2,569 total views
ಸಿಂದಗಿ : ತಾಲೂಕಿನ ಚಾಂದಕವಠೆ ಗ್ರಾಮ ಪಂಚಾಯತಿಯಲ್ಲಿ ಇಂದು ಭಾರತ ಸಂವಿಧಾನ ಆಚರಣೆ ಮಾಡಿ ಗ್ರಾಮ ಸಭೆ ನಡೆಸಲಾಯಿತು. ಗ್ರಾಮ ಸಭೆಯಲ್ಲಿ ಪಿಡಿಒ ಶ್ರೀ ವಿರೂಪಾಕ್ಷ ನಾಡಗೌಡ ಮಾತನಾಡಿ ನರೇಗಾ ವರ್ಷದ ಕ್ರಿಯಾಯೋಜನೆಯ ಹಲವಾರು ಕಾಮಗಾರಿಗಳ ಬಗ್ಗೆ ತಿಳಿಸಿದರು. ಹಾಗೆ ಸಾರ್ವಜನಿಕರಿಂದ ಹೆಚ್ಚು ಕುಂದುಕೊರತೆ ಇರುವ ಕಾಮಗಾರಿಗಳನ್ನು ಪಟ್ಟಿ ಮಾಡಿಕೊಂಡರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿಡಿಪಿಒ ಶ್ರೀ ಶಂಭುಲಿಂಗ ಹಿರೇಮಠ ಸಿಂದಗಿ, ಜಿಲ್ಲಾ ಕೆಡಿಪಿ ಸದಸ್ಯರಾದ ಶ್ರೀ ನೂರಹ್ಮದ್ ಅತ್ತಾರ, ಸಿದ್ದಲಿಂಗಯ್ಯ ಹಿರೇಮಠ, ಸಂತೋಷ ಬಿರಾದಾರ, ಸಿದ್ದಗೊಂಡ ಹಿರೇಕುರುಬರ, ಶಿಕ್ಷಕರಾದ ಸಿದ್ದು ಜೋಗುರ, ಶರಣಗೌಡ ಕೊಕಟನೂರ, ನಿಂಗಣ್ಣ ಕಕ್ಕಳಮೇಲಿ, ಶ್ರೀಮಂತ ಹಾಳಿಕೇರಿ, ಮಲಕಣ್ಣ ಭಂಟನೂರ್, ಭೀಮಾಜಿ ಕುಲಕರ್ಣಿ, ಶಮೀರಪಟೇಲ್, ಹಾಗೂ ಗ್ರಾಮ ಪಂಚಾಯತ ಸಿಬ್ಬಂದಿಗಳು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಈ ಗ್ರಾಮ ಸಭೆಯಲ್ಲಿ ಉಪಸ್ಥಿತರಿದ್ದರು.
ವರದಿ : ಯಮನಪ್ಪ ಚೌಧರಿ