2,588 total views
ನರೇಗಾ ಅಂದ ತಕ್ಷಣ ಬಡ ಕೂಲಿ ಕಾರ್ಮಿಕರಿಗೆ ಕೆಲಸ ನೀಡಿ ಹಣ ನೀಡಬೇಕಾಗಿ ಮಹಾತ್ಮ ಗಾಂಧಿ ನರೇಗಾ ಯೋಜನೆ ಅಡಿಯಲ್ಲಿ ನಡೆಯಬೇಕಾದ ಕಾಮಗಾರಿ ಸರಿಯಾಗಿ ನಡೆಸದೆ ಅಕ್ರಮ ವ್ಯಸಗಿದ್ದಾರೆ.. ನೀರು ತುಂಬುತ್ತಿರುವ ಕೆರೆಯನ್ನು ಕಾಮಗಾರಿ ಮಾಡಿರುವುದಾಗಿ ಅಕ್ರಮವಾಗಿ NMR ಪಡೆಯುತ್ತಿದ್ದಾರೆ ಆತ್ಮೀಯ ಬಂಧುಗಳೇ ಇದೆಲ್ಲ ನಡೆಯುತ್ತಿರುವುದು ಅತ್ತಿರದ ಸಾಲಿಗ್ರಾಮದ ತಾಲೂಕಿನ ಕರ್ಪುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಡದ ಹಳ್ಳಿ ಗ್ರಾಮದ. ಹೊಸ ಕಟ್ಟೆ ಅಭಿವೃದ್ಧಿಪಡಿಸುವುದಕ್ಕಾಗಿ ಕಾಮಗಾರಿಯನ್ನು ನಡೆಸಬೇಕಾಗಿತ್ತು ಆದರೆ ಇವರು ಯಾವುದೇ ಕಾಮಗಾರಿಗಳನ್ನು ನಡೆಸದೆ ಅಕ್ರಮವಾಗಿ ತುಂಬಿ ತುಳುಕುತ್ತಿರುವ ಕೆರೆಯ ಮೇಲೆ NMR ತೆಗೆದು ಸರ್ಕಾರಕ್ಕೆ ವಂಚನೆ ಮಾಡುತ್ತಿದ್ದಾರೆ ಈ ವಿಚಾರ ನಮಗೆ ಗಮನಕ್ಕೆ ಬಂದ ಕಾರಣ ಸ್ಥಳಕ್ಕೆ ಹೋಗಿ ಭೇಟಿ ನೀಡಿ ಪರಿಶೀಲನೆ ಮಾಡಿದಾಗ. ಗ್ರಾಮ ಪಂಚಾಯಿತಿ ಅಧ್ಯಕ್ಷರಾದ.ಪ್ರೇಮ ರವರ ಗಂಡ ಸ್ವಾಮಿ. ರವರು ನಾನೆ ಕಾಮಗಾರಿ ಮಾಡುತ್ತಿರುವ ಬಗ್ಗೆ ಒಪ್ಪಿಕೊಂಡಿದರೆ.
ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿ. ಪ್ರತಾಪ್. ಹಾಗೂ ನರೇಗಾ ಇಂಜಿನಿಯರ್ ರವರು ಬಾಗಿ ಆಗಿದ್ದರೆ ಈ ಅಕ್ರಮವನ್ನು ವಿಚಾರಣೆ ನಡೆಸಿದ್ದಕ್ಕೆ ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಅಕ್ರಮವನ್ನು ಮತ್ತಷ್ಟು ಮಾಡುತ್ತೇನೆ ಎಂದು ನಿನಗೆ ತಾಕತ್ತಿದ್ದರೆ ಬಾ ನೀನು ವಿಚಾರಣೆ ಮಾಡಿದರೆ ನಿನ್ನ ಬಿಡುವುದಿಲ್ಲ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷರ ಗಂಡ ಸ್ವಾಮಿರವರು ವರದಿಗಾರನಿಗೆ ಧಮ್ಕಿ ಹಾಕಿದ್ದಾರೆ ಈ ವಿಚಾರದ ಬಗ್ಗೆ ಮಾನ್ಯ ಕಾರ್ಯ ನಿರ್ವಹಾಕ ಅಧಿಕಾರಿಗಳು ಹಾಗೂ ಒಂಬಡ್ಸ್ ಮನ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ನಡೆಯುತ್ತಿರುವ ಅಕ್ರಮವನ್ನು ತಡೆಗಟ್ಟುತರ ಕಾದು ನೋಡಬೇಕಿದೆ