3,376 total views
ಕುಮಟಾ : ಇಲ್ಲಿನ ಹಿರೇಗುತ್ತಿಯ ನಾಡವೆಂಕಟೇಶ್ವರ ದೇವಾಲಯದಲ್ಲಿ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಹಿಚಕಡ ಮೂಲದ ಬಾಲಪ್ರತಿಭೆ ಶ್ರೀಶಾಳು ತೆಂಕುತಿಟ್ಟಿನ ಶೈಲಿಯಲ್ಲಿ ಯಕ್ಷಸವಿಗಾನಸೇವೆಯನ್ನು ಸಲ್ಲಿಸಿದಳು. ಈ ಸಮಯದಲ್ಲಿ ದೇವಾಲಯದ ವತಿಯಿಂದ ಆಕೆಯನ್ನು ಅಭಿನಂದಿಸಿ ಸನ್ಮಾನಿಸಿ ಮಾತನಾಡಿದ ನಾಡಿನ ಬಹುಶ್ರುತ ವಿದ್ವಾಂಸರಾದ ಖ್ಯಾತ ಯಕ್ಷನಟ ಮಂಜುನಾಥ ಗಾಂವಕರ ಬರ್ಗಿಯವರು ಮಾತನ್ನಾಡಿ, ತೆಂಕುತಿಟ್ಟಿನ ಯಕ್ಷಗಾನ ಭಾಗವತಿಕೆಯನ್ನು ಶಾಸ್ತ್ರೀಯವಾಗಿ ಅಭ್ಯಸಿಸಿ ಸಕ್ರಿಯಳಾದ ಎಳೆಯ ಪ್ರತಿಭೆ ಶ್ರೀಶಾಳು ಭಗವತ್ ಕರುಣೆಯಿಂದ ಬೆಳೆದು ನಾಡಿನಾದ್ಯಂತ ಸುವಿಖ್ಯಾತಿಯಾಗಲೆಂದು ಹಾರೈಸಿದರು.
ಈ ಸಂದರ್ಭದಲ್ಲಿ ಶ್ರೀ ನಾಡ ವೆಂಕಟೇಶ್ವರ ದೇವಾಲಯ ನಿರ್ಮಾಣದ ಮಹಾದಾನಿಗಳಾದ ಹಿರೇಗುತ್ತಿ ಪಂಚಾಯತ ಅಧ್ಯಕ್ಷ ಶಾಂತಾ ಎನ್ ನಾಯಕ, ಧುರೀಣ ರಾಮು ಕೆಂಚನ್, ಸ್ಪಂದನ ಸಂಸ್ಥೆಯ ಅಧ್ಯಕ್ಷ ಎನ್ ರಾಮು ಹಿರೇಗುತ್ತಿ ಹಾಗೂ ಪುನೀತ ಕುಮಾರ ನಾಗರಾಜ ಸಣ್ಣಪ್ಪ ನಾಯಕ, ಬ್ರಹ್ಮಜಟಗ ಯುವಕ ಸಂಘದ ಅಧ್ಯಕ್ಷರಾದ ಕಿಟ್ಟು ನಾಯಕ.ಉಪಾಧ್ಯಕ್ಷ ಆಕಾಶ ನಾಯಕ ಗಣಪತಿ ನಾಯಕ, ಪಪ್ಪಿ ಗಾಂವಕರ ಪಡುವಣಿ, ಶ್ರೀಶಾಳ ತಂದೆ ಶಿವಕುಮಾರ ನಾಯಕ ತಾಯಿ ಮಂಜುಳಾ ನಾಯಕ ಕುಟುಂಬದವರು ಮೊದಲಾದವರಿದ್ದರು.