2,582 total views
ಚಿಟುಗುಪ್ಪ : ಹೈನುಗಾರಿಕೆ ಜಾನುವಾರುಗಳ ವಿವಿಧ ತಳಿಗಳ ಬಗ್ಗೆ ಹೆಚ್ಚು ಜಾಗೃತಿ ವಹಿಸಿದಾಗ ಮಾತ್ರ ಅವುಗಳು ಹೆಚ್ಚಿನ ರೀತಿಯಲ್ಲಿ ಹಾಲು ಕೊಡುತ್ತವೆ ಎಂದು ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ರಾಜಶೇಖರ ದೇವಣಿ ಹೇಳಿದರು. ತಾಲೂಕಿನ ಕಂದಗೋಳ ಗ್ರಾಮದಲ್ಲಿ ಆಯೋಜಿಸಿದ್ದ ಹೈನುಗಾರಿಕೆ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಕೊಟ್ಟಿಗೆ ರಚನೆ, ಜಾನುವಾರು ಆರೋಗ್ಯವಂತವಾಗಿ ಇರಬೇಕಾದರೆ ಜಾನುವಾರುಗಳಿಗೆ ನೀಡಬೇಕಾದ ಸಮತೋಲನ ಆಹಾರ ಪದ್ಧತಿ ಸರಿಯಾಗಿ ಕಾಪಾಡಿಕೊಂಡು ಹೋಗಬೇಕು.
ಹಸಗಳ ಯೋಗಕ್ಷೇಮ ಚೆನ್ನಾಗಿ ನೋಡಿಕೊಳ್ಳಬೇಕು ಎಂದರು. ಜಿಲ್ಲಾ ಪ್ರಬಂಧಕ ಗಣೇಶ ಮಾತನಾಡಿ
ಪಶು ಆಹಾರ, ಮಿನರಲ್ ಮಿಕ್ಸರ್ ಬಳಸುವ ಕ್ರಮ ಸೂಕ್ತ ರೀತಿಯಲ್ಲಿ ಇರಬೇಕು, ಜಾನುವಾರುಗಳಿಗೆ ನೀಡುವ ವ್ಯಾಕ್ಸಿನಗಳ ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡಬೇಕು, ಜಾನುವಾರುಗಳ ವಿಮೆ ಕಡ್ಡಾಯವಾಗಿ ಮಾಡಿಸಬೇಕು, ಹಸುಗಳ ಆರೋಗ್ಯ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯ ತಕ್ಷಣವೇ ಆಗಬೇಕು. ಸಂಸದ ವೀರೇಂದ್ರ ಹೆಗ್ಗಡೆಜೀಯವರ ಸಂಸದರ ನಿಧಿಯಿಂದ ಅನುದಾನವನ್ನು ಹೆಚ್ಚು ಬಳಸಿಕೊಂಡು ಈ ಭಾಗದ ಹೈನುಗಾರಿಕೆ ಅಭಿವೃದ್ಧಿ ಬೆಳವಣಿಗೆಗೆ ಕಾರಣರಾಗಬೇಕೆಂದು ತಿಳಿಸಿದರು. ವಲಯ ಮೇಲ್ವಿಚಾರಕ ಜಾನ್ಸನ್ ಮಾತನಾಡಿ ಸಂಘದ ವಾರ ಸಭೆ ಸರಿಯಾಗಿ ಆಗಬೇಕು. ಪ್ರಬುದ್ಧ ಸದಸ್ಯರು ಡೈರಿ ಬೆಳೆಸಲು ಪಣ ತೊಡಬೇಕು ಎಂದರು. ಕೃಷಿ ಮೇಲ್ವಿಚಾರಕ ಸಿದ್ದು ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಈ ತರಬೇತಿ ಕಾರ್ಯಕ್ರಮದಲ್ಲಿ ಡೈರಿ ಅಧ್ಯಕ್ಷರು , ಸಂಘದ ಸದಸ್ಯರು, ಕೃಷಿ ಮೇಲ್ವಿಚಾರಕರು, ಡೈರಿ ಕಾರ್ಯದರ್ಶಿ, ಸಹಾಯಕ ಪ್ರಬಂಧಕರು ಹಾಗೂ ಸೇವಾ ಪ್ರತಿನಿಧಿಗಳು ಸೇರಿದಂತೆ ಇನ್ನಿತರು ಉಪಸ್ಥಿತರಿದ್ದರು.
ವರದಿ – ಸಂಗಮೇಶ ಎನ್ ಜವಾದಿ.