2,610 total views
ಬಾಲ್ಯದಲ್ಲಿ ಆಟ- ಪಾಠ ಜೊತೆಗೆ ತುಂಟಾಟ ಮಾಡಿದವರೆಲ್ಲ ಬರೋಬ್ಬರಿ 25 ವರ್ಷಗಳ ಬಳಿಕ ಒಂದೆಡೆ ಸೇರಿದ್ದರು. ವಿದ್ಯಾ ಕಲಿಸಿದ ಗುರುಗಳ ಕಂಡು ವಿದ್ಯಾರ್ಥಿಗಳಿಗೂ ಎಲ್ಲಿಲ್ಲದ ಸಂತೋಷ ಈ ಎಲ್ಲಾ ದೃಶ್ಯಗಳು ಕಂಡುಬಂದಿದ್ದು ಸಿರುಗುಪ್ಪ ತಾಲೂಕಿನ ಕರೂರು ಹೋಬಳಿಯ ಉತ್ತನೂರು ಗ್ರಾಮದಲ್ಲಿ . ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 1994-95 ರಿಂದ 1999-2000 ಸಾಲಿನ ಹಳೆಯ ವಿದ್ಯಾರ್ಥಿಗಳಿಂದ ಗುರುಗಳಿಗೆ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ವಿದ್ಯೆ ಕಲಿಸಿದ ಗುರುಗಳನ್ನು ಊರಿನ ತುಂಬಾ ಬೆಳ್ಳಿರಥದಲ್ಲಿ ಅದ್ದೂರಿಯಾಗಿ ವಾದ್ಯಗಳ ಮೂಲಕ ಮೆರವಣಿಗೆಯನ್ನು ಮಾಡಲಾಯಿತು ಹಾಗೂ ಪುಷ್ಪಗಳ ಸುರುಮಳೆಯಿಂದ ಅವರನ್ನು ವೇದಿಕೆಗೆ ಆಹ್ವಾನಿಸಿದರು. ಭೂದಾನಿಗಳು ಜೂಕೂರು ಪಂಪನ ಗೌಡ ಹಾಗೂ ಶಿಕ್ಷಕರು ಸೇರಿ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಪಾದಪೂಜೆಯನ್ನು ಮಾಡಿ ಸನ್ಮಾನಿಸಿ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ನಿರೂಪಣೆಯನ್ನು ಟಿ. ಬಸವರಾಜ, ಪ್ರಾರ್ಥನ ಗೀತೆಯನ್ನು ರಜಿಯಾಬೇಗಂ ಮತ್ತು ಅನ್ನಪೂರ್ಣ, ಕಾರ್ಯಕ್ರಮದ ಸ್ವಾಗತವನ್ನು ಕಾಳಿಂಗಪ್ಪ ಕೆ. ಪಿ, ಪ್ರಾಸ್ತಾವಿಕ ನುಡಿಗಳನ್ನು ಟಿ.ಗಾದಿಲಿಂಗಪ್ಪ. ಕಾರ್ಯಕ್ರಮವನ್ನು ಉದ್ದೇಶಿಸಿ ಶಾಂತಮೂರ್ತಿ ಪಿ ಎಸ್ ಐ ರವರು ಮಾತನಾಡಿ ಬಾಲ್ಯದಲ್ಲಿ ಕಲಿತ ತಮ್ಮಅನುಭವಗಳನ್ನು ನೆನಪಿಸಿಕೊಂಡರು . ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ತಮ್ಮ ಬಾಲ್ಯದ ಅನುಭವಗಳನ್ನು ಹಂಚಿಕೊಂಡರು, ಗುರುಗಳು ಅವಿಸ್ಮರಣೆಯಾಗಿ ವಿವರಣಾತ್ಮಕವಾಗಿ ಹಂಚಿಕೊಂಡರು.
ಶಾಲೆಯ ನಂತರ ವಿದ್ಯಾರ್ಥಿಗಳಿಗೆ ಸಂಜೆಯಲ್ಲಿ (ಟ್ಯೂಶನ್ )ವಿದ್ಯಾ ನೀಡಿದ ಎಸ್.ಈಶ್ವರ ಗೌಡ, ಎ.ಮಲ್ಲಿಕಾರ್ಜುನ ಗೌಡ, ಕೆ. ವೀರೇಶ, ರವರನ್ನು ಸನ್ಮಾನಿಸಿದರು.ಈ ಕಾರ್ಯಕ್ರಮದಲ್ಲಿ ಎ.ಮಹೇಶ್ ಗೌಡ, ವೈ.ನಾಗರಾಜ ಎ.ಎಂ. ವೀರಭದ್ರಯ್ಯ ಸ್ವಾಮಿ,ಎಸ್. ಪಾಲಾಕ್ಷಿ ಗೌಡ,ಬಿ.ಚಾಗಪ್ಪ, ಎ.ಎಂ.ಶರಣಯ್ಯ ಸ್ವಾಮಿ,ಎ. ತಿಮ್ಮಪ್ಪ,ಕೆ.ಅಮರೇಶ್, ಎಂ. ರವಿ,ಉಮೇಶ, ಶಿವನಗೌಡ, ಮುಕ್ಕಣ್ಣ, ಮಂಜುಳಾ, ಸುಶೀಲಮ್ಮ, ಜೆ. ಅಶ್ವಿನಿ, ಎಸ್. ರತ್ನಮ್ಮ ಶಕುಂತಲಮ್ಮ,ಮತ್ತು ಹಳೆ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ವರದಿ ಶೇಖರ್ ಹೆಚ್