3,969 total views
ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದ ನಂದಿನಿ ಲೇಔಟ್ ನ ವೀರರಾಣಿ ಕಿತ್ತೂರು ಚನ್ನಮ್ಮ ಕ್ರೀಡಾಂಗಣದಲ್ಲಿ ಸ್ವಾಮಿ ವಿವೇಕಾನಂದ ಮೆಮೋರಿಯಲ್ ಟ್ರಸ್ಟ್ ಹಾಗೂ ಜೂನಿಯರ್ ವಾಲಿಬಾಲ್ ಅಕಾಡಮಿ ವತಿಯಿಂದ ವಾಲಿಬಾಲ್ ಪಂದ್ಯಾವಳಿ ಆಯೋಜನೆ ಮಾಡಲಾಗಿತ್ತು. ಈ ಪಂದ್ಯಾವಳಿಗೆ ಸ್ಥಳೀಯ ಜನಪ್ರಿಯ ಶಾಸಕರು ಹಾಗೂ ಮಾಜಿ ಸಚಿವರಾದ ಕೆ ಗೋಪಾಲಯ್ಯ ಪಾಲ್ಗೊಂಡು ಆಟಗಾರರ ಕೈ ಕುಲುಕಿ ಬಲೂನ್ ಹಾರಿ ಬಿಡುವ ಮೂಲಕ ಪಂದ್ಯಾವಳಿಗೆ ಚಾಲನೆ ನೀಡಿದರು. ಈ ಸಮಾರಂಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷರಾದ ರಾಘವೇಂದ್ರ ಶೆಟ್ಟಿ, ಬಿಬಿಎಂಪಿ ಮಾಜಿ ಸದಸ್ಯ ರಾದ ರಾಜೇಂದ್ರಕುಮಾರ್, ವಾರ್ಡ್ ಅಧ್ಯಕ್ಷ ಲೋಕೇಶ್,ಪಂದ್ಯಾವಳಿ ಆಯೋಜಕರಾದ ಭಾಸ್ಕರ್, ವಿನೋದ್, ಶಿವಕುಮಾರ್,ಸ್ಥಳೀಯ ಮುಖಂಡರುಗಳಾದ ವೆಂಕಟೇಶ್ ಮೂರ್ತಿ,ಸುರಭಿ ನಾಗರಾಜ್ ನಾರಾಯಣ ಸ್ವಾಮಿ, ಮಲ್ನಾಡ್ ನಾಗರಾಜ್, ಶ್ರೀನಿವಾಸ್, ಸಂಪತ್, ಹನುಮಂತು ಹಾಗೂ ಪಂದ್ಯಾವಳಿಯಲ್ಲಿ ಭಾಗವಹಿಸಿರುವ ತರಬೇತಿದಾರರ ತಂಡದ ಸದಸ್ಯರು ಹಾಗೂ ಆಟಗಾರರು ಪಾಲ್ಗೊಂಡಿದ್ದರು. ಬೆಂಗಳೂರಿನ ಸುಮಾರು 20 ಕ್ಕೂ ಹೆಚ್ಚಿನ ತಂಡಗಳು ಈ ಪಂದ್ಯಾವಳಿಯಲ್ಲಿ ಪಾಲ್ಗೊಂಡಿವೆ. ಪ್ರಶಸ್ತಿ ಸಮಾರಂಭ ಪಂದ್ಯಾವಳಿಯ ಕೊನೆಯಲ್ಲಿ ನಡೆಯಲಿದೆ.