3,739 total views
ಇಂದು ಸುದ್ದಿ ಗೋಷ್ಠಿಯಲ್ಲಿ ಕೆ.ಅರುಣ್ ಕುಮಾರ್ ಮಾಧ್ಯಮದವರೊಂದಿಗೆ ಮಾತನಾಡಿ, ಈ ಕುಮಾರ್, ಅರವಿಂದ್ ಮತ್ತು ಗೀತಾ ಎಲೆಕ್ತ್ರಾನಿಕ್ಸ್ ಕಂಪೆನಿಗಳಿಗೆ ನೆಲಮಂಗಲ, ದಾಬಸ್ಪೇಟ್, ತುಮಕೂರುಗಳ ವಿದ್ಯುತ್ ಕಾಮಗಾರಿಗಳನ್ನು ನಿರಂತರವಾ ಗಿ ಟೆಂಡರ್ ಕೊಟ್ಟು ಬಿಲ್ ಪಾವತಿಯಾಗಿರುವುದು ಅಧಿಕಾರಿಗಳ ಮೇಲೆ ಅಕ್ರಮ, ಭ್ರಷ್ಟಾಚಾರದ ಅನುಮಾನ ಮೂಡಿಸಿದೆ.
ಆದ್ದರಿಂದ ಭ್ರಷ್ಟ ಅಧಿಕಾರಿಗಳ ಮೇಲೆ ಇಡಿ, ಲೋಕಾಯುಕ್ತ ತನಿಖೆ ಮಾಡಿಸಿ ಕ್ರಿಮಿನಲ್ ಕೇಸನ್ನು ದಾಖಲಿಸಿ; ಸಿ ಐ ಡಿ ತನಿಖೆಗೂ ಆದೇಶಿಸಬೇಕೆಂದು ಕೈಗಾರಿಕೆ ಸಚಿವರಿಗೆ, ಮುಖ್ಯಮಂತ್ರಿಗಳಿಗೆ, ಮಾನ್ಯರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿ, ಫ್ರೀಡಂ ಪಾರ್ಕಿನಲ್ಲಿ ಸಾವಿರಾರು ಜನರಿಂದ ಬೃಹತ್ ಪ್ರತಿಭಟನೆ ಮಾಡಿಸುತ್ತೇವೆ” ಎಂದು ದಲಿತ ಚಳುವಳಿ ಅರುಣ್.ಕೆ ರಾಜ್ಯಾಧ್ಯಕ್ಷರು, ಶ್ರೀಮತಿ ಸರಸ್ವತಿ ನಂಜಪ್ಪ, ವಿಜಯ, ಶಶಿ ಕಲಾ ಡಾ: ಬಿಆರ್ ಅಂಬೇಡ್ಕರ್ ಪ್ರಚಾರ ಸಮಿತಿ(ರಿ.)ಯ ಪದಾಧಿಕಾರಿಗಳು ‘ಪತ್ರಿಕಾ ಹೇಳಿಕೆ’ ಯಲ್ಲಿ ಆಗ್ರಹಿಸಿದ್ದಾರೆ.