3,690 total views
ಕುಮಟಾ : ತಾಲೂಕಿನ ನೆಲ್ಲಿಕೇರಿ ಶಾಲೆಯಲ್ಲಿ ನಡೆದ ತಾಲೂಕಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಪಟ್ಟಣದ ಸರಸ್ವತಿ ವಿದ್ಯಾಕೇಂದ್ರದ ವಿದ್ಯಾರ್ಥಿಗಳು ಭಾಗವಹಿಸಿದ 18 ಸ್ಪರ್ಧೆಗಳಲ್ಲಿ 13 ರಲ್ಲಿ ಬಹುಮಾನ ಪಡೆಯುವ ಮೂಲಕ ಅಮೋಘ ಸಾಧನೆ ಮಾಡಿದ್ದಾರೆ.
ಒಂದರಿಂದ ನಾಲ್ಕನೇ ತರಗತಿಯ (ಕಿರಿಯ) ವಿಭಾಗದ ವೈಯಕ್ತಿಕ ಸ್ಪರ್ಧೆಯಲ್ಲಿ ದೇಶಭಕ್ತಿ ಗೀತೆ ಸ್ಪರ್ಧೆಯಲ್ಲಿ ಅನಯ್ ಆರ್. ಬಾಳಗಿ, ಛದ್ಮವೇಷದಲ್ಲಿ ಆಜ್ಞಾ ಎಸ್. ಮಾಶಲಕರ್ ಪ್ರಥಮ, ಭಕ್ತಿಗೀತೆ ಸ್ಪರ್ಧೆಯಲ್ಲಿ ಸುಮನಾ ಎಸ್. ಭಟ್ ದ್ವಿತೀಯ, ಸಂಸ್ಕೃತ ಧಾರ್ಮಿಕ ಪಠಣದಲ್ಲಿ ಅದಿತಿ ವಿ. ಭಟ್, ಚಿತ್ರಕಲೆಯಲ್ಲಿ ಮಿಥಾಲಿ ಮಂಜುನಾಥ ನಾಯ್ಕ, ಕ್ಲೇ ಮಾಡಲಿಂಗ್ ನಲ್ಲಿ ಪ್ರಣತ್ ಲೋಕೇಶ್ ಹಳೆಮಠ, ಆಶುಭಾಷಣದಲ್ಲಿ ದೀಪಿಕಾ ಮಹೇಶ ಭಟ್ಟ ತೃತೀಯ ಸ್ಥಾನ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ.
ಇನ್ನು ಐದರಿಂದ ಏಳನೇ ತರಗತಿಯ (ಹಿರಿಯ) ವಿಭಾಗದಲ್ಲಿ ಚಿತ್ರಕಲೆ ಸ್ಪರ್ಧೆಯಲ್ಲಿ ಅಮಿತಕುಮಾರ್ ಜಿ. ನಾಯ್ಕ, ಭಕ್ತಿಗೀತೆಯಲ್ಲಿ ವೃಂದಾ ಕಿಣಿ ಪ್ರಥಮ , ಹಿಂದಿ ಕಂಠಪಾಠದಲ್ಲಿ ಎಮ್. ಆರ್. ಬಿಂದು ದ್ವಿತೀಯ, ಧಾರ್ಮಿಕ ಪಠಣದಲ್ಲಿ ಪ್ರಣವ್ ಗಣೇಶ ಅಡಿ, ಕ್ಲೇ ಮಾಡಲಿಂಗ್ ನಲ್ಲಿ ಸೃಜನ್ ಅಶ್ವಿನಿ ನಾಯ್ಕ, ಮಿಮಿಕ್ರಿಯಲ್ಲಿ ಶ್ರವಣ ಎಚ್ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಆಡಳಿತ ಮಂಡಳಿಯವರು, ಶೈಕ್ಷಣಿಕ ಮಾರ್ಗದರ್ಶಕರು, ಅಂಗಸಂಸ್ಥೆಗಳ ಮುಖ್ಯಶಿಕ್ಷಕರುಗಳು, ಶಿಕ್ಷಕರು ಹಾಗೂ ಸಿಬ್ಬಂದಿಗಳು ಶುಭಹಾರೈಸಿದ್ದಾರೆ.