2,586 total views
ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಬಳಬಟ್ಟಿ ಗ್ರಾಮದಲ್ಲಿ 75 ನೇ ಅಮೃತ ಮಹೋತ್ಸವ ಸಂವಿಧಾನ ದಿನಾಚರಣೆ . ಈ ವೇಳೆ ಮಾತನಾಡಿದ ಶಾಲಾ ವಿದ್ಯಾರ್ಥಿ ಸಂಗೀತ.ಪಾಟೀಲ್ ಸಂವಿಧಾನ ಸಮರ್ಪಣಾ ದಿನಾಚರಣೆವಿಶ್ವದಲ್ಲೇ ಅತ್ಯಂತ ಶ್ರೇಷ್ಠವಾದ ಭಾರತದ ಸಂವಿಧಾನವು ಸರ್ವರಿಗೂ ಸಮಬಾಳು-ಸಮಪಾಲು ನೀಡಿದೆ ಬಳಬಟ್ಟಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿ ಸಂಗೀತಾ ಪಾಟೀಲ್
ಹೇಳಿದರು.
ದೇಶದ ಏಕತೆ ಮತ್ತು ಸಮಗ್ರತೆಗಾಗಿ ಎಲ್ಲರಲ್ಲೂ ಸಹೋದರತೆ ಮೂಡಿಸುವುದಕ್ಕೆ ರಾಷ್ಟ್ರಕ್ಕೆ ಸಂವಿಧಾನ ಅರ್ಪಣೆಗೊಂಡಿರುತ್ತದೆ. ಇದರಿಂದ ದೇಶದ ಎಲ್ಲ ಪ್ರಜೆಗಳಿಗೆ ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯವನ್ನು, ವಿಚಾರ, ಅಭಿವ್ಯಕ್ತಿ, ನಂಬಿಕೆ, ಧರ್ಮ ಮತ್ತು ಉಪಾಸನೆಯ ಸ್ವಾತಂತ್ರ್ಯವನ್ನು ಸ್ಥಾನ-ಮಾನ ಮತ್ತು ಅವಕಾಶಗಳ ಸಮಾನತೆಯ ಅವಕಾಶ ಲಭಿಸಿದೆ ಎಂದರು. ಭಾರತೀಯರಾದ ಎಲ್ಲರೂ ವಿಶೇಷವಾಗಿ ವಿದ್ಯಾರ್ಥಿ, ಯುವ ಸಮುದಾಯ ಭಾರತದ ಮೂಲ ಪೀಠಿಕೆಯನ್ನು ಓದಿ ಅರ್ಥಮಾಡಿಕೊಂಡು ದೇಶದಲ್ಲಿ ಎಲ್ಲರೂ ಗೌರವ, ಘನತೆ, ಸ್ವಾಭಿಮಾನದಿಂದ ಬದುಕು ಕಟ್ಟಿಕೊಳ್ಳಬೇಕೆಂದು ತಿಳಿಸಿದರು. ಗಿರಿಯಪ್ಪ ತಳವಾರ, ಯಲ್ಲಪ್ಪ ಚಲವಾದಿ ಪರಶುರಾಮ ಚಲವಾದಿ, ಯಲ್ಲಪ್ಪ ದೊಡಮನಿ, ರಸೂಲ ಮುಲ್ಲಾ, ಪರಶುರಾಮ ಚಿಮ್ಮಲಗಿ, ಸಲೀಮ ವಾಲಿಕಾರ ಸೋಮನಾಥ ಗಾಯಕವಾಡ, ಸಚಿನ ಚೋರಿ, ಗೋಪಾಲ ಕಟ್ಟಿಮನಿ,ಸುರೇಶ ಚಲವಾದಿ, ಮಂಜಪ್ಪ ಚಲವಾದಿ, ರಾಮನಗೌಡ ಪಾಟೀಲ, ವೈ ಎ ಬೋಳಿ, ಸವಿತಾ ಒಡೆಯರ, ಮಲ್ಲು ಕೊಪ್ಪ, ಕರ್ನಾಟಕ ಭೀಮ ಸೇನೆಯ ವಿಜಯಪುರ ಜಿಲ್ಲಾ ಸಮಿತಿಯ ಎಲ್ಲಾ ಪದಾಧಿಕಾರಿಗಳು ಮತ್ತು ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕರು ಮತ್ತು ಮುದ್ದು ಮಕ್ಕಳು ಮತ್ತು ಬಳಬಟ್ಟಿ ಗ್ರಾಮದ ಎಲ್ಲ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು