2,571 total views
ಕುಂದಾ ನಗರಿ ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿಯವರು ಬೆಳಗಾವಿ ಗ್ರಾಮಾಂತರ ಹಾಗೂ ಮಹಾನಗರ ಜಿಲ್ಲೆಗಳ ವತಿಯಿಂದ “ನಮ್ಮ ಭೂಮಿ, ನಮ್ಮ ಹಕ್ಕು” ಘೋಷವಾಕ್ಯದಡಿಯಲ್ಲಿ ಪೂರ್ತಿ ಒಂದು ದಿನ ಬೃಹತ್ ಜನಾಂ ದೋ ಲನವನ್ನು ಬೆಳಗಾಂವಿಯ ಜಿಲ್ಲಾಧಿಕಾರಿಗಳ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು .
ಜಿಲ್ಲಾ ಅಧ್ಯಕ್ಷರಾದ ಶ್ರೀ ಸುಭಾಸ್ ಗೌಡ ಪಾಟೀಲ್, ಮಾಜಿ ಶಾಸಕರಾದ ಶ್ರೀ ಸಂಜಯ್ ಪಾಟೀಲ್ ಇವರ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಸಲಾಯಿತು.
ಈ ಪ್ರತಿಭಟನೆಯಲ್ಲಿ ರಾಮದುರ್ಗ ತಾಲೂಕಿನ ಮಹಿಳಾ ಮೋರ್ಚಾ ಜಿಲ್ಲಾ ಉಪಾಧ್ಯಕ್ಷರು ಆದ ಶ್ರೀಮತಿ ಶಾಲಿನಿ ಶಿವರಾಜ್ ಇಳಿಗೇರ. ರವರು ಮಹಿಳಾ ತಂಡದೊಂದಿಗೆ ಜಿಲ್ಲಾ ಅಧ್ಯಕ್ಷರ ಪ್ರತಿಭಟನೆಯ ಕರೆಗೆ ಕೈಜೋಡಿಸಿ” ನಮ್ಮ ಭೂಮಿ ನಮ್ಮ ಹಕ್ಕು ” ಪ್ರತಿಭಟನೆಯಲ್ಲಿ ಮಹಿಳಾ ತಂಡದ ಮುಂದಾಳತ್ವ ವಹಿಸಿದರು.
ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷರಾದ ಶ್ರೀ ಕೆ. ವಿ ಪಾಟೀಲ್, ಮಂಡಲ ಪ್ರಧಾನ ಕಾರ್ಯದರ್ಶಿಯಾದ ಈರನಗೌಡ ಹೊಸಗೌಡರ, ಮಹಿಳಾ ಕಾರ್ಯ ಕರ್ತರಾದ ರಾಧಿಕಾ ಧೂತ್, ಅಕ್ಷತಾ ನಂದರ್ಗಿ, ಗೀತಾ ಕಲ್ಲೂರ್, ಶೃತಿ ಅಡಕರ್, ನಿಂಗವ್ವ ಪೈಲಿ, ಲಷ್ಮಿ ಕಬ್ಬುರ್ ಹಾಗೂ ಬಿಜೆಪಿ ಜಿಲ್ಲೆ ಹಾಗೂ ಮಂಡಲ ಪದಾಧಿಕಾರಿಗಳು ಹಾಗೂ ಬಿಜೆಪಿ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ ರಾಮಚಂದ್ರ ಹ ಕುಕಡಿ ರಾಮದುರ್ಗ