2,579 total views
ಹಾಸನದ ಹಾಸನಾಂಬ ದೇವಾಲಯದಲ್ಲಿ 20:11:2024 ರಂದು ‘ಪ್ರತಿಮಾ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನದ ಪ್ರಥಮ ವರ್ಷದ ವಾರ್ಷಿಕೋತ್ಸವವನ್ನು ಸಂಸ್ಥಾಪಕ ಅಧ್ಯಕ್ಷರು ಶ್ರೀಮತಿ ಹೆಚ್.ಎಸ್.ಪ್ರತಿಮಾ ಹಾಸನ್ ರವರ ಅಂತರಾಳದ ಪ್ರತಿರವ ಮತ್ತು ‘ಪ್ರತಿಮಾವಲೋಕನ’ಕೃತಿಯು ಹಾಸನಾಂಬ ದೇವಿ, ಹಾಗೂ ಸಿದ್ದೇಶ್ವರ ಸ್ವಾಮಿ ಆಶೀರ್ವಾದ ಪಡೆದು ನಂತರ ಕೃತಿ ಲೋಕಾರ್ಪಣೆಯೊಂದಿಗೆ ಆಚರಿಸಲಾಯಿತು. ‘ಅಂತರಾಳದ ಪ್ರತಿರವ’ ಕೃತಿಯ ಲೇಖಕಿ,ಕವಯತ್ರಿ,ಅಂಕಣಗಾರ್ತಿ ಸಮಾಜ ಸೇವಕಿ,ಸಾಮಾಜಿಕ ಚಿಂತಕಿ,ಪತ್ರಕರ್ತೆ,ಗಾಯಕಿಯಾದ ಈಗಾಗಲೇ ‘ಸಾಹಿತ್ಯದ ನವಿಲು’ ಎಂದು ಬಿರುದು ಪಡೆದಿರುವ ‘ಮುಕ್ತಕಗಳ ರಾಣಿ’ಯ ಬಗ್ಗೆ ಮುತ್ತಿನಂಥ ನಾಲ್ಕು ಮಾತುಗಳನ್ನು ಹೇಳಬೇಕೆಂದರೆ “ಸರ್ರನೆ ಆ ಕಡೆಯಿಂದ ಬಂದು ಅಷ್ಟೇ ಸರ್ರನೆ ಈ ಕಡೆಯಿಂದ ಮಾಯವಾಗುವುದನ್ನು ಮಿಂಚು ಅಂತಾರೆ. ಗುಪ್ತವಾಗಿ ಸುಪ್ತವಾಗಿ ಮುಟ್ಟಬೇಕಾದಲ್ಲಿ ಮುಟ್ಟಿಸುವುದನ್ನು ಗುಡುಗು ಅಂತಾರೆ. ಯಾರ ಮುಲಾಜಿಗೂ ಒಳಗಾಗದೆ ಯಾರ ಬೆದರಿಕೆಗೂ ಬಗ್ಗದೆ ಜಗ್ಗದೆ ಆರ್ಭಟಿಸುವುದನ್ನು ಸಿಡಿಲು ಅಂತಾರೆ. ಈ ಮೂರರ ಮಿಕ್ಚರಿಗೆ ಒಂದು ಬಲಿಷ್ಠ ಹೆಸರು ಕೊಡುವುದಿದ್ದರೆ ಅದು ಶ್ರೀಮತಿ ಹೆಚ್.ಎಸ್. ಪ್ರತಿಮಾ ಹಾಸನ್ ರವರು. ಈ ಕೃತಿಗೆ ಬೆನ್ನುಡಿಯನ್ನು ನಾನೇ ಬರೆದಿದ್ದೇನೆ.ಇದು ಅರ್ಥ ಪೂರ್ಣವಾಗಿದೆ.
ಎಲ್ಲ ಕ್ಷೇತ್ರಗಳಲ್ಲೂ ತನ್ನನ್ನು ತಾನು ತೊಡಗಿಸಿಕೊಂಡು ಕಾರ್ಯ ಮಾಡುವ ಈ ಪ್ರತಿಮಾ ಹಾಸನ್ ಬಹುಮುಖ ಪ್ರತಿಭೆ ಮಾತ್ರವಲ್ಲ, ಬಹು ಮುಖ್ಯ ಪ್ರತಿಭೆ ಕೂಡ ಇವರ ಈ ಕೃತಿಯಲ್ಲಿ ಬದುಕಿನ ಬವಣೆಯಲ್ಲಿ ಬೆಂದು ಹದವಾದ ಮಾತುಗಳ ಉರಣಗಳಿವೆ ಈ ಕೃತಿಯಲ್ಲಿದೆ, ಹಲವಾರು ಜೀವನದ ರಹಸ್ಯಗಳಿವೆ . ಇಷ್ಟೆಲ್ಲಾ ಭಾವ ವೈವಿಧ್ಯತೆಯ ಪುಟಗಳ ಪುಸ್ತಕ ಮುಕ್ತಕ ಸಂಕಲನ ಇದು ಎಲ್ಲಾ ವಯೋಮಾನದ ಮಾನವ ಕುಲಕ್ಕೆ ದಾರಿದೀಪದ ಲಾಟೀನು. ಇಲ್ಲಿರುವುದು ಬರಿ ಒಣ ತತ್ವಶಾಸ್ತ್ರದ ಒಕ್ಕಣೆಯಲ್ಲ ಬದುಕಿನ ನಿಗೂಢಗಳ ಅಚ್ಚರಿಯ ಅನಾವರಣ” ಎಂದು ಕೃತಿ ಬಗ್ಗೆ ತಿಳಿಸಿದರು ನಂತರ ಲೋಕಾರ್ಪಣೆಗೊಂಡ ಎರಡನೇ ಕೃತಿಯಾದಂತಹ ‘ಪ್ರತಿಮಾವಲೋಕನ ‘ ಕೃತಿಯಲ್ಲಿ ನನ್ನ ಒಂದು ಕೃತಿಯ ಬಗ್ಗೆ ಕೃತಿ ಪರಿಚಯವಿದೆ..’ಚದುರದ ಚಿತ್ರಗಳು ಚಿಗುರಿದ ಕನಸುಗಳು’. ಪುಸ್ತಕದ ಪರಿಚಯವಿದೆ. ದೊಡ್ಡ ದೊಡ್ಡ ಲೇಖಕರ ಯುವ ಲೇಖಕರ ಕೃತಿಗಳ ವಿಮರ್ಶೆಗಳಿವೆ. ಇವರ ಕಾರ್ಯಕ್ಕೆ ಶುಭವಾಗಲಿ ಎಂದು ಹಾರೈಸಿದರು.ಲೇಖಕಿ ಪ್ರತಿಮಾ ಹಾಸನ್ ವಿಮರ್ಶನಾ ಲೋಕದಲ್ಲಿ ಕಾಲಿಟ್ಟಿರುವುದು ಶ್ಲಾಘನೆಯೇ ಸರಿ ಎಂದರು ಹೆಸರಿಗೆ ಪ್ರತಿಮಾ ಹಾಸನ್ ರವರು ನಿಜವಾದಂತಹ ಪ್ರತಿಭೆ ಎಂಬುದು ಸಾಬೀ ತಾಗಿದೆ ಎಂದು ತಿಳಿಸಿದರು. ಇವರ ಪ್ರತಿಭೆ ಅಂತರಾಷ್ಟ್ರ ಮಟ್ಟದಲ್ಲಿ ಮಾತ್ರವಲ್ಲದೆ ಇಡೀ ಪ್ರಪಂಚದ ಅತ್ಯಂತ ಪಸರಿಸಲಿ ಎಂದು ಆಶೀರ್ವದಿಸಿದರು.
ನಂತರ ಗೊರೂರು ಅನಂತರಾಜುರವರು ‘ಪ್ರತಿಮಾವಲೋಕ’ನ ಕೃತಿಯ ಬಗ್ಗೆ ಮಾತನಾಡುತ ಈ ಕೃತಿಗೆ ಮುನ್ನುಡಿಯನ್ನು ನಾನೇ ಬರೆದಿದ್ದೇನೆ. ನನ್ನ ಎರಡು ಕೃತಿಯ ಪರಿಚಯವು ಈ ಕೃತಿಯಲ್ಲಿದೆ. ವಿಚಾರ ವಿಮರ್ಶೆಗಳ ತರ್ಕಗಳು ಮುಕ್ತಕಗಳಿಂದ ಪ್ರಾರಂಭವಾಗಿ ಬಹಳಷ್ಟು ಸೊಗಸಾಗಿ ಕೃತಿ ಹೊರಬಂದಿದೆ. ಒಟ್ಟು 35 ಕೃತಿಗಳ ವಿಮರ್ಶೆಗಳು ‘ಪ್ರತಿಮಾವಲೋಕನ’ ಕೃತಿಯಲ್ಲಿ ಇದೆ. ರಾಜ್ಯದ ಎಲ್ಲಾ ಜಿಲ್ಲೆಯ ಕವಿಗಳ ಮತ್ತು ಲೇಖಕರ, ಸಾಹಿತಿಗಳ ಕೃತಿಗಳ ವಿಮರ್ಶಗಳಿವೆ.ಇವರಿಗೆ ಶುಭವಾಗಲಿ. ಎಂದು ಹಾರೈಸಿದರು. ಅಂತರಾಳದ ಪ್ರತಿರವ ಕೃತಿಯು ಗಮನಿಸಿದರೆ ಡಿವಿಜಿ ಅವರ ಕಗ್ಗವನ್ನು ಹೋಲುತ್ತದೆ . ಪ್ರತಿಯೊಂದು ಮುಕ್ತಕಗಳು ಅರ್ಥಪೂರ್ಣವಾಗಿದ್ದು. ಭಾವಾರ್ಥದೊಂದಿಗೆ ಇರುವುದರಿಂದ ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳುವಂತಹ ಪ್ರಸ್ತುತ ದಿನಮಾನಗಳ ಆಗು-ಹೋಗುಗಳ ವಿಚಾರಗಳು, ಸಮಾಜದ ಓರೆ ಕೋರೆಗಳನ್ನು ತಿದ್ದುವಂತಹ ಅಂಶಗಳು ಇರುವುದರಿಂದ ಓದುಗರ ಮನೆ ಮುಟ್ಟುತ್ತದೆ. ಒಟ್ಟಾರೆ ಎರಡು ಕೃತಿಗಳು ಅದ್ಭುತವಾಗಿ ಮೂಡಿಬಂದಿದೆ. ಇನ್ನು ಹಲವಾರು ಕೃತಿಗಳು ಸಾಹಿತ್ಯ ಲೋಕಕ್ಕೆ ಇವರ ಬರಹದಿಂದ ಹೊರಬರಲಿ, ಇವರಿಗೆ ಒಳಿತಾಗಲಿ ಎಂದು ಶುಭ ಹಾರೈಸಿದರು.
ಲೇಖಕಿ ಶ್ರೀಮತಿ ಹೆಚ್.ಎಸ್.ಪ್ರತಿಮಾ ಹಾಸನ್ ರವರು ಇನ್ನು ವಿವಿಧ ರೀತಿಯ ಪ್ರಕಾರಗಳನ್ನು ಮುಂಬರುವ ದಿನಗಳಲ್ಲಿ ರಚಿಸಿ ಸಾಹಿತ್ಯ ಲೋಕಕ್ಕೆ ಲೋಕಾರ್ಪಣೆಗೊಳಿಸಲು ಶ್ರಮಪಡುವುದಾಗಿ ತಿಳಿಸಿದರು. ಕನ್ನಡದ ಸೇವೆ , ಸಾಹಿತ್ಯ ಸೇವೆಯನ್ನು ಕೊನೆಯ ಉಸಿರಿನವರೆಗೂ ಮಾಡುವುದಾಗಿ ತಿಳಿಸಿದರು.
ನಂತರ ಶ್ರೀ ಗಣೇಶ್ ಕಾಸರಗೋಡು, ಶ್ರೀಮತಿ ಗಾಯಿತ್ರಿ ಗಣೇಶ್ ಕಾಸರಗೋಡು, ಶ್ರೀ ಬಂಗಾರಿ ಮಂಜು ಮಾಜಿ ನಗರ ಅಧ್ಯಕ್ಷರು, ಇವರಿಗೆ ‘ಪ್ರತಿಮಾ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ’ದಿಂದ ಪ್ರಥಮ ವರ್ಷದ ವಾರ್ಷಿಕೋತ್ಸವದ ಸಂತಸದಲ್ಲಿ ಸಂಸ್ಥೆಯ ಪರವಾಗಿ ಶ್ರೀಮತಿ ಹೆಚ್.ಎಸ್.ಪ್ರತಿಮಾ ಹಾಸನ್ ರವರ ನೇತೃತ್ವದಲ್ಲಿ ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ನಟ. ನಿರ್ದೇಶಕ, ಗಿರಿ ಕೃಷ್ಣ , ಅಲೋಕ್, ಅನುಷಾ ಯೋಗಸಾವಿತ್ರಿ, ಯಾಕೂಬ್ ಇನ್ನು ಹಲವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.