2,483 total views
ಧಾರೇಶ್ವರದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಎಸ್ ಎಸ್ ಎಲ್ ಸಿ ನಂತರದ ವೃತ್ತಿ ಮಾರ್ಗದರ್ಶನದ ಕಾರ್ಯಗಾರ ಕೆನರಾ ವೆಲ್ಫೇರ್ ಟ್ರಸ್ಟ್ ನ ಅಧ್ಯಕ್ಷರಾಗಿರುವ ಶ್ರೀ ಎಸ್. ಪಿ . ಕಾಮತ್ ಆಶಯದಂತೆ ಶ್ರೀ ಎಸ್.ಯು. ಕುಲ್ಕರ್ಣಿ ನೇತೃತ್ವದಲ್ಲಿ ಡ್ರೀಮ್ ಪಾತ್ ಫೌಂಡೇಶನ್ ಸಂಯೋಗದೊಂದಿಗೆ ಜನತಾ ವಿದ್ಯಾಲಯ ಧಾರೇಶ್ವರ ಮತ್ತು ದಿನಕರ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ ( carrier gardens program) ವನ್ನು ದಿನಾಂಕ 21-11-2024 ರಂದು ಬೆಳಿಗ್ಗೆ 9.30 ರಿಂದ ಸಂಜೆ 4.30 ರ ವರೆಗೆ ನೆರವೇರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಶ್ರೀಮತಿ ನಾಗಮಣಿ ಕುಮಾರ್(ಸಂಪನ್ಮೂಲ ವ್ಯಕ್ತಿಗಳು) ಮತ್ತು ಶ್ರೀಮತಿ ಆಶಾ ಶೇಷಾದ್ರಿ (ಸಂಪನ್ಮೂಲ ವ್ಯಕ್ತಿಗಳು) ಉಪಸ್ಥಿತರಿದ್ದು ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನದ ಕುರಿತು ಮತ್ತು ವೃತ್ತಿಗೆ ಬೇಕಾಗುವ ವಿಷಯದ ಆಯ್ಕೆಯ ಮಹತ್ವದ ಕುರಿತು ತಿಳಿಸಿ ವಿದ್ಯಾರ್ಥಿಗಳಿಗೆ ವೃತ್ತಿಯ ಬಗೆಗಿನ ಆಸಕ್ತಿ ಯನ್ನು ಹೆಚ್ಚಿಸುವುದರ ಜೊತೆಗೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ಪ್ರೇರಣೆಯನ್ನು ನೀಡಿದರು. ಈ ಕಾರ್ಯಕ್ರಮದಲ್ಲಿ ಜನತಾ ವಿದ್ಯಾಲಯದ ಧಾರೇಶ್ವರದ ಮುಖ್ಯಾಧ್ಯಾಪಕರಾದ ಶ್ರೀ ಗೋಪಿ ಎಸ್ ಭಜಂತ್ರಿ, ಮತ್ತು ದಿನಕರ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯಾಧ್ಯಾಪಕರದ ಶ್ರೀ ಜಗದೀಶ್ ಗುನಗ ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಪಾಲಕರು ಮತ್ತು ಊರ ನಾಗರಿಕರು ಉಪಸ್ಥಿತರಿದ್ದರು.ಈ ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ಸುಪ್ರೀತಾ ಸೂರಜ್ ನಾಯ್ಕ ,ಇವರು(ವಿಜ್ಞಾನ ಶಿಕ್ಷಕಿ,ದಿನಕರ ಆಂಗ್ಲ ಮಾಧ್ಯಮ ಪ್ರೌಢಶಾಲೆ) ಸ್ವಾಗತ ಮತ್ತು ವಂದನಾರ್ಪಣೆಯನ್ನು ನೆರವೇರಿಸಿದರು.