5,450 total views
ಈ ದಿನ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದು ಮುತ್ತುರಾಯನ ಹೊಸಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ಜೋಳದ ಹೊಲದ ಮಧ್ಯದಲ್ಲಿ ಬೆಳೆದಿದ್ದ ಸುಮಾರು 3 ಕೆ.ಜಿ ಗಾಂಜಾ ಸೊಪ್ಪನ್ನು ಮತ್ತು ಆರೋಪಿ ರಾಜೇಗೌಡ ಬಿನ್ ಲೇಟ್ ಅಣ್ಣೇಗೌಡ, 58 ವರ್ಷ, ಕೂಲಿ ಕೆಲಸ, ಒಕ್ಕಲಿಗರು, ಮುತ್ತ ರಾಯನ ಹೊಸಳ್ಳಿ ಗ್ರಾಮ, ಹುಣಸೂರು ತಾಲೂಕುರವರನ್ನು ವಶಕ್ಕೆ ಪಡೆದು ಕಾನೂನು ಕ್ರಮ ಜರುಗಿಸಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಯಿತು.
ಕಾರ್ಯಚರಣೆಯನ್ನು ಹುಣಸೂರು ಪೊಲೀಸ್ ಉಪಾಧೀಕ್ಷಕರಾದ ಶ್ರೀ ಗೋಪಾಲಕೃಷ್ಣ ರವರ ಮಾರ್ಗದರ್ಶನದಲ್ಲಿ ಪೊಲೀಸ್ ನಿರೀಕ್ಷಕರಾದ ಶ್ರೀ ಮುನಿಯಪ್ಪ,ಪಿ.ಎಸ್.ಐ ಶ್ರೀಮತಿ ರಾಧ, ಸಿಬ್ಬಂದಿಗಳಾದ ಮಂಜುನಾಥ ವಿ.ಜೆ,ಸುಂದರ್,ಇಮ್ರಾನ್,
ಅಭಿಲಾಷ್,ನಂದೀಶ್, ನಾರಾಯಣ ಶೆಟ್ಟಿ,ಪ್ರೇಮ್ ಕುಮಾರ್ ರವರು ಭಾಗವಹಿಸಿದ್ದರು.