![]()
ನವ ಪೀಳಿೆಗೆಗೆ ಯಕ್ಷಗಾನ ಕಲೆ ಉಳಿಸಿ, ಬೆಳೆಸುವ “ಮೂಡಲಪಾಯ ಯಕ್ಷೋತ್ಸವ” ವಿಜೃಂಭಣೆ ಯಾಗಿ ಕನ್ನಡ ಭವನದಲ್ಲಿ ಉದ್ಘಾಟಿಸಿದ ಮಹನೀಯರು.
ಈ “ಮೂಡಲಪಾಯ ಯಕ್ಷಗಾನ, ತಾಳಮೇಳ, ವಿಚಾರ ಸಂಕಿರಣವನ್ನು ಮಾನ್ಯ ಡಾ:ಚಿಕ್ಕಣ್ಣ ಯಣ್ಣೆಕಟ್ಟೇ, ಡಾ: ತಲ್ಲೂರು ಶಿವರಾಮ ಶೆಟ್ಟಿ, ಶ್ರೀ ವಿದ್ಯಾಧರ್ ಜಾಲವಲ್ಲಿ ಹಿರಿಯರು, ಇಲಾಖೆ ಗಣ್ಯರು ದೀಪ ಬೆಳಗಿಸಿ ಚಾಲನೆ ಕೊಟ್ಟು, ಸುದ್ದಿ ಗಾರರೊಂದಿಗೆ ಮಾತನಾಡಿ; “ಅದ್ಭುತವಾದ ಕರಾವಳಿ ಭಾಗದ ಸಂಸ್ಕಾರದ ಯಕ್ಷಗಾನ ಸೊಗಡಿನ ಕಲೆಯನ್ನು ಯುವ ಪೀಳಿಗೆಗೆ, ಭಾರತದ ಭವ್ಯವಾದ ಪುಣ್ಯ ಕಥೆಗಳನ್ನು ಮುಂಚೂಣಿಗೆ ತರುವ, ತಿಳುಸುವ ಭಗೀರಥ ಪ್ರಯತ್ನ ಕರ್ನಾಟಕ ಯಕ್ಷಗಾನ ಆಕಾಡೆಮಿ, ಸಂಸ್ಕೃತಿ ಇಲಾಖೆ ಪ್ರೋತ್ಸಾಹದಿಂದ ರಾಜ್ಯಾದ್ಯಂತ ಕಲೆಗೆ ಜೀವ ತುಂಬುವ, ವಿಚಾರ ಸಂಕಿರಣ ತಾಳಮೇಳ, ಮುಖಾಂತರ ಮಹತ್ಕಾರ್ಯ ಆಗುತ್ತಿದೆ” ಎಂದರು.
ವಿಶೇಷವೆಂದರೆ ಡಾ: ತಲ್ಲೂರು ಶಿವರಾಮ ಶೆಟ್ಟಿ, ಕಳೆದ 5 ದಶಕಗಳಿಂದ ಈ ಅದ್ಭುತ ಯಕ್ಷಗಾನ ಕಲೆ ಉಳಿಸಿ, ಸಮ್ಮೇಳನಗಳನ್ನು ಆಯೋಜಿಸಿ ಬೆಳೆಸುತ್ತಾ ಬಂದಿದ್ದಾರೆ.
ಇಡೀ ದಿನದ “ಮೂಡಲಪಾಯ ಯಕ್ಷಗಾನ ತಾಳಮೇಳ, ವಿಚಾರ ಸಂಕಿರಣ, ಅಂಗದ ಸಂಧಾನ, ವಿಷಯ ಮಂಡನೆ, ಮೂ. ಬೊಂ ಬೆಯಾಟ, ಹಿಮ್ಮೇಳ ವಿದ್ವಾಂಸರ ಮುಖಾಂತರ ಉಪಚಾರದೊಡನೆ ಯಶಸ್ವಿಯಾಗಿ ಜರುಗಿತು.


























































