![]()
ಐಪಿಎಲ್ 18ನೇ ಆವೃತ್ತಿಯಲ್ಲಿ ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಗೆದ್ದ ಹಿನ್ನಲೆಯಲ್ಲಿ ಆರ್ ಸಿಬಿ ಅಭಿಮಾನಿಗಳು ತಮ್ಮದೇ ಆದ ಸಮಾಜ ಸೇವೆ ಮಾಡುವ ಮೂಲಕ ಅಭಿಮಾನ ಮೆರೆದಿದ್ದಾರೆ.
ಹೌದು ರಾಯಬಾಗ ತಾಲೂಕಿನ ದಿಗ್ಗೇವಾಡಿ ಗ್ರಾಮದ ಕಿರಣ ಲಕ್ಷ್ಮಣ ಹಳಜೋಳೆ ಅವರ ಮಾಲೀಕತ್ವದ ವಿರಾಟ್ ಹೇರ ಕಟಿಂಗ ಅಂಗಡಿಯಲ್ಲಿ ಒಂದು ದಿನದ ಉಚಿತ ಕಟಿಂಗ್ ಸೇವೆಯನ್ನು ಜನರಿಗೆ ನೀಡಿದ್ದಾರೆ. ಈ ಕುರಿತು ಮಾತನಾಡಿರುವ ಕಿರಣ ಹಳಜೋಳೆ ಅವರು, “ನಾನು ಆರ್‌ಸಿಬಿ ಅಭಿಮಾನಿ. ಇಷ್ಟು ವರ್ಷಗಳ ಕಾಲ ಆರ್‌ಸಿಬಿ ಕಪ್ ಗೆಲ್ಲುತ್ತೆ ಎಂದು ಕನಸು ಕಂಡಿದ್ದೆ. ಇದೀಗ ಅದು ನಸಾಗಿದೆ ಕಪ್ ಗೆದ್ದಿದೆ. ಆರ್ ಸಿಬಿ ಗೆಲುವಾಗಿದ್ದರಿಂದ ನನಗೆ ಖುಷಿಯಾಗಿದೆ. ಅದಕ್ಕೆ ನಮ್ಮ ಕಟಿಂಗ್ ಅಂಗಡಿಯಲ್ಲಿ ಉಚಿತ ಕ್ಷೌರ ಸೇವೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೇಳಿದರು.
ಇನ್ನು ಇದೆ ವೇಳೆ ಬಿರಿಯಾನಿ ಡಿಸ್ಕೌಂಟ್:
ಬಾವನಸೌಂದತ್ತಿಯಲ್ಲಿ ಆರ್ ಸಿಬಿ ಗೆಲುವು ಸಾಧಿಸಿದ್ದರಿಂದ ಪ್ರಭಾತ ಹೊಟೇಲ್ ನಲ್ಲಿ ಬಿರಿಯಾನಿಗೆ ಶೇ.20 ರಷ್ಟು ಡಿಸ್ಕೌಂಟ್ ಮಾಡಿ ಬಿರಿಯಾನಿ ನೀಡಿ ತಮ್ಮ ಅಭಿಮಾನವನ್ನು ಮೆರೆದರು. ಈ ವೇಳೆ ಸಹಸ್ರಾರು ಜನರು ಆಗಮಿಸಿ ಬಿರಿಯಾನಿ ಸವಿದರು.
ಉಚಿತ ವಡಾಪಾವ್ ವಿತರಣೆ;
ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದಲ್ಲಿ ಮಹಾಲಕ್ಷ್ಮೀ ವಡಾಪಾವ ಸೆಂಟರ್ ಮಾಲೀಕ ರಮೇಶ ಮಣಗುತ್ತೆ ಅವರು ಸುಮಾರು 2500 ವಡಾಪಾವ ವಿತರಣೆ ಮಾಡಿದರು. ಇದರ ಜೊತೆಗೆ ಅಣ್ಣಪ್ಪ ಸನದಿ ಎಂಬಾತ ಸಿಹಿ ವಿತರಣೆ ಮಾಡಿದರು.
ಒಟ್ಟಿನಲ್ಲಿ ಆರ್ ಸಿಬಿ ಅಭಿಮಾನಿಗಳು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮ ವ್ಯಕ್ತಪಡಿಸಿದ್ದು ನಿಜಕ್ಕೂ ಶ್ಲಾಘನೀಯ.



























































