5,701 total views
ಕರ್ನಾಟಕ ರಾಜ್ಯಸರ್ಕಾರಿ NPS/ಎನ್ಪಿಎಸ್ ನೌಕರರ ಸಂಘದ ವತಿಯಿಂದ ಎನ್ಪಿಎಸ್ ಯೋಜನೆಯ ರದ್ದತಿಗೆ ನಾಳೆ ಬೆಂ.ನ ಫ್ರೀಡಂ ಪಾರ್ಕಿನಲ್ಲಿ ಓಪಿಎಸ್ ಜಾರಿಗೆ ಹಕ್ಕೊತ್ತಾಯದ ಬೃಹತ್ ಧರಣಿ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎನ್ ಪಿ ಎಸ್ ನೌಕರರ ಸಂಘದ ಅಧ್ಯಕ್ಷ ಶಾಂತರಾಮ.
ಕರ್ನಾಟಕ ರಾಜ್ಯ ಸರ್ಕಾರಿ ಎನ್ ಪಿ ಎಸ್ ನೌಕರರ ಸಂಘ 2022 ಅಕ್ಟೋಬರ್ ನಿಂದ ಒಂದು ತಿಂಗಳು ಹಳೆಯ ಪಿಂಚಣಿ ಯೋಜನಾ ಜಾರಿ ಸಂಕಲ್ಪ ಯಾತ್ರೆ ಹಾಗೂ ಫೆಬ್ರವರಿಯಲ್ಲಿ 14 ದಿನಗಳ ಕಾಲ ಒಪಿಎಸ್ ಜಾರಿಗಾಗಿ ಪ್ರೀಡಂ ಪಾರ್ಕ್ನಲ್ಲಿ ಅಹೋ ರಾತ್ರಿ ಧರಣಿ ನಡೆಸಲಾಗಿತ್ತು.
ಜನವರಿ ತಿಂಗಳಿಂದ ಮೂರು ತಿಂಗಳ ಕಾಲ “Vote for OPS” ಅಭಿಯಾನವನ್ನು ನಡೆಸಲಾಗಿತ್ತು. ಈ ಹಿನ್ನೆ ಲೆಯಲ್ಲಿ ಕಾಂಗ್ರೆಸ್ ಪಕ್ಷವು NPS ಯೋಜ ನೆ ಯನ್ನು ರದ್ದುಗೊಳಿಸುವ ಭರವಸೆಯ ನ್ನು ತನ್ನ ಪ್ರಣಾಳಿಕೆಯಲ್ಲಿ ನೀಡಿತ್ತು, ಅದರಂತೆ ನಡೆಯಲಿ” ಎಂದರು.
“ಮುಖ್ಯಮಂತ್ರಿ ಸಿದ್ಧರಾಮಯ್ಯ ಅಧಿಕಾರ ವಹಿಸಿಕೊಂಡ ತಕ್ಷಣ ಎನ್ ಪಿ ಎಸ್ ಪದಾಧಿಕಾರಿಗಳೊಂದಿಗೆ 2023 ಜೂನ್ 13 ರಂದು ಸಭೆ ನಡೆಸಿ ‘ಗೃಹ ಕಛೇರಿ ಕೃಷ್ಣಾ’ದಲ್ಲಿ ಮುಖ್ಯಮಂತ್ರಿಯವರು ಸಭೆ ನಡೆಸಿ ಎನ್ ಪಿ ಎಸ್ ರದ್ದು ಪಡಿಸುವ ಬಗ್ಗೆ ಭರವಸೆ ನೀಡಿದ್ದರೂ, ಈವರೆಗೂ ಕ್ರಮ ಕೈಗೊಂಡಿಲ್ಲ” ಎಂದು ಹೇಳಿದರು.
ಜನವರಿ 19,2025 ರಂದು ಬೆಂಗಳೂರಿನಲ್ಲಿ ನಡೆದ ವಿಶೇಷ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ “ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಯಂತೆ ಎನ್ಪಿಎಸ್ ಯೋಜನೆಯನ್ನು ರದ್ದುಗೊಳಿಸುವ ಬಗ್ಗೆ ಪ್ರಸ್ತಾಪಿಸಲಾಗಿತ್ತು. ಈ ಪ್ರಕಾರ 7-2-25 ಬೆಂಗಳೂರಿನ ಪ್ರೀಡಂ ಪಾರ್ಕ್ನಲ್ಲಿ ‘OPS ಹಕ್ಕೊತ್ತಾಯ’ ಧರಣಿ ನಡೆಸಲು ನಿರ್ಣಯ ಕೈಗೊಳ್ಳಲಾಗಿದೆ”ಎಂದು ಹೇಳಿದರು.
ತಾ:7-2-25 ಸ್ವಾತಂತ್ರ್ಯ ಉದ್ಯಾನ ವನದಲ್ಲಿ ಬೃಹತ್ ಧರಣಿಯನ್ನು ಹಮ್ಮಿಕೊಳ್ಳಲಾಗಿದೆ ಸಾವಿರಾರು ಎನ್ಪಿಎಸ್ ನೌಕರರು ಧರಣಿಯಲ್ಲಿ ಭಾಗವಹಿಸಲಿದ್ದಾರೆ” ಎಂದು ಹೇಳಿದರು.