2,579 total views
ಸರ್ಕಾರಿ ಆಸ್ತಿಗಳಿಗೆ ಯಾವುದೇ ರಕ್ಷಣೆ ಇಲ್ಲದಂತಾಗಿದೆ ಅಕ್ರಮ ಒತ್ತುವರಿಯಾದ ಸರ್ಕಾರಿ ಆಸ್ತಿಗಳ ಬಗ್ಗೆ ದೂರು ನೀಡಿದರು ಅಧಿಕಾರಿಗಳ ಬೇಜವಾಬ್ದಾರಿತನ ನಿರ್ಲಕ್ಷತನದಿಂದ ನೀಡುತ್ತಿರುವ ದೂರುಗಳು ಮೂಲೆ ಹಿಡಿಯುತ್ತಿದೆ ನೆಲಮಂಗಲ ತಾಲೂಕಿನ ದೊಡ್ಡಬೆಲೆ ಗ್ರಾಮದ ಸರ್ವೆ ನಂಬರ್ 38 ರಲ್ಲಿ ಸರ್ಕಾರಿ ಸಾರ್ವಜನಿಕ ಸ್ಮಶಾನ ಜಮೀನು ಅನಧಿಕೃತವಾಗಿ ಒತ್ತುವರಿಯಾಗಿರುತ್ತದೆ ಈ ಹಿಂದೆ ಅಧಿಕಾರಿಗಳ ತನಿಖೆ ಮೇರೆಗೆ ಅನಾಧಿಕೃತ ಒತ್ತುವರಿಯಂದು ಸಾಬೀತುಕೊಂಡಿರುತ್ತದೆ
ಇದರ ಸಲುವಾಗಿ ಮಾಹಿತಿ ಹಕ್ಕು ಬಳಕೆದಾರರು ಹಾಗೂ ಸಾಮಾಜಿಕ ಹೋರಾಟಗಾರ್ತಿಯಾದ ಅಮೃತ ಜಯರಾಮ್ ರವರೂ ನೆಲಮಂಗಲ ತಹಸಿಲ್ದಾರ್ ರವರಿಗೆ ದೂರು ನೀಡಿರುತ್ತಾರೆ ದೂರು ನೀಡಿ 1 ತಿಂಗಳು ಕಳೆದರೂ ನೆಲಮಂಗಲ ತಾಸಿಲ್ದಾರ್ ರವರೂ ಇದು ವರೆಗೂ ಯಾವುದೇ ಕ್ರಮ ತೆಗೆದುಕೊಂಡಿರುವುದಿಲ್ಲ ಇವರ ಈ ಬೇಜವಾಬ್ದಾರಿತನ ಹಾಗೂ ಕರ್ತವ್ಯ ಲೋಪವನ್ನು ಖಂಡಿಸಿ ಶ್ರೀಮತಿ ಅಮೃತ ಜಯರಾಮ್ ರವರು ಮಾನ್ಯ ಉಪ ವಿಭಾಗಾಧಿಕಾರಿಗಳಿಗೆ ದೂರು ನೀಡಿ ಸರ್ಕಾರಿ ಸ್ಮಶಾನ ಜಾಗ ಅನಾದಿಕೃತ ಒತ್ತುವರಿಯಾಗಿದ್ದು
ಸಾಬೀತಾಗಿದ್ದು ಕೂಡ ಯಾವುದೇ ಕ್ರಮ ಪಾಲಿಸದೇ ಇರುವ ನೆಲಮಂಗಲ ತಾಸಿಲ್ದಾರ್ ಹಾಗೂ ರಾಜಸ್ವ ನಿರೀಕ್ಷಕರು ಹಾಗೂ ವಿಲೇಜ್ ಅಕೌಂಟೆಂಟ್ ರವರನ್ನು ಇವರನ್ನು ಸೂಕ್ತ ಕಾನೂನು ತನಿಖೆಗೆ ಒಳಪಡಿಸಿ ಬೇಜವಾಬ್ದಾರಿತನ ಹಾಗೂ ಕರ್ತವ್ಯ ಲೋಪವೀಸುತ್ತಿರುವ ಹಿನ್ನೆಲೆ ಅಮಾನತುಗೊಳಿಸುವಂತೆ ದೂರು ನೀಡಿ ಮನವಿ ಮಾಡಿದ್ದಾರೆ