![]()
ವಾಲ್ಮೀಕಿ ಸಮಾಜಕ್ಕೆ ನ್ಯಾಯ, ಸೌಲಭ್ಯ ನೀಡಲು, ಮತ್ತು ಬೆಂಗಳೂರು ಪೊಲೀಸ್ ಕಮಿಷನರ್ ಶ್ರೀ ಬೀ.ದಯಾನಂದ್ ಅಮಾನತು ಹಿಂಪಡೆಯಲು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
“ಕರ್ನಾಟಕ ರಾಜ್ಯ ವಾಲ್ಮೀಕಿ ಸಮಾಜದ ಸಮಾನ ಮನಸ್ಕರ ವೇದಿಕೆ” ಪದಾಧಿಕಾರಿಗಳು ಸುದ್ದಿಗಾರರೊಂದಿಗೆ ಮಾತನಾಡಿ; ಸರ್ಕಾರದಿಂದ ಅನೇಕ ಯೋಜನೆ, ಸೌಲಭ್ಯಗಳಿದ್ದರೂ ನಾಯಕ/ST ವಾಲ್ಮೀಕಿ ಜನಾಂಗಕ್ಕೆ ಯಾವುದೂ ಸಿಗದೇ ಬಹಳ ಅನ್ಯಾಯವಾಗುತ್ತಿದ್ದೂ, ಮಲತಾಯಿ ಧೋರಣೆ ಬಿಟ್ಟು ಜನಾಂಗದ 14ಜನ MLA,3 ಜನ MP ಗಳು ಒಟ್ಟಾಗಿ ಶ್ರಮಿಸಿ ಸರ್ಕಾರದ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ಜನಾಂಗದ ಎಲ್ಲಾ ಜನರಿಗೆ ಕೂಡಲೇ ತಲುಪಿಸಿ ಮೇಲೆತ್ತಲು ಕ್ರಮವಹಿಸಿರಿ” ಎಂದರು. ವಾಲ್ಮೀಕಿ ಸಮಾಜ ಮುನ್ನಡೆಯಲು ಶ್ರಮಿಸಿರಿ, ಎಂದು ಮಾಧ್ಯಮದವರೊಂದಿಗೆ ವೇದಿಕೆಯ ಪದಾಧಿಕಾರಿಗಳು ಸರ್ಕಾರವನ್ನು ಆಗ್ರಹಿಸಿದ್ದಾರೆ.


























































