2,613 total views
ಸಾಲಿಗ್ರಾಮ :ಪಕ್ಷಾತೀತ ಮತ್ತು ಜಾತ್ಯಾತೀತವಾಗಿ ಎಲ್ಲಾ ಸಮಾಜಗಳ ವಿದ್ಯಾರ್ಥಿಗಳನ್ನು ಗುರುತಿಸಿ ಕಳೆದ ೨೩ ವರ್ಷಗಳಿಂದ ನಿರಂತರವಾಗಿ ಗೌರವಿಸುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಪಟ್ಟಣದ ಪಿಕಾರ್ಡ್ ಬ್ಯಾಂಕಿನ ರೈತ ಸಮುದಾಯ ಭವನದಲ್ಲಿ ಸೃಜನ ಲೇಖಕರು ಮತ್ತು ಕಲಾವಿದರ ಬಳಗ ಹಾಗೂ ವಿಚಾರಪ್ರಜ್ಞೆ ಪತ್ರಿಕಾ ಬಳಗ ಇವರ ಸಂಯುಕ್ತಾಶ್ರಯದಲ್ಲಿ ನಡೆದ ೫೫ನೇ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಆಧುನಿಕ ಯುಗದಲ್ಲಿ ಧರ್ಮ ಮತ್ತು ಜಾತಿಗಳ ಆಧಾರದ ಮೇಲೆ ಗುರುತಿಸಿ ಪ್ರತಿಭಾವಂತರನ್ನು ಪುರಸ್ಕರಿಸುವುದನ್ನು ಕಾಣುತ್ತಿದ್ದೇವೆ. ಎದುರಾಗುವ ತೊಡಕುಗಳನ್ನು ನಿವಾರಿಸಿಕೊಂಡು ಕಾರ್ಯಕ್ರಮ ಸಂಘಟಟಿಸುವುದು ಕಷ್ಟಸಾಧ್ಯ. ಆದರೆ ಸಂಘಟಕ ರಾ.ಸುರೇಶ್ ಇದಕ್ಕೆ ಹೊರತಾಗಿ ಸರ್ವ ಜನಾಂಗದವರನ್ನು ಯಾವುದೇ ರೀತಿಯ ತಾರತಮ್ಯ ಮಾಡದೆ ಇಂತಹ ಮಹತ್ವಪೂರ್ಣವಾದ ಕೆಲಸ ಮಾಡುತ್ತಿರುವುದು ಹೆಮ್ಮೆಪಡುವ ವಿಚಾರ ಎಂದರು.
ಭಾರತ ದೇಶದ ಭವಿಷ್ಯದ ಪ್ರಜೆಗಳಾದ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಪಡೆದು ಉನ್ನತ ಮಟ್ಟದ ಸಾಧನೆಗೈದು ರಾಷ್ಟçದ ಅಭಿವೃದ್ಧಿಗೆ ನೆರವಾಗಬೇಕು. ಹಾಗೆಯೇ ಪೋಷಕ ವೃಂದದವರು ಸದಾ ಅಂತಹವರ ಜೊತೆಗಿದ್ದು, ಸಹಕಾರ ನೀಡಬೇಕು. ಆಗ ಮಾತ್ರ ಬದುಕಿನಲ್ಲಿ ಸಾರ್ಥಕತೆಯನ್ನು ಪಡೆದುಕೊಳ್ಳಲು ಸಾಧ್ಯವಾಗಲಿದೆ ಎಂದು ತಿಳಿಸಿದರು.
೨೦೨೪ನೇ ಸಾಲಿನ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ರಾ.ಸುರೇಶ್ ಅವರ ಹೆಸರನ್ನು ಶಿಫಾರಸು ಮಾಡಲಾಗಿತ್ತು. ಅಂತಿಮ ಆಯ್ಕೆಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗಿರಲಿಲ್ಲ. ಇದಕ್ಕೆ ದೃತಿಗೆಡುವ ಅಗತ್ಯವಿಲ್ಲ. ೨೦೨೫ನೇ ಸಾಲಿನಲ್ಲಿ ಪ್ರಶಸ್ತಿ ಕೊಡಿಸುವುದು ನಿಶ್ಚಿತ ಎಂದು ಭರವಸೆ ನೀಡಿದರು.
ಪೊಲೀಸ್ ನಿರೀಕ್ಷಕ ಎಸ್.ಶಿವಪ್ರಕಾಶ್ ಉದ್ಘಾಟನೆ ನೆರವೇರಿಸಿ ಮಾತನಾಡಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉತ್ತಮ ಪ್ರೋತ್ಸಾಹ ನೀಡಿ ಸಮಾಜದ ಸ್ವಾಸ್ಥö್ಯವನ್ನು ಕಾಪಾಡಲು ನೆರವಾಗಬೇಕು. ಆರ್ಥಿಕವಾಗಿ ಸದೃಢರಾಗಿದ್ದರೆ ಸಮಾಜದಲ್ಲಿ ಅವಕಾಶ ವಂಚಿತರನ್ನು ಗುರುತಿಸಿ ಉತ್ತೇಜನ ನೀಡಬಹುದು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಬಳಗದ ಅಧ್ಯಕ್ಷ ಮತ್ತು ವಿಚಾರಪ್ರಜ್ಞೆ ಪತ್ರಿಕೆಯ ಸಂಪಾದಕ ರಾ.ಸುರೇಶ್ ಮಾತನಾಡಿದರು.
“ಇದೇ ಸಂದರ್ಭದಲ್ಲಿ ಪತ್ರಕರ್ತರಾದ ರಾಮಕೃಷ್ಣೇಗೌಡ, ಉದಯವಾಣಿ ವರದಿಗಾರರಾದ ನಾಗಣ್ಣ, ರಾಜ್ಯ ಧರ್ಮ ವರದಿಗಾರರಾದ ಸಂಘಟನೆ ಮಂಜುನಾಥ್ ಅವರನ್ನು ಶಾಸಕರ ಡಿ. ರವಿಶಂಕರ್ ಅವರು ಸನ್ಮಾನಿಸಿದರು.”
ಜೀವಾ ಆರ್ಥೋಕೇರ್ನ ಮೂಳೆತಜ್ಞ ಡಾ.ಕೆ.ಆರ್.ಗೌತಮ್, ಪೊಲೀಸ್ ಉಪನಿರೀಕ್ಷಕ ಆರ್.ಸ್ವಾಮಿಗೌಡ, ವೈದ್ಯ ಡಾ.ಪಿ.ಜನಾರ್ಧನಭಟ್, ಅಪರ ಸರ್ಕಾರಿ ವಕೀಲ ಕೆ.ಸಿ.ಹರೀಶ್, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಡಾ.ಡಿ.ನಟರಾಜು, ನಿರ್ದೇಶಕ ಸಿ.ಇ.ಉಮೇಶ್, ಸಾರ್ವಜನಿಕ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಉಪಾಧ್ಯಕ್ಷ ಹೆಚ್.ಹೆಚ್.ನಾಗೇಂದ್ರ, ಸೆಕ್ಯೂರಿಟಿ ಸಂಸ್ಥೆಯ ಮಾಲೀಕ ಮಹೇಶ್, ಕರ್ನಾಟಕ ಶ್ರೇಷ್ಟ ಸೌಹಾರ್ದ ಸೊಸೈಟಿಯ ಅಧ್ಯಕ್ಷ ಅಶ್ವಥ, ಶಿಕ್ಷಣ ಇಲಾಖೆ ನಿವೃತ್ತ ಡಿಡಿಪಿಐ ಸಿ.ಎಸ್.ರಾಮಲಿಂಗು, ಪುರಸಭೆ ಮಾಜಿ ಅಧ್ಯಕ್ಷ ನರಸಿಂಹರಾಜು, ಸಾಮರಸ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘದ ನಿರ್ದೇಶಕ ಡಿ.ಕೆ.ಕೃಷ್ಣನಾಯಕ, ಶಾಫಿ ಮಸೀದಿ ಅಧ್ಯಕ್ಷ ಇಸ್ಮಾಯಿಲ್ಖನೋಲಿ, ವಾಲ್ಮೀಕಿ ಅಭಿವೃದ್ಧಿ ನಿಮಗದ ಅಧಿಕಾರಿ ಡಿ.ಜಿ.ಗುರುಶಾಂತಪ್ಪ, ನೇಗಿಲಯೋಗಿ ಸಂಸ್ಥೆ ಮುಖ್ಯಸ್ಥ ರವಿಕುಮಾರ್, ಸುಮುಖ ಆಯಿಲ್ ಮಿಲ್ನ ಮಾಲೀಕ ಅಶೋಕ್ಕುಮಾರ್, ಭೇರ್ಯ ದಿವ್ಯಜ್ಯೋತಿ ಜ್ಞಾನಾಲಯದ ಮುಖ್ಯಸ್ಥೆ ಸಿಸ್ಟರ್ಪೌಲ್, ತಾಲೂಕು ವಾಲ್ಮೀಕಿ ನಾಯಕರ ಸಂಘದ ಅಧ್ಯಕ್ಷ ಟಿ.ಎಸ್.ನರಸಿಂಹನಾಯಕ, ಮಿರ್ಲೆ ಮಿಥಿಲಾ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಎಂ.ಬಿ.ಲೋಕನಾಥ್, ನಿವೃತ್ತ ಮುಖ್ಯಶಿಕ್ಷಕ ನಟರಾಜ್ ಮತ್ತಿತರರು ಹಾಜರಿದ್ದರು.
ಪೋಟೊ ೧,೨-ಕೆ.ಆರ್.ನಗರದ ಪಿಕಾರ್ಡ್ ಬ್ಯಾಂಕಿನ ರೈತ ಸಮುದಾಯ ಭವನದಲ್ಲಿ ಸೃಜನ ಲೇಖಕರು ಮತ್ತು ಕಲಾವಿದರ ಬಳಗ ಹಾಗೂ ವಿಚಾರಪ್ರಜ್ಞೆ ಪತ್ರಿಕಾ ಬಳಗ ಇವರ ಸಂಯುಕ್ತಾಶ್ರಯದಲ್ಲಿ ನಡೆದ ೫೫ನೇ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.