2,583 total views
ಕುಮಟಾ:- ಬಸ್ ಗೆ ಬೆಂಕಿ ತಗುಲಿದ ಘಟನೆ ಕುಮಟಾದ ಬಸ್ ಡಿಪೋದಲ್ಲಿಯೇ ಸಂಭವಿಸಿದೆ.
ಹೆರವಟ್ಟಾದಲ್ಲಿರುವ ಬಸ್ ಡಿಪೋದಲ್ಲಿ ನಿಂತುಕೊಂಡಿದ್ದ ಬಸ್‌ಗೆ ಬೆಂಕಿ ಹೊತ್ತಿಕೊಂಡಿದೆ. ತಡರಾತ್ರಿ 2-05ಗಂಟೆಗೆ ಈ ಅವಘಡ ಸಂಭವಿಸಿದ್ದು ಘಟನೆಯಿಂದ ಬಸ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ಪಕ್ಕದಲ್ಲಿದ್ದ ಇನ್ನೊಂದು ಬಸ್ ಗೆ ಸ್ವಲ್ಪ ಬೆಂಕಿ ಹೊತ್ತಿಕೊಂಡಿದ್ದು .ಸುದ್ದಿ ತಿಳಿದ ತಕ್ಷಣ ಕುಮಟಾ ಅಗ್ನಿಶಾಮಕ ದಳ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ. ಬ್ಯಾಟರಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿರಬಹುದೆಂದು ಶಂಕಿಸಲಾಗಿದೆ.