5,873 total views
ಮೂಡಲಗಿ : ಒಂದು ಶಿಕ್ಷಣ ಸಂಸ್ಥೆಯನ್ನು ಕಟ್ಟುವುದು ಮತ್ತು ಅದನ್ನು ಯಶಸ್ಸಿನ ಪಥದತ್ತ ತೆಗೆದುಕೊಂಡು ಹೊಗುವುದು ಕಠೀಣವಾದ ಕೆಲಸ. ಶಿಕ್ಷಣ ಸಂಸ್ಥೆ ಕಟ್ಟಿ- ಕೈ ಕಟ್ಟಿ ನಾನು ಮನೆಯಲ್ಲಿ ಕುಳಿತಿಲ್ಲ, ಡಾ ಹಣಮಂತ ಚೆಕ್ಕೆನ್ನವರ ಆರ್.ಸಿ.ಎಮ್. ಶಾಲೆ ಯಾದವಾಡ ಸಾಂಸ್ಕ್ರತಿಕ ಸಂಭ್ರಮದ ಅಧ್ಯಕ್ಷೀಯ ಭಾಷಣವನ್ನು ಮಾಡಿದರು ಸ್ನೇಹಾ ಶಿಕ್ಷಣ ಸಂಸ್ಥೆಯ ದೀರ್ಘಪಯಣದ ಬಗ್ಗೆ ಮಾತನಾಡಿದರು . ಒಂದು ಶಿಕ್ಷಣ ಸಂಸ್ಥೆಯನ್ನು ಕಟ್ಟುವದು ಒಬ್ಬರಿಂದ ಸಾಧ್ಯವಾಗದ ಮಾತು ನಮ್ಮ ಶಿಕ್ಷಣ ಸಂಸ್ಥೆಯ ಹಿಂದೆ ಶ್ರೀ ಪ್ರಭುಲಿಂಗ ಮಹಾ ಸ್ವಾಮಿಗಳ ಕೃಪಾಶೀರ್ವಾದ ನಮ್ಮ ಕುಟುಂಬದವರ ತ್ಯಾಗ, ಸ್ನೇಹಿತರ ನಿಸ್ವಾರ್ಥ ಸೇವೆ, ಮತ್ತು ಎಲ್ಲದಕ್ಕೂ ಹೆಚ್ಚಾಗಿ ನಮ್ಮ ಶಾಲೆಯಲ್ಲಿ ಕೆಲಸ ಮಾಡುತ್ತಿರುವ ಎಲ್ಲ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಗಳ ಶ್ರಮ ಇದೆ ಎಂದು ಹೇಳಲು ನನಗೆ ತುಂಬ ಹೆಮ್ಮೆ ಅನಿಸುತ್ತದೆ. ಒಂದು ಶಾಲೆಗೆ ಒಳ್ಳೆಯ ಹೆಸರು ಬರಬೇಕಾದರೆ ವಿದ್ಯಾರ್ಥಿಗಳ ಮಾರ್ಕ್ಸಕಾರ್ಡ ಪ್ರಮುಖ ಪಾತ್ರ ವಹಿಸುತ್ತದೆ. ಈ ವಿಷಯದಲ್ಲಿ ನಾನು ತುಂಬಾ ಲಕ್ಕಿ ನಮ್ಮ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ದೊಡ್ಡ ಶಹರಗಳಲ್ಲಿ ವೈದ್ಯಕೀಯ, ಇಂಜಿನಿಯರಿಂಗ, ಕಾನೂನು ಇನ್ನೂ ಬೇರೆ ಬೇರೆ ಕ್ಷೆತ್ರಗಳಲ್ಲಿ ವಿದ್ಯಾಭ್ಯಾಸವನ್ನು ಮಾಡುತ್ತಿದ್ದಾರೆ ಇದು ನನಗೆ ತೃಪ್ತಿಯನ್ನು ತಂದು ಕೊಟ್ಟಿದೆ.
ಈ ಸಂದರ್ಭದಲ್ಲಿ ದಿವ್ಯ ಸಾನಿಧ್ಯವನ್ನು ವಹಿಸಿದ ಶ್ರೀ ಶಿವಾನಂದ ಮಹಾಸ್ವಾಮಿಗಳು ಶ್ರೀ ಜಡಿಸಿದ್ದೇಶ್ವರ ಮಠ ಸುಣಧೋಳಿ ಆಶೀರ್ವಚನ ಮಾಡಿದರು, ಶಾಲೆಯ ವಿದ್ಯಾರ್ಥಿಗಳ ಶಿಸ್ತು ಭಾಷಾ ಜ್ಞಾನ ನಿರೂಪಣೆ ನೋಡಿ ಹರ್ಷವನ್ನು ವ್ಯಕ್ತ ಪಡಿಸಿದರು. ಮನುಷ್ಯ ಜನ್ಮ ಅತ್ಯಂತ ಶ್ರೇಷ್ಠವಾದದ್ದು ಸರಿಯಾದ ಮಾರ್ಗದರ್ಶನ ಮತ್ತು ಉತ್ತಮ ಸಂಸ್ಕಾರ ಇದ್ದರೆ ಯಶಸ್ಸಿನಿಂದ ಯಾರು ತಡೆಯಲಾರರು ಅಡೆತಡೆಗಳು ಬರುವುದು ಸಹಜ ಎಲ್ಲ ಅಡೆತಡೆಗಳನ್ನು ಅವಕಾಶಗಳೆಂದು ಭಾವಿಸಿ ಮುನ್ನಡೆದರೆ ಸಮಾಜವೇ ನಿಮ್ಮನ್ನು ಕರೆದು ಗೌರವಿಸುತ್ತದೆ ಎಂದು ಮುಖ್ಯ ಅತಿಥಿಗಳಾದ ಕೆ.ಎಲ್.ಇ. ಕಾಲೇಜು ಉಪನ್ಯಾಸಕರಾದ ಶಿವಲಿಂಗ ಸಿದ್ನಾಳ ಹೇಳಿದರು.
ಬಸವರಾಜ ಭೂತಾಳಿ ಗ್ರಾಮ ಪಂಚಾಯತ ಅಧ್ಯಕ್ಷರು ಯಾದವಾಡ ಮಾತನಾಡಿ ಎಲ್ಲ ಮಕ್ಕಳಿಗೆ ಸಂಸ್ಕ್ರತಿಕ ಸಂಭ್ರಮದ ಶುಭಾಷಯ ಹೇಳಿದರು ಹತ್ತನೆಯ ತರಗತಿಯ ಮಕ್ಕಳಿಗೆ ಮುಂದಿನ ಭವಿಷ್ಯ ಒಳ್ಳೆಯದಾಗಲಿ ನಮ್ಮ ಊರಿಗೆ ಮತ್ತು ನಿಮ್ಮ ಶಿಕ್ಷಣ ಸಂಸ್ಥೆಗೆ ಒಳ್ಳೆಯ ಹೆಸರು ಬರುವ ಹಾಗೆ ಸಾಧನೆ ಮಾಡಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಶಾಲಾ ಮಕ್ಕಳಿಂದ ಮನರಂಜನೆ ಕಾರ್ಯಕ್ರಮಗಳು, ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ನಡೆಯಿತು. ಶಿವಾನಂದ ಮಹಾಸ್ವಾಮಿಗಳು ,ಹಣಮಂತ ಚೆಕ್ಕೆನ್ನವರ, ಶಿವಲಿಂಗ ಸಿದ್ನಾಳ, ಬಸವರಾಜ ಭೂತಾಳಿ, ಶ್ರೀಶೈಲ ಹೆಗ್ಗಳಗಿ, ವೀರಣ್ಣ ಕಂಠೀಗಾವಿ, ಬಿ.ಎಂ.ಪರಗುಣಿ, ಶ್ರೀಶೈಲ ಅಂಗಡಿ, ವಿ.ಡಿ.ಹಿರೇಮಠ ಮುಖ್ಯ ಶಿಕ್ಷಕರು ಮತ್ತು ಶ್ರೀಮತಿ ಎ.ಆರ್.ರೋಣದ ಪ್ರಧಾನ ಗುರುಮಾತೆಯರು ಇದ್ದರು. ಪೂಜಾ ಕುದರಿ ಸ್ವಾಗತಿಸಿದರು, ಇಕ್ರಾ ತಹಶೀಲ್ದಾರ ಮತ್ತು ತನವೀರ ಗಾಡಿಬಾವಲಿ ನಿರೂಪಿಸಿದರು, ಪ್ರದೀಪ ಅಂಬಲಜೇರಿ ವಂದನಾರ್ಪಣೆ ಮಾಡಿದರು.