63 total views
ಮೂಡಲಗಿ ತಾಲೂಕಿನ ಯಾದವಾಡ ಗ್ರಾಮದಲ್ಲಿ ಗ್ರಾಮೀಣ ಭಾಗದ ಮಕ್ಕಳಿಗೆ ಮೂರಾರ್ಜಿ ಮತ್ತು ಸೈನಿಕ ಶಾಲೆಯ 6ನೇಯ ತರಗತಿಗೆ ಪ್ರವೇಶ ಪಡೆಯಲು ಅನುಕುಲ ಮಾಡುವ ದೃಷ್ಠಿಯಿಂದ ಓ.ಎಮ್.ಆರ್ ಮಾದರಿಯ ಸ್ಪರ್ಧಾತ್ಮಕ ಪರೀಕ್ಷೆಯನ್ನು ಸ್ನೇಹಾ ಗ್ರಾಮೀಣ ಶಿಕ್ಷಣ ಸಂಸ್ಥೆ ಯಾದವಾಡ ಆರ್.ಸಿ.ಎಮ್.ಟ್ಯಾಲೆಂಟ ಪರೀಕ್ಷೆ-2025 ಆಯೋಜನೆ ಮಾಡಿತ್ತು. ಸುತ್ತಮುತ್ತಲಿನ ಕನ್ನಡ ಮತ್ತು ಆಂಗ್ಲಮಾದ್ಯಮ್ ಪ್ರಾಥಮಿಕ ಶಾಲೆಯ ಸುಮಾರು 500 ವಿದ್ಯಾರ್ಥಿಗಳು ಈ ಪರೀಕ್ಷೆಯಲ್ಲಿ ಭಾಗವಹಿಸಿದ್ದರು. ಸ್ನೇಹಾ ಗ್ರಾಮೀಣ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಹಣಮಂತ ಶಿ. ಚೆಕ್ಕೆನ್ಣವರ ಮಾತನಾಡಿ ಈ ಸ್ಪರ್ದೆಯನ್ನು ಅತ್ಯಂತ ಪಾರದರ್ಶಕವಾಗಿ ಆಯೋಜನೆ ಮಾಡಿದ್ದು ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಅನಾನುಕುಲ ಆಗದಂತೆ ನೋಡಿಕೊಳ್ಳಲಾಗಿದೆ ಸುತ್ತಮುತ್ತಲಿನ ಶಾಲೆಗಳಿಂದ ಆಗಮಿಸಿದ ವಿದ್ಯಾರ್ಥಿಗಳಿಗೆ ,ಬಂದ ಪಾಲಕರಿಗೆ ಹಾಗೂ ಕರೆದುಕೊಂಡ ಬಂದ ಗುರುಗಳಿಗೆ ಅಲ್ಪೋಪಹಾರದ ವ್ಯವಸ್ಥೆಯನ್ನು ನಮ್ಮ ಸಂಸ್ಥೆ ಮಾಡಿದೆ ಎಂದರು. ಈ ಪರೀಕ್ಷೆಯಲ್ಲಿ ನೂರಿತ ಶಿಕ್ಷಕರಿಂದ ಪ್ರಶ್ನೆ ಪತ್ರಿಕೆ ತಯಾರು ಮಾಡಿದ್ದು ವ್ಯವಸ್ಥಿತವಾಗಿ ಪ್ರಿಂಟ್ ಮಾಡಿಸಲಾಗಿದೆ ಓ.ಎಮ್.ಆರ್. ಶೀಟಗಳನ್ನು ಮಕ್ಕಳಿಗೆ ನೀಡಿದ್ದು ಸರಿಯಾಗಿ ತಿದ್ದಲು ಮಾಹಿತಿ ನೀಡಿದ್ದೇವೆ. ಮಕ್ಕಳಿಗೆ ಮುಂದಿನ ಪರೀಕ್ಷೆಗೆ ಹೆಚ್ಚು ಅನುಕುಲ ಆಗುತ್ತದೆ ಮಕ್ಕಳನ್ನು ಪ್ರೋತ್ಸಾಹಿಸುವ ಸಲುವಾಗಿ ಪ್ರಥಮ ಬಹುಮಾನ 7001,ದ್ವೀತಿಯ ಬಹುಮಾನ 5001 , ತೃತೀಯ ಬಹುಮಾನ 3001, ಚತುರ್ಥ ಬಹುಮಾನ 2001 , ಪಂಚಮಿ ಬಹುಮಾನ 1501 , ಸಷ್ಠಿ ಬಹುಮಾನ 1001 , ಸಪ್ತಮಿ ಬಹುಮಾನ 501 ಮತ್ತು ಪ್ರಶಸ್ತಿ ಪತ್ರಗಳನ್ನು ನೀಡಲಾಗುವುದು ಎಂದು ಶಾಲೆಯ ಮೂಖ್ಯ ಗುರುಗಳಾದ ಶೀ ವಿ.ಡಿ.ಹಿರೇಮಠ ಹೇಳಿದರು. ಈ ಸ್ಪರ್ದೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನಗಳನ್ನು ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ನೀಡಲಾಗುವುದು ಎಂದು ಆಡಳಿತ ಮಂಡಳಿ ತಿಳಿಸಿತು.