ಕೂಲ್ ಶಿಕ್ಷಕ ವೃಂದದವರು ಹಾಗೂ ಗೋಕರ್ಣ ವಲಯದ ಎಲ್ಲಾ ಪ್ರೌಢಶಾಲೆಗಳ ದೈಹಿಕ ಶಿಕ್ಷಣ ಶಿಕ್ಷಕರು, ಸಹಶಿಕ್ಷಕರು ಕ್ರೀಡಾಪಟುಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದರು. ನಂತರ ಕ್ರೀಡಾಕೂಟದ ಸ್ಪರ್ಧಾ ವಿಜೇತರಿಗೆ ಪದಕ, ಪ್ರಶಸ್ತಿ ಪತ್ರ ನೀಡಲಾಯಿತು.


























































