3,634 total views
ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ನರಸಾಪುರ ವಲಯದ ಗೊಡಚಿ ಗ್ರಾಮದ ವಯೋವೃದ್ಧೆ ಮಹಿಳೆಯಾದ, ಶ್ರೀಮತಿ ಚಿಂಪವ್ವ ದುಂಡಪ್ಪ ಮಲ್ಲಾಪುರಿ ಎನ್ನುವವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಯೋಜನೆಯಿಂದ ಶೌಚಾಲಯ ಚೇರ್ ವಿತರಿಸಲಾಯಿತು. ಇದೇ ತರಹ ಬೆಳಗಾವಿ ಜಿಲ್ಲೆಯ ಕೆಲವು ತಾಲೂಕುಗಳಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದಿಂದ, ಸಾರ್ವಜನಿಕರು ಗ್ರಾಮೀಣ ಜನತೆಗೆ ಅನುಕೂಲಕರವಾಗುವಂತ ಶ್ರೀ ಧರ್ಮಸ್ಥಳ ಸಂಘದಿಂದ ಸರಳ ಸಾಲ, ಅಂಗವಿಕಲರಿಗೆ ಉಚಿತವಾಗಿ ವಿಹಿಲ್ ಚೇರ್, ದೇವಸ್ಥಾನ ಜೀರ್ಣೋದ್ಧಾರಕ್ಕಾಗಿ ಸಹಾಯಧನ, ಮಧ್ಯ ವ್ಯಸನಿಗಳನ್ನು ಸುಧಾರಿಸುವ ತರಬೇತಿ ಶಿಬಿರ, ಶ್ರೀ ಧರ್ಮಸ್ಥಳ ಸಂಘದಿಂದ ಇಂತಹ ಯೋಜನೆಗಳೂಂದಿಗೆ ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರ ಒಟ್ಟುಗೂಡಿಸಿ ಒಳ್ಳೆಯ ಕೆಲಸ ಮಾಡುತ್ತಿದ್ದು, ಗ್ರಾಮೀಣ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದು ಹೇಳಬಹುದು.