2,614 total views
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ವಾರ್ಡ್ ನಂಬರ್ 18ರಲ್ಲಿ ಬರುವ ಬುಡೊ ಬೋವಿಗಲ್ಲಿ ಯಲ್ಲಿ ಮೀಟರ್ ಬಡ್ಡಿ ದಂಧೆಯು ಯಾವುದೇ ಇಲಾಖೆಯ ಅಧಿಕಾರಿಗಳ ಭಯವಿಲ್ಲದೆ ಅಕ್ರಮ ಮೀಟರ್ ಬಡ್ಡಿದಂದೆಯೂ ರಾಜ ರೋಷವಾಗಿ ನಡೆಯುತ್ತಿದೆ ಅದೇ ರೀತಿಯಾಗಿ ಬಡವರನ್ನು ಟಾರ್ಗೆಟ್ ಮಾಡಿ ದಿನದ ಬಡ್ಡಿಯಂತೆ ಅಥವಾ ವಾರದ ಬಡ್ಡಿಯಂತೆ 10 ರಿಂದ ಇಪ್ಪತ್ತು ಸಾವಿರ ರೂಪಾಯಿ ನಗದು ಕೊಟ್ಟು ಅನಧಿಕೃತವಾಗಿ ವಾರದ ಬಡ್ಡಿಯಂತೆ ಎರಡರಿಂದ ಮೂರು ಸಾವಿರ ರೂಪಾಯಿ ಬಡ್ಡಿ ವಸೂಲು ಮಾಡುತ್ತಿದ್ದಾರೆಂದು ಇದರಿಂದ ಕೆಲವು ಕುಟುಂಬಗಳು ಬೀದಿ ಪಾಲಾಗಿವೆ ಎಂದು ಸ್ಥಳೀಯರು ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ ಇದರಿಂದ ಕೆಲ ಬಡವರು ಮೀಟರ್ ಬಡ್ಡಿದಂದೆ ಕೊರರಿಂದ ಕಿರುಕುಳ ತಾಳಲಾರದೆ ಊರು ಬಿಟ್ಟು ಓಡಿ ಹೋಗಿದ್ದಾರೆ ಅದೇ ರೀತಿಯಾಗಿ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಸುರಪುರ ತಾಲೂಕಿನಲ್ಲಿ ನಡೆಯುವ ಮಟ್ಕಾ ದಂಧೆಯ ಹಾವಳಿಗೆ ಹಾಗೂ ಮೀಟರ್ ಬಡ್ಡಿದಂದೆ ಮಾಡುವ ಕದಿಮರಿಗೆ ತಾಲೂಕಿನ ಪೊಲೀಸ್ ಇಲಾಖೆಯ ಅಧಿಕಾರಿಗಳು ಎಡೆಮುರಿ ಕಟ್ಟಬೇಕೆಂದು ತಾಲೂಕಿನ ಸ್ಥಳೀಯರು ಆಗ್ರಹಿಸಿದ್ದಾರೆ