2,575 total views
ಸಿಂದಗಿ : ನಗರದ ಅಂಜುಮನ್ ಶಾಲೆ ಆವರಣದಲ್ಲಿ ಮಧ್ಯರಾತ್ರಿ ವ್ಯಕ್ತಿಯೊಬ್ಬನ ತಲೆ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಹತ್ಯೆಗೈದಿದ್ದಾರೆ. ಕೊಲೆಯಾದ ದುರ್ದೈವಿ ಶರಣಗೌಡ ಕಕ್ಕಳಮೇಲಿ ವಯಸ್ಸು 38 ಎಂದು ಗುರುತಿಸಲಾಗಿದೆ. ಈತನು ಆಲಮೇಲ ತಾಲೂಕು ಮಲಘಾಣ ಗ್ರಾಮದ ನಿವಾಸಿ ಎಂದು ಪೊಲೀಸ್ ಮೂಲಗಳು ತಿಳಿಸಿವೆ.ಅಪರಿಚಿತರಿಂದ ಕೊಲೆ ನಡೆದಿದ್ದು ಕೊನೆಗೆ ಮೂಲ ಕಾರಣಗಳು ತಿಳಿದುಬಂದಿಲ್ಲ.ಈ ಘಟನೆ ಸಿಂದಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ವರದಿ : ಯಮನಪ್ಪ ಚೌಧರಿ