7,413 total views
ಕಾಳಗಿ:ವಿದ್ಯಾರ್ಥಿ ಜೀವನದಲ್ಲಿ ವಿದ್ಯಾಭ್ಯಾಸ ಮೂಲಕ ತಮ್ಮ ಗುರಿಗಳನ್ನು ಈಡೆರಿಸಿಕೊಳ್ಳಲು ತಮ್ಮ ಗುರುಗಳ ಮಾರ್ಗದರ್ಶನದಲ್ಲಿ ನಡೆದುಕೊಂಡು ಉತ್ತಮ ವ್ಯಕ್ತಿಗಳಾಗಿ ಸಮಾಜಕ್ಕೆ ನಿಮ್ಮದೆ ಆದ ಕೊಡುಗೆ ನೀಡಿ ಎಂದು ಕಾಳಗಿ ಪಿ ಎಸ್ ಐ ತಿಮ್ಮಯ್ಯ ಬಿ ಕೆ ತಿಳಿಸಿದರು.
ಕಾಳಗಿ ಪಟ್ಟಣದ ಮಾಳಲಿಂಗೇಶ್ವರ ಶಿಕ್ಷಣ ಸಂಸ್ಥೆ ಸಿದ್ಧಾರ್ಥ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿರುವ 2024-25ನೇ ಸಾಲಿನ ಕಾಲೇಜು ವಾರ್ಷಿಕೋತ್ಸವ ಹಾಗೂ ದ್ವಿತೀಯ ಪಿ ಯು ಸಿ ವಿದ್ಯಾರ್ಥಿಗಳಿಗೆ ಬಿಳ್ಕೋಡುಗೆ ಸಮಾರಂಭದಲ್ಲಿ ಜ್ಯೋತಿ ಬೆಳಗಿಸಿ ಮಾತನಾಡಿದರು.ಕಾಲೇಜಿನಲ್ಲಿ ಒಳ್ಳೆಯ ಗುರುಗಳು ಇದ್ದು ತಮ್ಮ ಜೀವನದ ಭದ್ರ ಬುನಾದಿಗೆ ಗುರುಗಳ ಮಾರ್ಗದರ್ಶನದಲ್ಲಿ ನೆಡೆದು ಸಮಾಜಕ್ಕೆ ತಮ್ಮದೆಯಾದ ಕೊಡುಗೆ ನೀಡಿ ಎಂದು ಹೇಳಿದರು. ಮಂಗಲಗಿ ಮತ್ತು ಟೆಂಗಳಿ ಶ್ರೀಗಳು ಆರ್ಶಿವಚನ ನೀಡಿದರು. ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ ಅಧ್ಯಕ್ಷ ಭೀಮರಾಯ ಟಿ ಟಿ,ಸಿದ್ದಾರ್ಥ ಪದವಿ ಪೂರ್ವ ಮಹಾ ವಿದ್ಯಾಲಯ ಕಾರ್ಯದರ್ಶಿ ಅವಿನಾಶ್ ಮೂಲಿಮನಿ,ರೇಣುಕಾ ಕಾಬಾ,ಅನೀಲಕುಮಾರ ಡಾಂಗೆ,ಉಪನ್ಯಾಸಕ ಶೌಕತ್ ಅಲಿ,ಮುಖ್ಯ ಗುರುಗಳು ಭೀಮರೆಡ್ಡಿ,ಧರ್ಮಸ್ಥಳ ಸಂಘದ ಮುಖ್ಯಸ್ಥ ಗುರುರಾಜ, ಡಾ ಶಂಕರ್ ಮೂಲಿಮನಿ,ಪ್ರಾಂಶುಪಾಲ ಶಾಂತಕುಮಾರ ಸಾಲಹಳ್ಳಿ, ಕಾಲೇಜು ಉಪನ್ಯಾಸಕರು ಸಿದ್ದಣ್ಣ ಶೆಟ್ಟಿ, ಲಷ್ಮಿಕಾಂತ ಗಂಗಾ, ಪ್ರಕಾಶ್ ಮಠಪತಿ, ಅರ್ಚನಾ ಕೊರವಾರ್, ಸಚಿನ್, ಆನಂದ್ ಹಾಗೂ ಅನೇಕ ವಿದ್ಯಾರ್ಥಿಗಳು ಇದ್ದರು ಇತರರು ಇದ್ದರು.