8,650 total views
ಪ್ರಥಮ ಬಾರಿಗೆ ಭಾರತದಲ್ಲಿ ನಡೆದ ಖೋ ಖೋ ವಿಶ್ವ ಕಪ್ ನಲ್ಲಿ ಚಾಂಪಿಯನ್ ಆದ ನಮ್ಮ ಭಾರತ ತಂಡದಲ್ಲಿ ನಮ್ಮ ಕರ್ನಾಟಕದ ಗ್ರಾಮೀಣ ಪ್ರತಿಭೆಗಳು ಆಯ್ಕೆಯಾಗಿ ಬಂದು ಅತ್ಯುತ್ತಮ ಆಟವಾಡಿದ ಇಬ್ಬರು ಕನ್ನಡದ ಕುಡಿಗಳು. ಖೋ ಖೋ ವಿಶ್ವಕಪ್ ಮಹಿಳಾ ವಿಭಾಗದಲ್ಲಿ ಕು. ಬಿ. ಚೈತ್ರ (ಫೈನಲ್ ನಲ್ಲಿ ಬೆಸ್ಟ್ ಪ್ಲೇಯರ್ ಆಫ್ ದಿ ಮ್ಯಾಚ್ ಪುರಸ್ಕೃತೆ) ಹಾಗೂ ಪುರುಷ ವಿಭಾಗದಲ್ಲಿ
ಕು. ಗೌತಮ್ ಎಂ. ಕೆ ಇವರಿಗೆ ಸಮಸ್ತ ಕನ್ನಡಿಗರ ಪರವಾಗಿ ದೆಹಲಿ ಕರ್ನಾಟಕ ಸಂಘದಲ್ಲಿ ಅಭಿನಂದನೆ ಸಲ್ಲಿಸಲಾಯಿತು?
ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದ ಈ ಇಬ್ಬರೂ ಮಕ್ಕಳಿಗೆ ಅಭಿನಂದಿಸಲಾಯಿತು?
ಕರ್ನಾಟಕದ ಈ ಇಬ್ಬರು ಪ್ರತಿಭೆಗಳನ್ನು ಸಂಘದಲ್ಲಿ ಅಭಿನಂದಿಸಿ, ಕರ್ನಾಟಕದ ಮಂತ್ರಿಗಳಿಗೆ ಕರೆ ಮಾಡಿ ಆರ್ಥಿಕ ಬೆಂಬಲ ನೀಡಲು ಮನವಿ ಮಾಡುವುದಾಗಿ ಮಕ್ಕಳಿಗೆ ಪ್ರೋತ್ಸಾಹ ನೀಡಿದಂತಹ ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷರಿಗೆ ಮತ್ತು ಕಡಿಮೆ ಸಮಯದಲ್ಲಿ ಆಯೋಜಿಸಿದ ಕಾರ್ಯಕ್ರಮಕ್ಕೆ ಬಂದಂತಹ ಎಲ್ಲಾ ಪ್ರೀತಿಯ ಕನ್ನಡಿಗರಿಗೆ ಧನ್ಯವಾದಗಳು ?
ಭಾರತದಲ್ಲಿ ದೇಸಿ ಕ್ರೀಡೆಯಲ್ಲಿ ಕಬಡ್ಡಿ ನಂತರ ಅತ್ಯಂತ ಜನಪ್ರಿಯ ಸಾಂಪ್ರದಾಯಿಕ ಆಟ ಖೋ ಖೋ. ಭಾರತದಲ್ಲಿ ಅಂತರರಾಷ್ಟ್ರೀಯ ಖೋ-ಖೋ ಫೆಡರೇಷನ್ ಅವರು ಭಾರತದಾದ್ಯಂತ ಉತ್ತಮ ಆಟಗಾರರನ್ನ ರಾಷ್ಟ್ರೀಯ ಮಟ್ಟದಲ್ಲಿ ಆಡಿಸಿದ್ದಾರೆ, ಈ ಭಾರಿ ಅಂತರಾಷ್ಟ್ರೀಯ ಖೋ ಖೋ ವಿಶ್ವಕಪ್ ನಲ್ಲಿ ಕನ್ನಡದ ಗ್ರಾಮೀಣ ಪ್ರತಿಭೆಗಳೆಗೆ ಅವಕಾಶ ಸಿಕ್ಕಿರುವುದು ಕನ್ನಡಿಗರಿಗೆ ಹೆಮ್ಮೆಯ ಸಂಗತಿ. ಆದರೆ, ಇಂತಹ ಪ್ರತಿಭಾನ್ವಿತ ಮಕ್ಕಳಿಗೆ ಗುರು ಇದ್ದರು ಗುರಿ ಇದ್ದರೂ ಆರ್ಥಿಕತೆ ಮತ್ತು ಅನುಕೂಲಗಳ ಕೊರತೆ ಇದೆ. ಇಂತಹ ಪ್ರತಿಭಾನ್ವಿತ ಮಕ್ಕಳು ಈ ದೇಶದ ಮುಂದಿನ ಆಸ್ತಿಗಳು, ಇವರ ಕ್ರೀಡಾ ಹುರುಪನ್ನು ಪೋಷಿಸಬೇಕಾದ್ದು ಸರ್ಕಾರದ ಆದ್ಯ ಕರ್ತವ್ಯ ಎಂದು ಭಾವಿಸುವೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಇವರಿಗೆ ಸೂಕ್ತ ಆರ್ಥಿಕ ಪ್ರೋತ್ಸಾಹ ಧನ ನೀಡಲಿ.
ಖೋ ಖೋ ಭಾರತೀಯ ಕ್ರೀಡೆ, ಈ ಕ್ರೀಡೆಯನ್ನು ಒಲಂಪಿಕ್ ಮಟ್ಟಕ್ಕೆ ಕೊಂಡೊಯ್ಯುವಂತಾಗಲಿ.
ಅರುಣ್ ಚರಾಪ.
ಕಾರ್ಯಕಾರಿ ಸಮಿತಿ ಸದಸ್ಯ, ದೆಹಲಿ ಕರ್ನಾಟಕ ಸಂಘ
ರಾಷ್ಟ್ರ ಸಂಘಟನಾ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು
ನಾಮನಿರ್ದೇಶಿತ ಸದಸ್ಯ, ಕರ್ನಾಟಕ ಜಾನಪದ ಪರಿಷತ್ತು