2,379 total views
ಆಲಮೇಲ : ವಿಜಯಪುರ ಜಿಲ್ಲೆ ಅಲಮೇಲ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಮಲಘಾಣ ಗ್ರಾಮ ಪಂಚಾಯಿತಿಯಲ್ಲಿ 15 ನೇ ಹಣಕಾಸಿನಲ್ಲಿ 22 ಲಕ್ಷ ರೂ. ಹಣವನ್ನು ಲೂಟಿ ಮಾಡಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಶೀರ ಚಿಕ್ಕಲಕಿ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷ ಕಾಂತಪ್ಪ ತಳವಾರ ಇವರು ಗ್ರಾಮ ಪಂಚಾಯತಿಯಲ್ಲಿ 15ನೇ ಹಣಕಾಸಿನಲ್ಲಿ ಸುಮಾರು 22ಲಕ್ಷ ರೂ. ಹಣವನ್ನ ಗುಳುಂ ಮಾಡಿದ್ದಾರೆ.
ಮತ್ತುಈ ವಿಷಯದ ಬಗ್ಗೆ ತಾಲೂಕು ಪಂಚಾಯಿತಿ ಅಧಿಕಾರಿಗಳಿಗೆ ಕರೆ ಮಾಡಿ ಹೇಳಿದರೂ ಕೂಡ ಮತ್ತು ಮಾಹಿತಿ ಹಕ್ಕು ಕೇಳಿದರೂ ಕೂಡ ಯಾವುದೇ ರೀತಿಯಲ್ಲಿ ಸ್ಪಂದಿಸುತ್ತಿಲ್ಲಾ ಎಂದು ಮಹಾಯುದ್ಧ ನ್ಯೂಸ್ ಕರ್ನಾಟಕ ಸ್ಟೇಟ್ ರಿಪೋರ್ಟರ್ ಆದ ಶಂಕರಗೌಡ ಹಚ್ಚಡದ ಇವರು ಆರೋಪ ಮಾಡಿದ್ದಾರೆ.
15ನೇ ಹಣಕಾಸೀನ ಕಾಮಗಾರಿಗಳನ್ನು ಮಾಡದೇ 22 ಲಕ್ಷ ರೂಪಾಯಿ ಹಣವನ್ನು ಲೂಟಿ ಮಾಡಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಪಂಚಾಯಿತಿ ಅಧ್ಯಕ್ಷ ಕಾಂತಪ್ಪ ತಳವಾರ್ ಇವರು ಲೂಟಿ ಮಾಡಿದ ಹಣವನ್ನು ವಾಪಸ್ ಪಂಚಾಯಿತಿಗೆ ಕಟ್ಟದೇ ಇದ್ದರೆ ಬರುವ ದಿನಗಳಲ್ಲಿ ತಾಲೂಕು ಪಂಚಾಯಿತಿ ಎದುರುಗಡೆ ಪ್ರತಿಭಟನೆ ಮಾಡಬೇಕಾಗುತ್ತೆ ಎಂದು ಅಭಿವೃದ್ಧಿ ಅಧಿಕಾರಿಗಳಿಗೆ ಹಾಗೂ ಅಧ್ಯಕ್ಷ ಗೆ ಎಚ್ಚರಿಕೆ ಸಂದೇಶವನ್ನ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದರು.
ವರದಿ : ಯಮನಪ್ಪ ಚೌಧರಿ